ಯೋಗ ಕ್ಷೇತ್ರದ ಸಾಧನೆಗಾಗಿ ಸ್ವಾಮಿ ಶಿವಾನಂದ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.125 ವಯಸ್ಸಿನಲ್ಲಿಯೂ ಸ್ಥಿರ ಆರೋಗ್ಯ, ಸದೃಢ ದೇಹವನ್ನು ಹೊಂದಿರುವ ಇವರು ತುಂಬಾ ವಿಭಿನ್ನ ಮತ್ತು ಸರಳ.ಸ್ವಾಮಿ ಶಿವಾನಂದರು ಯೋಗ, ವೇದಾಂತ ಮತ್ತು ವಿವಿಧ ವಿಷಯಗಳ ಕುರಿತು 296 ಪುಸ್ತಕಗಳನ್ನು ಬರೆದಿದ್ದಾರೆ. ಸ್ವಾಮಿ ಶಿವಾನಂದರು ತಮ್ಮ ಜೀವನವನ್ನು ಮಾನವ ಸಮಾಜದ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದಾರೆ.
ಸ್ವಾಮಿ ಶಿವಾನಂದ ಅವರು 1896 ರ ಆಗಸ್ಟ್ 8 ರಂದು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಟ್ಟಮಡೈನಲ್ಲಿ ಜನಿಸಿದರು. 6 ನೇ ವಯಸ್ಸಿನಲ್ಲಿಯೇ ತಾಯಿ ಮತ್ತು ತಂದೆಯನ್ನು ಕಳೆದುಕೊಂಡವರು. ನಂತರ ಪಶ್ಚಿಮ ಬಂಗಾಳದ ನಬದ್ವೀಪ್‍ನಲ್ಲಿರುವ ಗುರೂಜಿಯ ಆಶ್ರಮದಲ್ಲಿ ತಂಗಿದ್ದರು.
ಗುರು ಓಂಕಾರಾನಂದ ಅವರ ಶಿಷ್ಯರಾಗಿ ,1925ರ ಹೊತ್ತಿಗೆ ಗುರುವಿನ ಆಣತಿ ಮೇರೆಗೆ ಪ್ರಪಂಚ ಪರ್ಯಟನೆ ಮಾಡಲು ತೆರಳಿದ್ದರು. ಸುಮಾರು 34 ವರ್ಷಗಳ ಕಾಲ ಇವರು ದೇಶ-ವಿದೇಶಗಳನ್ನು ಸುತ್ತಿದ್ದಾರೆ. ನಂತರ ಯೋಗದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ. ಎಲ್ಲಾ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಶಿಕ್ಷಣದ ಜೊತೆ ಯೋಗವನ್ನು ಒಳಗೊಂಡಿರುವ ಅವರು ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಂಡರು.
ಸದ್ಯ ಅವರು ವಾರಾಣಸಿಯ ದುರ್ಗಾಕುಂಡ್‍ನಲ್ಲಿ ಮನೆಯೊಂದರ ಮೂರನೇ ಮಹಡಿಯಲ್ಲಿ ವಾಸವಾಗಿದ್ದಾರೆ. ಪ್ರತಿದಿನ ಎರಡು ಬಾರಿ ಮೆಟ್ಟಿಲು ಹತ್ತಿ, ಇಳಿಯುತ್ತಾರೆ. ಅವರು ಯಾರದ್ದೂ ಸಹಾಯವಿಲ್ಲದೆ ಮೆಟ್ಟಿಲು ಹತ್ತುತ್ತಾರೆ ಎಂದು ಅವರ ಶಿಷ್ಯಂದಿರು ತಿಳಿಸಿದ್ದಾರೆ.
ಸ್ವಾಮಿ ಶಿವಾನಂದ ಅವರು ಶಿಸ್ತಿನ ಯೋಗದ ಜೊತೆಗೆ, ಅವರ ಆಹಾರ ಪದ್ಧತಿ ಎಣ್ಣೆಯಿಲ್ಲದ ಮತ್ತು ಮಸಾಲೆಗಳಿಲ್ಲದ ಅತ್ಯಂತ ಸರಳವಾದ ಆಹಾರವನ್ನು ಸೇವಿಸುತ್ತಾರೆ. ಅನ್ನ ಮತ್ತು ಬೇಯಿಸಿದ ದಾಲ್ ತಿನ್ನಲು ಇಷ್ಟಪಡುತ್ತಾರೆ. ಅವರು ಹಾಲು ಅಥವಾ ಹಣ್ಣುಗಳನ್ನು ತೆಗೆದುಕೊಳ್ಳುವುದಿಲ್ಲ,
125 ವರ್ಷ ವಯಸ್ಸಿನ ಯೋಗ ದಂತಕಥೆ ಆಗಿರುವ ಸ್ವಾಮಿ ಶಿವಾನಂದ ಅವರು ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದ್ದಾರೆ.
ಈ ಸಮಾರಂಭದಲ್ಲಿ ತುಂಬ ಗಮನಸೆಳೆದವರು ವಾರಾಣಸಿಯ ಯೋಗ ಗುರು ಸ್ವಾಮಿ ಶಿವಾನಂದ ಅವರು ಪ್ರಶಸ್ತಿ ಸ್ವೀಕಾರ ಮಾಡುವ ವೇಳೆ ಇವರು ನಡೆದುಕೊಂಡ ರೀತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಗೌರವ ಸ್ವೀಕರಿಸುವ ಮೊದಲು ಪ್ರಧಾನಿ, ರಾಷ್ಟ್ರಪತಿಗಳ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಯೋಗ ಗುರುವಿನ ಗೌರವಾರ್ಥವಾಗಿ, ಪ್ರಧಾನಿ ಮೋದಿ ತಕ್ಷಣವೇ ನಮಸ್ಕರಿಸಿ ನೆಲವನ್ನು ಮುಟ್ಟಿದರು. ಗುರು ಸ್ವಾಮಿ ಶಿವಾನಂದ ಅವರು ಬಿಳಿ ಕುರ್ತಾ ಮತ್ತು ಧೋತಿಯನ್ನು ಧರಿಸಿ ತುಂಬಾ ಸರಳವಾಗಿ ಕಾಣಿಸಿಕೊಂಡಿದ್ದರು.
125 ನೇ ವಯಸ್ಸಿನಲ್ಲಿಯೂ ಸಹ, ಅವರು ಇನ್ನೂ ಫಿಟ್ ಆಗಿದ್ದಾರೆ. ಯಾವುದೇ ವೈದ್ಯಕೀಯ ತೊಂದರೆಗಳಿಲ್ಲ. ಸೂರ್ಯ ಹುಟ್ಟುವ 3 ಗಂಟೆಗೂ ಮುನ್ನ ಎಚ್ಚರಗೊಳ್ಳುತ್ತಾರೆ. ಅವರ ಆರೋಗ್ಯಕರ ಮತ್ತು ದೀರ್ಘಾವಧಿಯ ಜೀವನವು ಎಲ್ಲರ ಗಮನ ಸೆಳೆಯುತ್ತದೆ.
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
- ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
- ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ