ನಾವು ನಿಮಗೆ ಕೊಟ್ಟಿರೋದು ಕಷ್ಟಪಟ್ಟಿರುವ ದುಡ್ಡು. ಯಾವುದೇ ಬಿಟ್ಟಿ ದುಡ್ಡಲ್ಲ. ಹಣ ತೆಗೆದುಕೊಳ್ಳುವಾಗ ನಿಮಗೆ ಜ್ಞಾನ ಇರಬೇಕಿತ್ತು. ಹಣ ತೆಗೆದುಕೊಂಡ ಮೇಲೆ ಕೆಲಸ ಮಾಡಿಕೊಡಬೇಕೆಂಬ ಪರಿಜ್ಞಾನ ಇರಬೇಕೆಂದು ಜಿಲ್ಲೆಯ ಶೃಂಗೇರಿ ತಾಲೂಕಿನ ಜನ ತಹಶೀಲ್ದಾರ್ ಅಂಬುಜಾ ಅವರಿಗೆ ಕರೆ ಮಾಡಿ ಕ್ಲಾಸ್ ತೆಗೆದು ಕೊಳ್ಳುವ ಹೊಸ ಅಧ್ಯಾಯ ಆರಂಭವಾಗಿದೆ
ತಹಶೀಲ್ದಾರ್ ಅಂಬುಜಾ ಶೃಂಗೇರಿಯಲ್ಲಿ ಹತ್ತಿಪ್ಪತ್ತಲ್ಲ ಬರೋಬ್ಬರಿ 700ಕ್ಕೂ ಅಧಿಕ ಜನರಿಗೆ ಫಾರಂ 94ಸಿ, 94ಸಿಸಿಯ ನಕಲಿ ಹಕ್ಕುಪತ್ರ ನೀಡಿ ಲಕ್ಷಾಂತರ ರೂಪಾಯಿಗಳನ್ನು ಗುಳುಂ ಮಾಡಿದ್ದಾರೆ ಎಂದು ಶೃಂಗೇರಿಯ ಜನ ಹೇಳುತ್ತಿದ್ದಾರೆ.
ನ್ಯಾಯದ ಕುರ್ಚಿ ಮೇಲೆ ಕೂತ ಇವರು ಅನ್ಯಾಯದ ಕಣ್ಣಾಮುಚ್ಚಾಲೆ ಆಟ ಎಂದು ಅತಿಯಾಯಿತು. ಎಸಿಬಿ ದಾಳಿ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ರು. ಜೈಲಿಗೆ ಹೋಗಿ ಬಂದಿದ್ದರು. ಮುಗ್ಧ ಹಳ್ಳಿಗರಿಗೆ ಆವಾಗಲೇ ಗೊತ್ತಾಗಿದ್ದು ಇವ್ರು ಅಂಗೈಯಲ್ಲಿ ಆಕಾಶ ತೋರಿಸಿದ್ದಾರೆ ಎನ್ನುವುದು.
1, 2, 3 ಲಕ್ಷ ಹೀಗೆ ಲಕ್ಷಗಟ್ಟಲೇ ಹಣ ಪಡೆದು ನಕಲಿ ಹಕ್ಕುಪತ್ರ ನೀಡಿ, ನಾವ್ ಸೇಫ್ ಅಂತ ಸುಮ್ಮನ್ನಿದ್ದರು ಅಂಬುಜ.
ಆದರೆ ನಮಗೆ ಸಿಕ್ಕಿರೋದು ನಕಲಿ ಹಕ್ಕುಪತ್ರ ಗೊತ್ತಾಗುತ್ತಿದ್ದಂತೆ ಜನ ತಹಶೀಲ್ದಾರ್‌ಗೆ ಫೋನ್ ಕ್ಲಾಸ್ ತೆಗೆದುಕೊಳ್ಳಲು ಶುರು ಮಾಡಿದ್ದಾರೆ.
ವಾರದ ಹಿಂದಷ್ಟೆ ತಹಶೀಲ್ದಾರ್ ಕಚೇರಿಯಲ್ಲಿ ಕೆಲ ದಾಖಲೆಗಳ ಕಳ್ಳತನವಾಗಿದೆ. ಕಡತ ಕಳ್ಳತನ ಬೆನ್ನಲ್ಲೇ ತಹಶೀಲ್ದಾರ್ ಕಾರು ಚಾಲಕ ವಿಜೇತ್ ಕೂಡ ಆತ್ಮಹತ್ಯೆ ಶರಣಾದ. ಈ ಆತ್ಮಹತ್ಯೆ ಹಿಂದೆ ಅಧಿಕಾರಿಗಳ ಹಾಗೂ ಬ್ರೋಕರ್‌ಗಳು ಇದ್ದಾರೆಂಬ ಆರೋಪ ಕೇಳಿಬಂದಿತ್ತು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು