ಜ್ಯೋತಿಷಿ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ ಪರಾರಿ ಪ್ರಕರಣ- ಪಿಎ ಸೇರಿ ನಾಲ್ವರ ಬಂಧನ

Team Newsnap
2 Min Read

ಬೆಂಗಳೂರಿನ ಕೆಂಗೇರಿ ಬಳಿ ಜ್ಯೋತಿಷಿ ಪ್ರಮೋದ್ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಅಪ್ತ ಸಹಾಯಕಿ ಮೇಘನಾ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಕೆಂಗೇರಿ ಪೊಲೀಸರು ತಮಿಳುನಾಡಿನ ಸೇಲಂನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಮೇಘನಾ ಜ್ಯೋತಿಷಿ ಬಳಿ ಪಿಎ ಆಗಿ ಕೆಲಸ ಮಾಡಿಕೊಂಡಿದ್ದಳು. ಇದನ್ನು ಓದಿ – ಗೆಳತಿ ರಿಯಾ ಚಕ್ರವರ್ತಿ ಗಾಂಜಾ ಖರೀದಿಸಿ ಸುಶಾಂತ್​ ಸಿಂಗ್​ಗೆ ಸರಬರಾಜು

ಈ ವೇಳೆ ಜ್ಯೋತಿಷಿ ಬಳಿ ಸಾಕಷ್ಟು ಚಿನ್ನಾಭರಣ, ಹಣ ಇರೋದನ್ನು ನೋಡಿದ್ದಾಳೆ. ನಂತರ ತಮಿಳುನಾಡು ಮೂಲದ ಓರ್ವ ವ್ಯಕ್ತಿಗೆ ದರೋಡೆಗೆ ಸುಪಾರಿ ನೀಡಿದ್ದಾಳೆ. ಅದರಂತೆ ಕಳೆದ ವಾರ ಜ್ಯೋತಿಷಿ ಮನೆಗೆ ತಂಡ ನುಗ್ಗಿದೆ. ಇದನ್ನು ಓದಿ – ವಿಪಕ್ಷ ನಾಯಕ ಸಿದ್ಧು, ಪ್ರಗತಿಪರ ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ – DGP ಗೆ ದೂರು

ದರೋಡೆ ವೇಳೆ ಮೇಘನಾ ಮತ್ತು ಜ್ಯೊತೀಷಿ ಪ್ರಮೋದ್ ಕೈಕಾಲು ಕಟ್ಟಿ ಹಲ್ಲೆ ಮಾಡಿ ಚಿನ್ನಾಭರಣ ದೋಚಿದ್ದರು. ಈ ಸಂಬಂಧ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಗೆಳತಿ ರಿಯಾ ಚಕ್ರವರ್ತಿ ಗಾಂಜಾ ಖರೀದಿಸಿ ಸುಶಾಂತ್​ ಸಿಂಗ್​ಗೆ ಸರಬರಾಜು

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಡ್ರಗ್ಸ್​ ಸೇವನೆ ಆಯಾಮಾದಲ್ಲಿ ತನಿಖೆ ನಡೆಸಿರುವ ಎನ್​ಸಿಬಿ ಅಧಿಕಾರಿಗಳು ರಿಯಾ ಚಕ್ರವರ್ತಿಯನ್ನು ಮುಖ್ಯ ಆರೋಪಿಯನ್ನಾಗಿ ಮಾಡಿದ್ದಾರೆ.

ರಿಯಾ ಚಕ್ರವರ್ತಿ ಗಾಂಜಾ ತೆಗೆದುಕೊಂಡು ಗೆಳೆಯ ಸುಶಾಂತ್ ಸಿಂಗ್​ಗೆ ನೀಡುತ್ತಿದ್ದಳು ಎಂದು ಎನ್​ಸಿಬಿ ಆರೋಪಿಸಿದೆ.

ರಿಯಾ ಚಕ್ರವರ್ತಿಯೇ ನೇರವಾಗಿ ಗಾಂಜಾ ಖರೀದಿಸಿ ಸುಶಾಂತ್​​ ಸಿಂಗ್ ನೀಡುತ್ತಿದ್ದಳು. ಸುಶಾಂತ್ ಸಿಂಗ್ ಗಾಂಜಾ ಖರೀದಿಸುವ ವೇಳೆಯೂ ಈಕೆ ಹಣ ಪಾವತಿ ಮಾಡಿದ್ದಾಳೆ ಎಂದು ಎನ್​ಸಿಬಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದೆ.

‘ಆರೋಪಿ ಚಕ್ರವರ್ತಿ, ಆರೋಪಿ ನಂ.6 ಸ್ಯಾಮ್ಯುಯೆಲ್ ಮಿರಾಂಡಾ, ಆರೋಪಿ ನಂ.7 ಸೌವಿಕ್ ಚಕ್ರವರ್ತಿ ಮತ್ತು ಆರೋಪಿ ನಂ.8 ದೀಪೇಶ್ ಸಾವಂತ್ ಮತ್ತು ಇತರರಿಂದ ಸುಶಾಂತ್ ಸಿಂಗ್ ಗಾಂಜಾ ಪಡೆದು ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ 34 ಜನರನ್ನು ಆರೋಪಿಯನ್ನಾಗಿ ಮಾಡಿದೆ. ಒಂದು ವೇಳೆ ರಿಯಾ ತಪ್ಪಿತಸ್ಥಳೆಂದು ಸಾಬೀತಾದರೆ ಕನಿಷ್ಠ 10 ವರ್ಷ ಜೈಲು ಶಿಕ್ಷೆಯಾಗಬಹುದು. ಈ ತನಿಖೆಯನ್ನು ಎನ್​ಸಿಬಿ ಅಧಿಕಾರಿಗಳು “ಮಾಟಗಾತಿ ಬೇಟೆ” ಎಂದು ಬಣ್ಣಿಸಿದ್ದಾರೆ

Share This Article
Leave a comment