ಚಿಕ್ಕಮಗಳೂರಿನ ಬಳಿ ಒಂದೇ ನೇಣಿಗೆ ಕೊರಳೊಡ್ಡಿದ ಯುವ ಪ್ರೇಮಿಗಳು

Team Newsnap
1 Min Read

ಪ್ರೇಮಿಗಳಿಬ್ಬರು ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಒಂದೇ ವೇಲ್‍ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಆಲ್ದೂರು ಸಮೀಪದ ಗುಲ್ಲನ್‍ಪೇಟೆಯ ಸತ್ತಿಹಳ್ಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ದರ್ಶನ್ ಚಿಕ್ಕಮಗಳೂರಿನಲ್ಲಿದ್ದ, ಪೂರ್ವಿಕಾ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು. ಇಬ್ಬರು ಪ್ರೇಮಿಗಳಿರಬಹುದು ಎಂದು ಶಂಕಿಸಲಾಗಿದೆ.ಚೀನಾದಲ್ಲಿ ಕೊರೊನಾ ಏರಿಕೆ : ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಎಚ್ಚರಿಕೆ

ವೇಲಿನ ಒಂದು ತುದಿಗೆ ಆಕೆ ಕೊರಳೊಡ್ಡಿದ್ದರೆ, ಮತ್ತೊಂದು ತುದಿಗೆ ದರ್ಶನ್ ನೇಣು ಬಿಗಿದುಕೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆಲ್ದೂರು ಪೊಲೀಸರು ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ತಂದಿದ್ದಾರೆ.

ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರಿಬ್ಬರು 20 ರಿಂದ 23 ವರ್ಷದ ಒಳಗಿನವರು ಮೃತ ಯುವಕನನ್ನು ತಾಲೂಕಿನ ಕಲ್ಲುಗುಡ್ಡೆ ಸಮೀಪದ ಆಣೂರಿನ ದರ್ಶನ್ ಹಾಗೂ ಯುವತಿಯನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನ್‍ಬಾಳು ಮೂಲದ ಪೂರ್ವಿಕಾ ಎಂದು ಗುರುತಿಸಲಾಗಿದೆ. ಆದರೆ, ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Share This Article
Leave a comment