ಯೋಗಿ ಆದಿತ್ಯನಾಥ್ ದೇಶದ ನಂ 1 ಮುಖ್ಯ ಮಂತ್ರಿ ಪಟ್ಟ

Team Newsnap
1 Min Read
credits - ANI

ದೇಶದ ಅತ್ಯುತ್ತಮ ಮುಖ್ಯಮಂತ್ರಿ ಯಾಗಿ 4 ನೇ ಬಾರಿಗೆ ಉತ್ತರ ಪ್ರದೇಶ ಸಿಎಂ ಈ ಬಾರಿ ಆಯ್ಕೆಯಾಗಿದ್ದಾರೆ.

ಇಂಡಿಯಾ ಟುಡೆ ಗ್ರೂಪ್ – ಕಾರ್ವಿ ಇನ್‌ಸೈಟ್ಸ್ ಮೂಡ್ ಆಫ್ ದಿ ನೇಷನ್ ಪ್ರತಿವರ್ಷ ನಡೆಸುವ ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪೈಕಿ ಈ ಬಾರಿ ನಂ.1 ಸ್ಥಾನ ಗಳಿಸಿದ್ದಾರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ.

ಮಾರ್ಚ್‌ನಲ್ಲಿ ನಾಲ್ಕು ವರ್ಷದ ಅಧಿಕಾರಾವಧಿ ಮುಗಿಸಲಿರುವ ಯೋಗಿ ಆದಿತ್ಯನಾಥ(49) ಅವರಿಗೆ ನಾಲ್ಕನೆಯ ಬಾರಿಯೂ ಟಾಪ್‌-1 ಸ್ಥಾನ ಸಿಕ್ಕಿದೆ.ಇವರು ಭಾರತದ ಅತ್ಯಂತ ಕಿರಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರು.2017ರ ಮಾರ್ಚ್‌ನಲ್ಲಿ ಆದಿತ್ಯನಾಥ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಉಳಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ( ಶೇ. 24 ಮತ); ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ( ಶೇ. 15); ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ( ಶೇ. 9); ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ( ಶೇ. 7) ಹಾಗೂಒಡಿಶಾ ಸಿಎಂ ನವೀನ್ ಪಟ್ನಾಯಕ್ ಮತ್ತು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ( ಶೇ. 6) ಮತ ಪಡೆದುಕೊಂಡು ನಂತರದ ಸ್ಥಾನಗಳಿದ್ದಾರೆ.

Share This Article
Leave a comment