December 27, 2024

Newsnap Kannada

The World at your finger tips!

ind vs pak

ವಿಶ್ವ ಸಂಸ್ಥೆಯಲ್ಲಿ‌ ಪಾಕ್ ಉದ್ಧಟತನ; ಭಾರತದ ತಿರುಗೇಟು

Spread the love

ಸಮಯ ಸಿಕ್ಕಾಗಲೆಲ್ಲ ಪಾಕಿಸ್ತಾನ ಭಾರತದ ಆಂತರಿಕ ವಿಷಯಗಳಲ್ಲಿ ತಲೆ ಹಾಕುವ ಉದ್ಧಟತನ ಮಾಡುತ್ತಲೇ ಇರುತ್ತದೆ. ಈಗ ಮತ್ತೆ ಅಂಥದ್ದೊಂದು ಉದ್ಧಟತನವನ್ನು ಪಾಕಿಸ್ತಾನ ವಿಶ್ವ ಸಂಸ್ಥೆಯ ಮಹಾ ಅಧಿವೆಶನದಲ್ಲಿ ಮಾಡಿ ಅದಕ್ಕೆ ತಿರುಗೇಟನ್ನು ಪಡೆದುಕೊಂಡಿದೆ.

ವಿಶ್ವ ಸಂಸ್ಥೆಯ ಮಹಾ ಅಧಿವೇಶನದಲ್ಲಿ‌ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಿಷಯ ಪ್ರಸ್ತಾಪಿಸಿ ಬರೀ ಸುಳ್ಳಿನ ಕಥೆಗಳನ್ನು ಸಭೆಯ ಮುಂದಿಟ್ಟರು.

ಇದಕ್ಕೆ ಪ್ರತಿಯಾಗಿ ಭಾರತದ ರಾಯಭಾರಿ ಮಿಜಿಟೋ ವಿನಿಟೋ ತಕ್ಕ ಉತ್ತರವನ್ನು ನೀಡಿದ್ದಾರೆ.

‘ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸುತ್ತಿರುವ ಪಾಕಿಸ್ತಾನ ಕುಖ್ಯಾತ ಮತ್ತು ಭೂಗತ ಪಾತಕಿಗಳಿಗೆ ಪಿಂಚಣಿಯಂತೆ ಹಣವನ್ನು‌ ನೀಡಿ ಸಾಕುತ್ತಿದೆ. ಅಷ್ಟೇ ಅಲ್ಲ ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಕುಖ್ಯಾತ ಉಗ್ರಗಾಮಿಗಳು ಕೂಡಾ ಪಾಕಿಸ್ತಾನದವೆರೇ ಹೆಚ್ಚು’ ಎಂದು ತಮ್ಮ ಆಕ್ರೋಶವನ್ನು ಹೊರಗೆಡಹುವಿದ್ದಾರೆ.

‘ಪಾಕಿಸ್ತಾನ ಕಳೆದ ವರ್ಷ ಸಂಸತ್ ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಒಸಾಮಾ-ಬಿನ್-ಲಾಡೆನ್ ಅವರನ್ನು ಹುತಾತ್ಮ ಎಂದು ಏಕೆ ಮತ್ತು ಯಾವ ಆಧಾರದ ಮೇಲೆ ಕರೆದರು? ಜಮ್ಮುವಿನಲ್ಲಿ ಹಾಗೂ ಅಫ್ಘಾನ್ ನಲ್ಲಿ ಪಾಕಿಸ್ತಾನದ 40,000 ಉಗ್ರರು ದಾಳಿ‌ ಮಾಡುತ್ತಿರುವದನ್ನು ಇಮ್ರಾನ್ ಅವರೇ ಒಪ್ಪಿಕೊಂಡಿದ್ದಾರೆ’ ಎಂದು ಹೇಳಿ ಮಿಜಿಟೋ ವಿನಿಟೋ ಸಭಾತ್ಯಾಗ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Copyright © All rights reserved Newsnap | Newsever by AF themes.
error: Content is protected !!