ವಿಶ್ವದಲ್ಲಿ ಪ್ರತಿ ವರ್ಷ 130 ಕೋಟಿ ಟನ್ ಆಹಾರ ಪೋಲು: ವಿಶ್ವಸಂಸ್ಥೆ ಕಳವಳ

Team Newsnap
1 Min Read

ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 130 ಕೋಟಿ ಟನ್ ಆಹಾರ ಪೋಲಾಗುತ್ತಿದೆ. ಶ್ರೀಮಂತ ದೇಶಗಳಲ್ಲದೆ ಬಡ ರಾಷ್ಟ್ರಗಳಲ್ಲೂ ಆಹಾರ ಪೋಲಾಗುತ್ತಿದೆ ಎಂದು ವಿಶ್ವ ಸಂಸ್ಥೆ ಸ್ಥಾಪಿಸಿದ ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ಹೇಳಿದೆ.


ಆಹಾರ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಿ, ಮುಂದಿನ ಪೀಳಿಗೆಗೆ ಉತ್ತಮ ಆಹಾರ ದೊರೆಯುವಂತೆ ಮಾಡುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಆಹಾರ ಪದಾರ್ಥಗಳ ರಕ್ಷಣೆಗೆ ಸರಿಯಾದ ಕ್ರಮ ಕೈಗೊಳ್ಳದಿರುವುದರಿಂದಲೂ ಅಹಾರ ಪದಾರ್ಥಗಳು ಪೋಲಾಗುತ್ತಿರುವುದು ಆಹಾರ ಭದ್ರತೆಯ ಗಂಭೀರ ಸಮಸ್ಯೆ ಎಂದು ವಿಶ್ವ ಸಂಸ್ಥೆ ಅಭಿಪ್ರಾಯಪಟ್ಟಿದೆ.


ಇಂದು (ಅಕ್ಟೋಬರ್ 16) ವಿಶ್ವ ಆಹಾರ ದಿನ. 1945 ರಲ್ಲಿ ವಿಶ್ವ ಸಂಸ್ಥೆ ಸ್ಥಾಪಿಸಿದ ಆಹಾರ ಮತ್ತು ಕೃಷಿ ಸಂಘಟನೆ ನೆನಪಿಗಾಗಿ ಹಾಗೂ ಆಹಾರ ಭದ್ರತೆ ಕುರಿತು ಅರಿವು ಮೂಡಿಸಲೂ ಪ್ರತಿ ವರ್ಷ ಅ.16 ರಂದು ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತಿದೆ.
ವಿಶ್ವದಾದ್ಯಂತ ಆಹಾರ ಭದ್ರತೆಗೆ ಕ್ರಮ ತೆಗೆದುಕೊಳ್ಳುವುದು, ಈ ಕುರಿತು ಹೊಸ ತಂತ್ರಜ್ಞಾನಗಳ ಅಭಿವೃದ್ಧಿ, ಯಾರೊಬ್ಬರೂ ಹಸಿವಿನಿಂದ ಹಾಗೂ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲಬಾರದು ಎಂಬ ಬಗ್ಗೆ ಜಾಗೃತಿ ಉಂಟುಮಾಡುವುದೇ ಈ ದಿನಾಚರಣೆಯ ಪ್ರಮುಖ ಆಶಯ.


1979 ರ ನವೆಂಬರ್‌ನಲ್ಲಿ ಪ್ರಥಮವಾಗಿ ಆಹಾರದಿನವನ್ನು ಆಚರಿಸಲಾಯಿತು. ಪ್ರಸ್ತುತ 150 ಕ್ಕೂ ಹೆಚ್ಚು ದೇಶಗಳು ಈ ದಿನಾಚರಣೆ ಆಚರಿಸುತ್ತಿವೆ.

Share This Article
Leave a comment