February 25, 2026

Newsnap Kannada

The World at your finger tips!

YADIYURAPPA1

ಜುಲೈ 26 ಕ್ಕೆ ಯಡಿಯೂರಪ್ಪ ರಾಜೀನಾಮೆ ಫಿಕ್ಸ್ ! ಪಕ್ಷ ಹೈಕಮಾಂಡ್ ನಿರ್ಧಾರಕ್ಕೆ ಸಿಎಂ ಬದ್ಧ

Spread the love

ಜುಲೈ 25 ರಂದು ಬಿಜೆಪಿ ಹೈಕಮ್ಯಾಂಡ್ ಸೂಚಿಸುವ ಯಾವುದೇ ನಿರ್ಧಾರಕ್ಕೆ ಬದ್ಧ ಎಂದು ಹೇಳುವ ಮೂಲಕ ಜುಲೈ 26 ರಂದು ಸಿಎಂ‌ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವನ್ನು ಸ್ವತಃ ಯಡಿಯೂರಪ್ಪ ನವರೇ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ, ನೂರಾರು ಮಠಗಳ ಗುರುಗಳೂ ಸೇರಿದಂತೆ ನಂಗೆ ಸರ್ವ ಧರ್ಮಗಳ ಗುರುಗಳು ಆಶೀರ್ವಾದ ಮಾಡಿ ಬೆಂಬಲ ಸೂಚಿಸಿದ್ದಾರೆ. ಬೇರೆ ಯಾವುದೇ ಮುಖ್ಯ ಮಂತ್ರಿಗಳಿಗೆ ಇಷ್ಟೊಂದು ಬೆಂಬಲ‌ ಸಿಕ್ಕಿಲ್ಲ ಎಂದು ಹೇಳಿದರು.

ನನ್ನ ಪರವಾಗಿ ಯಾವುದೇ ನಾಯಕರು, ಕಾರ್ಯಕರ್ತರು ಪ್ರತಿಭಟನೆ ಮಾಡಬೇಡಿ. ಪಕ್ಷದಲ್ಲಿ 75 ವರ್ಷ ವಯಸ್ಸಿನ ವರೆಗೆ ಮಾತ್ರವೇ ಅವಕಾಶವಿದ್ದರೂ ಪಕ್ಷ ನಂಗೆ ಇನ್ನೂ ನಾಲ್ಕು ವರ್ಷ ಹೆಚ್ಚಿನ ಅಧಿಕಾರ ನಡೆಸುವ ಅವಕಾಶ ನೀಡಿದೆ ಎಂದು ತಿಳಿಸಿದರು.

error: Content is protected !!