February 21, 2026

Newsnap Kannada

The World at your finger tips!

BSY,POCSO, crime

ಫ್ರೀಡಂ ಪಾರ್ಕ್​ನಲ್ಲಿ ಸರ್ಕಾರದ ವಿರುದ್ದ ಯಡಿಯೂರಪ್ಪ ಪ್ರತಿಭಟನೆ

Spread the love

ಸರ್ಕಾರದ ವಿರುದ್ದ ಫ್ರೀಡಂ ಪಾರ್ಕ್​ನಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಬೆಳಗ್ಗೆ 10.30 ರಿಂದ ಸಂಜೆಯವರೆಗೆ ಪ್ರತಿಭಟನೆಯನ್ನು ನಡೆಸಲು ಬಿಜೆಪಿ ನಾಯಕರುಗಳು ಮುಂದಾಗಿದ್ದಾರೆ.

ರಾಜ್ಯ ಸರ್ಕಾರ ಚುನಾವಣೆ ವೇಳೆಯಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಇಲ್ಲಿ ತನಕ ಜಾರಿ ಮಾಡದ ಹಿನ್ನಲೆಯಲ್ಲಿ ಬಿಜೆಪಿ ನಾಯಕರುಗಳು ಸದನದ ಹೊರಗೆ ಮತ್ತು ಒಳಗೆ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ನಡೆಸಲು ಮುಂದಾಗಿದ್ದಾರೆ .

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಸಂಸದ ಡಿ.ವಿ ಸದಾನಂದ ಗೌಡ, ಮಾಜಿ ಸಚಿವರು, ಸಂಸದರು, ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ.

error: Content is protected !!