ಯುವಸಮುದಾಯ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕಿದೆ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ ಹೇಳಿದರು.
ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲಲಿರುವ ಡಾ. ಎಚ್.ಡಿ ಚೌಡಯ್ಯ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ಜನತಾ ಶಿಕ್ಷಣ ಟ್ರಸ್ಟ್, ಜಿಲ್ಲಾ ರಕ್ತನಿಧಿಕೇಂದ್ರ ಮಿಮ್ಸ್, ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಆಯೋಜಿಸಿದ್ದ ನಟ,ನಿರ್ದೇಶಕ ಕಿಚ್ಚ ಸುದೀಪ್ ಹುಟ್ಟುಹಬ್ಬ ಪ್ರಯುಕ್ತ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ದಿನಗಳಲ್ಲಿ ರಕ್ತಕ್ಕೆ ಭಾರಿ ಬೇಡಿಕೆ ಉಂಟಾಗಿದೆ, ಜೀವ ಉಳಿಸುವ ನಿಟ್ಟಿನಲ್ಲಿ ರಕ್ತದಾನಿಗಳು ಹೆಚ್ಚಾಗಬೇಕಿದೆ, ರಕ್ತಕ್ಕೆ ರಕ್ತವೇ ಔಷಧವಾಗಿದೆ ಎಂದು ನುಡಿದರು.
ದಕ್ಷಿಣಭಾರತದ ಖ್ಯಾನ ನಟರಲ್ಲಿ ಕಿಚ್ಚಸುದೀಪ್ ಒಬ್ಬರಾಗಿದ್ದಾರೆ. ಕನ್ನಡತನ ಮತ್ತು ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ವೀಕ್ಷಿಸುವಂತೆ ತಮ್ಮ ಅಭಿನಯದ ಮೂಲಕ ಗಮನ ಸೆಳೆದು ಕೋಟ್ಯಾಂತರ ಅಭಿಮಾನಿಗಳ ಸಂಪತ್ತನ್ನು ಹೊಂದಿದ್ದಾರೆ ಎಂದು ಹೇಳಿದರು.
ಬಳಿಕ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧನಂಜಯ, ಅನೇಕ ರೋಗಿಗಳಿಗೆ ರಕ್ತದ ಅವಶ್ಯಕತೆಯಿದೆ. ಕೋವಿಡ್-೧೯ ದಿನಗಳಲ್ಲಿ ಜನರು ರಕ್ತದಾನ ಮಾಡಲು ಬರುತ್ತಿಲ್ಲ. ಇಂದಿನ ದಿನಗಳಲ್ಲಿ ಅಂಗಾಂಗದಾನ, ರಕ್ತದಾನ ಹೆಚ್ಚಾಗಬೇಕಿದೆ, ಆಕಸ್ಮಿಕ ಮೃತ ವ್ಯಕ್ತಿಯ ಕಣ್ಣು, ದೇಹದ ಅಂಗಗಳ ದಾನ ಮತ್ತೊಬ್ಬರಿಗೆ ಜೀವನದಾನ ಮಾಡುವುದು ಸಮಾಜ ಸೇವೆಯಗುತ್ತದೆ ಎಂದರು.
ನಂತರ ಮಾತನಾಡಿದ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಎ.ಸಿ. ರಮೇಶ್ ಅವರು, ಕಿಚ್ಚ ಸುದೀಪ್ ಅಭಿಮಾನಗಳು ಮತ್ತು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಸುದೀಪ್ ಹುಟ್ಟುಹಬ್ಬ ಅಂಗವಾಗಿ ಬೃಹತ್ ರಕ್ತದಾನ ಆಯೋಜಿಸಿ ದ್ದೇವೆ. ಹೆಚ್ಚು ರಕ್ತಸಂಗ್ರಹ ಮಾಡಿ ದಾಖಲೆ ನಿರ್ಮಿಸುವ ಹಂಬಲ ಸಂಸ್ಥೆಯದ್ದಾಗಿದೆ. ನಾಡಿನುದ್ದಗಲ್ಕೂ ಇರುವ ಕಿಚ್ಚ ಅಭಿಮಾನಿಗಳು ರಕ್ತದಾನದಾನದಲ್ಲಿ ಪಾಲ್ಗೊಂಡು ಮಾನವೀಯತೆ ಮೆರೆಯುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಬರ್ನಾಡಪ್ಪ, ಕಾರ್ಯದರ್ಶಿ ಕೆ.ಎಂ. ಶಿವಕುಮಾರ್, ಮಂಜುನಾಥ್, ಅನುಪಮಾ, ಎಸ್. ನಾರಾಯಣ್,ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಜಿಲ್ಲಾಧ್ಯಕ್ಷ ಎಂ.ಆರ್. ಸುರೇಶ್ ಅಭಿಮಾನಿಗಳಾದ ಶಿವಕುಮಾರ್,ಮಂಗಲ ಎಸ್.ಕುಮಾರ್, ರಮೇಶ್, ಪುನೀತ್, ಬಸವರಾಜ್ ಮತ್ತಿತರರಿದ್ದರು.
More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು