March 11, 2026

Newsnap Kannada

The World at your finger tips!

police 1

ಬೆಂಗಳೂರಿನ ಯುವಜೋಡಿ ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಉಡುಪಿಯಲ್ಲಿ ಆತ್ಮಹತ್ಯೆ

Spread the love

ಬೆಂಗಳೂರಿನ ಆರ್ ಟಿ ನಗರದ ಯುವ ಜೋಡಿಯೊಂದು ಉಡುಪಿಯ ಮಂದಾರ್ತಿಯ ಸಮೀಪದ ಹೆಗ್ಗುಂಜಿಯಲ್ಲಿ ಕಳೆದ ಮಧ್ಯರಾತ್ರಿ ನಂತರ ಕಾರಿಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ, ಯಶವಂತ್ ಯಾದವ್ ಹಾಗೂ ಜ್ಯೋತಿ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು.

ಕಳೆದ ಮಧ್ಯರಾತ್ರಿ ನಂತರ 3 ಗಂಟೆ ವೇಳೆಯಲ್ಲಿ ಸ್ವಿಪ್ಟ್ ಕಾರಿಗೆ ಬೆಂಕಿ ಹತ್ತಿತ್ತು. ಕಾರು ಸಂಪೂರ್ಣವಾಗಿ ಸುಟ್ಟು ಹೋಗಿತ್ತು, ಈ ಕಾರಿನಲ್ಲಿ ಯುವ ಜೋಡಿ ಸುಟ್ಟು ಕರಕಲಾದ ದೇಹ ಪತ್ತೆಯಾಗಿದೆ. ಕಳೆದ ಮೂರು ದಿನಗಳ ಹಿಂದೆ ಕಾಣೆಯಾದ ಪ್ರಕರಣ ಬೆಂಗಳೂರಿನ ಹೆಬ್ಬಾಳ ಫೋಲಿಸ್ ಠಾಣೆಯಲ್ಲಿ ದಾಖಲಾಗಿತ್ತು.

ಇದನ್ನು ಓದಿ : ಫೇಸ್ ಬುಕ್ ನಲ್ಲಿ ಪರಿಚಯ- ಪ್ರೀತಿಯ ನಾಟಕ : ನಾಗಮಂಗಲದ ಯುವಕನಿಗೆ ಯಾಮಾರಿಸಿದ 50ರ ಆಂಟಿ !

ನಿನ್ನೆ ದಿನ ಮಂಗಳೂರಿಗೆ ಆಗಮಿಸಿದ ಯುವ ಜೋಡಿ ಹುಸೇನ್ ಎಂಬುವವರ ಬಳಿ ಸ್ವಿಪ್ಟ್ ಕಾರನ್ನು ಬಾಡಿಗೆ ಪಡೆದು ಉಡುಪಿಗೆ ಆಗಮಿಸಿದ್ದರೆಂದು ಗೊತ್ತಾಗಿದೆ.ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!