ಕೆಂಗೇರಿಯಿಂದ ಬೈಯಪ್ಪನಹಳ್ಳಿ ತನಕ ಮೆಟ್ರೋ ಸಂಚಾರ ದಲ್ಲಿ ವ್ಯತ್ಯಯ

Team Newsnap
0 Min Read

ಕೆಂಗೇರಿಯಿಂದ ಬೈಯಪ್ಪನಹಳ್ಳಿ ತನಕ ನೇರಳೆ ಮಾರ್ಗದ (Purple Line) ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.  ತಾಂತ್ರಿಕ ಕಾರಣದಿಂದ ಈ ಅವ್ಯವಸ್ಥೆ ಉಂಟಾಗಿದೆ .

ಈ ನಡುವೆ ವಿವಿಧ ಕಡೆಗೆ ತೆರಳುವ ಸಲುವಾಗಿ ಬೆಳಗ್ಗೆಯಿಂದಲೇ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ಈ ಸಮಸ್ಯೆಯಿಂದ ಪರದಾಡುವ ಸನ್ನಿವೇಶ ಕಂಡು ಬಂದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಮ್ಮ ಮೆಟ್ರೋ, ಸಿಗ್ನಲ್ ಸಮಸ್ಯೆಯಿಂದಾಗಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸಿಗ್ನಲ್ ಸರಿ ಮಾಡೋ ಪ್ರಯತ್ನದಲ್ಲಿದ್ದೇವೆ. ಆಗಿರೋ ಸಮಸ್ಯೆಯನ್ನು ಬಗೆಹರಿಸೋ ನಿಟ್ಟಿನಲ್ಲಿ ಟೆಕ್ನಿಕಲ್ ಟೀಮ್ ಕೆಲಸ ಮಾಡುತ್ತಿದೆ ಎಂದು ತಿಳಿಸಿದೆ.

Share This Article
Leave a comment