ಇಂದು ರಾಜಧಾನಿ ಸೇರಿದಂತೆ ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

Team Newsnap
1 Min Read

ಬೆಂಗಳೂರಿನಲ್ಲಿ ಕಳೆದ ವಾರದಿಂದ ಮಧ್ಯಾಹ್ನ ನಂತರ ಭಾರೀ ಗಾಳಿ, ಮಳೆ ಆಗುತ್ತಿದ್ದು, ಇಂದು ಕೂಡಾ ಭಾರೀ ಮಳೆಯ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ .

ಈಗಾಗಲೇ ಅಂಡರ್‌ಪಾಸ್‌ನಲ್ಲಿ ವಾಹನ ಮುಳುಗಿ ಯುವತಿ ಒಬ್ಬಳು ಹಾಘೂ ರಾಜಕಾಲುವೆಯಲ್ಲಿ ಮೃತಪಟ್ಟಿದ್ದು, ಅಂಡರ್‌ ಪಾಸ್‌ಗಳಲ್ಲಿ ಸಂಚರಿಸುವಾಗ, ವಾಹನ ಚಲಾಯಿಸುವಾಗ, ಮರಗಳಡಿ ರಕ್ಷಣೆ ಪಡೆಯದಂತೆ ಎಚ್ಚರಿಕೆ ನೀಡಲಾಗಿದೆ.

ವರುಣನ ಆರ್ಭಟ ಇಂದು ಸಹ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಭಾರೀ ಮಳೆ ಬೆಂಗಳೂರು ಸೇರಿದಂತೆ, ಬೆಂಗಳೂರು ಗ್ರಾಮಾಂತರ, ಪಶ್ಚಿಮ ಘಟ್ಟದ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಯೆಲ್ಲೋ ಅಲರ್ಟ್ ನೀಡಿರುವ ಕಡೆಗಳಲ್ಲಿ ಬಿರುಗಾಳಿ , ಗುಡುಗಿನ ಜೊತೆಗೆ 64.5 ರಿಂದ 115.5 ಮಿಲಿ ಮೀಟರ್ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಜೂನ್ 15ರ ವರೆಗೂ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ

ಕರಾವಳಿ ಜಿಲ್ಲೆಯ ಕೆಲವು ಕಡೆ ಭಾರೀ ಮಳೆಯಾಗಲಿದ್ದು , ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

Share This Article
Leave a comment