February 5, 2023

Newsnap Kannada

The World at your finger tips!

actor , silver screen , dead

Young Kannada actor Dhanush is no more ಕನ್ನಡದ ಯುವ ನಟ ಧನುಷ್ ಇನ್ನಿಲ್ಲ

ಕನ್ನಡದ ಯುವ ನಟ ಧನುಷ್ ಇನ್ನಿಲ್ಲ

Spread the love

ಸಂಪಿಗೆ ಹಳ್ಳಿ, ಕೊಟ್ಲಲ್ಲಪ್ಪೋ ಕೈ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಕನ್ನಡದ ಯುವ ನಟ ಧನುಷ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಚಿತ್ರೀಕರಣಕ್ಕಾಗಿ ಲಡಾಖ್ ಗೆ ತೆರಳಿದ್ದ ಅವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಆಗದೇ, ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಬೆಂಗಳೂರಿಗೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.ಹಳೇ ಮೈಸೂರಿನಲ್ಲಿ ಅಮಿತ್ ಶಾ ಸೂತ್ರ : ಕಲ್ಯಾಣ ಕರ್ನಾಟಕದಲ್ಲಿ ಮೋದಿ ಮೋಡಿ

ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದ ಶ್ರೀಮುತ್ತುರಾಜ್ ಸಿನಿಮಾಗಾಗಿ ತಮ್ಮ ಹೆಸರನ್ನು ಧನುಷ್ ಎಂದು ಬದಲಾಯಿಸಿಕೊಂಡಿದ್ದರು.

ಪ್ಯಾರ್ ಕಾ ಗೋಲ್ಗುಂಬಜ, ಸ್ನೇಹಿತ, ಶಿವರಾಜ್ ಕುಮಾರ್ ನಟನೆಯ ಲೀಡರ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು. ಪ್ರಮುಖ ಪಾತ್ರಗಳಲ್ಲಷ್ಟೇ ಅಲ್ಲ, ಇತರ ಸ್ಟಾರ್ ನಟರ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ.

error: Content is protected !!