ಕೆಆರ್ ಎಸ್ ನಲ್ಲಿ ಯೋಗ ದಿನಾಚರಣೆ – ಅದ್ದೂರಿ ಕಾರ್ಯಕ್ರಮ

Newsnap Team
1 Min Read
Yoga Day at KRS - A lavish event ಕೆಆರ್ ಎಸ್ ನಲ್ಲಿ ಯೋಗ ದಿನಾಚರಣೆ - ಅದ್ದೂರಿ ಕಾರ್ಯಕ್ರಮ

ಮಂಡ್ಯ : ಮಂಡ್ಯ ಜಿಲ್ಲಾಡಳಿತದ ವತಿಯಿಂದ 9ನೇ ಅಂತರರಾಷ್ಟ್ರೀಯ ಬೃಹತ್ ಯೋಗ ಕಾರ್ಯಕ್ರಮವು ಕೃಷ್ಣರಾಜಸಾಗರ ಬೃಂದಾವನ ಉದ್ಯಾನವನದಲ್ಲಿ ಬುಧವಾರ ಬೆಳಿಗ್ಗೆ ಜರುಗಿತು.

ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ದಿವ್ಯ ಸನ್ನಿಧಿಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡುದರು.

ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸೇರಿದಂತೆ ಮಂಡ್ಯ ಉಸ್ತುವಾರಿ ಕಾರ್ಯದರ್ಶಿ ಡಾ. ಪಿ ಸಿ ಜಾಫರ್ ಎಸ್ಪಿ ಯತೀಶ್, ಜಿಪಂ ಸಿಇಒ ,ತಹಶಿಲ್ದಾರ್ ಇತರರು ಉಪಸ್ಥಿತರಿದ್ದರು.

WhatsApp Image 2023 06 21 at 10.18.50 AM

ಸಾವಿರಾರು ವಿದ್ಯಾರ್ಥಿಗಳು ಪೋಷಕರು ಯೋಗದಲ್ಲಿ ಪಾಲ್ಗೊಂಡಿದ್ದರು.ಸಿಎಂ ಸಿದ್ದು ಪತ್ನಿ ಪಾರ್ವತಿಗೆ ತೀವ್ರ ಜ್ವರ : ಮಣಿಪಾಲ್ ಗೆ ದಾಖಲು

WhatsApp Image 2023 06 21 at 10.18.51 AM 1

ಜಿಲ್ಲಾಧಿಕಾರಿ ಡಾ.ಕುಮಾರ್ ಈ ವೇಳೆ ಮಾತನಾಡಿ ಯೋಗದಿಂದ ದೈಹಿಕ – ಮಾನಸಿಕವಾಗಿ ನೆಮ್ಮದಿ ದೊರೆಯುತ್ತದೆ. ಆರೋಗ್ಯವನ್ನು‌ ಹತೋಟಿಯಲ್ಲಿಟ್ಡುಕೊಳ್ಳಲು ಪ್ರತಿನಿತ್ಯ ಒಂದು ಗಂಟೆ ಸಮಯ ಯೋಗಾಭ್ಯಾಸಕ್ಕೆ ಒತ್ತು ಕೊಡಬೇಕು ಎಂದರು.

Share This Article
Leave a comment