ಚುನಾವಣೆ ಸುಳಿವು ಸಿಕ್ಕ ಕೂಡಲೇ ಬಿಜೆಪಿಗೆ ಜನ ಸಾಮಾನ್ಯರ ಬಗ್ಗೆ ಕಾಳಜಿ ಉಕ್ಕುತ್ತೆ. ಜನರೇ ನಮ್ಮ ದೇವರು ಎಂಬ ಬಲವಾದ ನಂಬಿಕೆ ಸೃಷ್ಠಿಯಾಗುವಂತೆ ಬಿಜೆಪಿ ಮಾಡುತ್ತದೆ, ಎಂಬುದು ಅನೇಕ ಬಾರಿ ಸಾಬೀತಾಗಿದೆ.
ಇದನ್ನು ಓದಿ –ಬೆಂಗಳೂರಿನ ಯುವಜೋಡಿ ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಉಡುಪಿಯಲ್ಲಿ ಆತ್ಮಹತ್ಯೆ
ಮುಂದಿನ 9 ವಾರಗಳಲ್ಲಿ ಬೆಂಗಳೂರಿನ ಬಿಬಿಎಂಪಿ , ಜಿಪಂ ತಾಪಂ ಚುನಾವಣೆ ಮಾತ್ರ ದೇಶದ ಇತರ ಮಾಹಾ ನಗರಗಳ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದೇ ತಡ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ , ಸಿಮೆಂಟ್ , ಉಕ್ಕು ಹಾಗೂ ಸಿಲಿಂಡರ್ ಬೆಲೆ ಇಳಿಕೆ ಮಾಡಿರುವ ಹಿನ್ನಲೆ ನೋಡಿದರೆ ಇದೊಂದು ಚುನಾವಣೆ ಗಿಮಿಕ್ ಎಂದು ಸ್ಷಷ್ಟವಾಗಿ ಹೇಳಬಹುದು.
ಜನರ ಚುನಾವಣೆಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಚಾಣಕ್ಯ ನಡೆ ಬಿಜೆಪಿಗೆ ಅರ್ಥವಾಗಿದೆ. ಮಾರ್ಚ್, ಏಪ್ರಿಲ್ ನಲ್ಲಿ ನಡೆದ ಪಂಚ ರಾಜ್ಯಗಳ ಚುನಾವಣೆಗೂ ಮುನ್ನ ಇದೇ ರೀತಿ ಪೆಟ್ರೋಲ್ , ಡಿಸೇಲ್ ದರವನ್ನು ಇಳಿಕೆ ಮಾಡಲಾಗಿತ್ತು. ಚುನಾವಣೆ ಮುಗಿಯುತ್ತಿದ್ದಂತೆ ತೈಲ ಬೆಲೆ ಏರಿಕೆ ಮಾಡಲಾಯಿತು. ಆಗ ಪೆಟ್ರೋಲ್ ಡಿಸೇಲ್ ದರ 100 ರು ಗಡಿದಾಟಿತು. ಈಗ ಸಿಲಿಂಡರ್ ಬೆಲೆ 1000 ರು ದಾಟಿದೆ.
ಈಗ ಮತ್ತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮಾಡುವಂತೆ ಕೋರ್ಟ್ ಹೇಳಿದ ಕೂಡಲೇ ತೈಲ ಬೆಲೆ ಇಳಿಕೆ ಮಾಡಲಾಗಿರುವುದೂ ಕೂಡ ಒಂದು ಗಿಮಿಕ್ ಎನ್ನುವುದು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.
ಎಲ್ಲಿ – ಎಷ್ಟು ದರ?
- ಮುಂಬೈ: ಪೆಟ್ರೋಲ್ 113.33 ರೂ., ಡೀಸೆಲ್ 97.26 ರೂ.
- ಕೋಲ್ಕತ್ತಾ: ಪೆಟ್ರೋಲ್ 106.01 ರೂ., ಡೀಸೆಲ್ 92 ರೂ.
- ಚೆನ್ನೈ: ಪೆಟ್ರೋಲ್ 102.62 ರೂ., ಡೀಸೆಲ್ 94.22 ರೂ.
- ಬೆಂಗಳೂರು: ಪೆಟ್ರೋಲ್ 101.92 ರೂ., ಡೀಸೆಲ್ 87 ರೂ.
- ಗುರುಗ್ರಾಮ್: ಪೆಟ್ರೋಲ್ 97.17 ರೂ., ಡೀಸೆಲ್ 90 ರೂ..
- ಒಡಿಶಾ: ಪೆಟ್ರೋಲ್ 102 ರೂ., ಡೀಸೆಲ್ 94.86 ರೂ.
- ದಕ್ಷಿಣ ಕನ್ನಡ: ಪೆಟ್ರೋಲ್ 101.13 ರೂ., ಡೀಸೆಲ್ 87.13 ರೂ.
- ಬಾದಾಮಿಯ ಕೇರೂರಿನಲ್ಲಿ ನೂಪುರ್ ಶರ್ಮ ವಿವಾದ : ಮೂವರ ಯುವಕರ ಮೇಲೆ ಚಾಕೂವಿನಿಂದ ಇರಿದು ಹಲ್ಲೆ
- ಶಾಸಕ ಜಮೀರ್ ಅಹಮದ್ ಅಕ್ರಮ ಆಸ್ತಿ 87.44 ಕೋಟಿ: ಇಡಿಗೆ ಎಸಿಬಿ ವರದಿ
- ಡಾ. ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನ
- KRSಗೆ 30 ಸಾವಿರ ಕ್ಯೂಸೆಕ್ ಒಳಹರಿವು – ಪ್ರವಾಹದ ಮುನ್ನೆಚ್ಚರಿಕೆ : ಆಣೆಕಟ್ಟೆ ಭರ್ತಿಗೆ 9 ಅಡಿ ಬಾಕಿ
- 18 ದಿನಗಳಲ್ಲಿ 8 ಬಾರಿ ತಾಂತ್ರಿಕ ದೋಷ: ಸ್ಪೈಸ್ ಜೆಟ್ ಗೆ ಡಿಜಿಸಿಎ ನೊಟೀಸ್
More Stories
ಶಾಸಕ ಜಮೀರ್ ಅಹಮದ್ ಅಕ್ರಮ ಆಸ್ತಿ 87.44 ಕೋಟಿ: ಇಡಿಗೆ ಎಸಿಬಿ ವರದಿ
ವೆಸ್ಟ್ ಇಂಡೀಸ್ ತಂಡಕ್ಕೆ ಟೀಂ ಇಂಡಿಯಾ ಪ್ರಕಟ : ಶಿಖರ್ ಧವನ್ ನಾಯಕ – ಕೊಹ್ಲಿ, ರೋಹಿತ್ ಗೆ ವಿಶ್ರಾಂತಿ
ಮೈಸೂರು : ಚಾಮುಂಡಿ ಬೆಟ್ಟಕ್ಕೆ ರೋಪ್ವೇ ನಿರ್ಮಾಣ ಯೋಜನೆ ಕೈಬಿಟ್ಟ ಸರ್ಕಾರ