ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಶಿವಮೊಗ್ಗದ ಸೈಯದ್ ಯಾಸಿನ್‌ನನ್ನು ಪೊಲೀಸರು ಬಂಧಿಸಿ ಪ್ರಾಥಮಿಕ ತನಿಖೆಯ ವೇಳೆ ಆತ ನದಿ ತೀರದಲ್ಲಿ ಸ್ಫೋಟಕವನ್ನು ತಯಾರಿಸಿ ಪರೀಕ್ಷೆ ನಡೆಸುತ್ತಿದ್ದ ಎನ್ನಲಾಗಿದೆ. ಇದನ್ನು ಓದಿ – ನಟಿ ಶ್ರೀಲೀಲಾ ತಾಯಿಯ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
ಶಿವಮೊಗ್ಗದ ಸಿದ್ದೇಶ್ವರ ನಗರ ನಿವಾಸಿ ಸೈಯದ್ ಯಾಸಿನ್ ಜೆಎನ್‌ಎನ್‌ಸಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಧರ. . ಈತ ತನ್ನ ನಿವಾಸದಿಂದ 3-4 ಕಿ ಮೀ ದೂರದಲ್ಲಿರುವ ಪುರಲೆ ಸಮೀಪದ ತುಂಗಾ ನದಿ ತೀರವನ್ನು ಆತನ ಕಾರ್ಯ ಚಟುವಟಿಕೆ ಸ್ಥಾನ ವನ್ನಾಗಿ ಮಾಡಿಕೊಂಡಿದ್ದ. ಇದನ್ನು ಓದಿ – ತಿರುಪತಿ ತಿಮ್ಮಪ್ಪನಿಗೆ ಮುಸ್ಲಿಂ ಉದ್ಯಮಿಯಿಂದ 1 ಕೋಟಿ ರು ದೇಣಿಗೆ
ಕೃಷಿ ತೋಟ ಇರುವ ಕಾರಣ ಕಾಡು ಪ್ರಾಣಿಗಳಿಗೆ ಭಯ ಮೂಡಿಸಲು ಈ ಭಾಗದಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತಿದೆ. ಈ ವಿಷಯದ ಲಾಭ ಮಾಡಿಕೊಂಡಿದ್ದ ಯಾಸಿನ್ ತನ್ನ ಬಾಂಬ್ ಪರೀಕ್ಷೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ತಾನು ತಯಾರಿಸಿದ ಸ್ಫೋಟಕಗಳನ್ನು ಇಲ್ಲಿ ತಂದು ಪರೀಕ್ಷೆ ಮಾಡಿಕೊಳ್ಳುತ್ತಿದ್ದ. ಇಲ್ಲಿನ ನಿವಾಸಿಗಳು ಈತ ಪಟಾಕಿ ಸಿಡಿಸುತ್ತಿದ್ದಾನೆ ಎಂದು ಭಾವಿಸಿದ್ದರು. ಆದರೆ ಪೊಲೀಸರ ತನಿಖೆಯಿಂದ ಈಗ ಅಸಲಿ ಸತ್ಯ ಪ್ರಕಟವಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು