ನ್ಯೂಸ್ ಸ್ನ್ಯಾಪ್
ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಭರದಿಂದ ನಡೆಸುತ್ತಿದೆ.
ಈ ಬಾರಿಯ ದಸರಾವನ್ನು, ಸರ್ಕಾರವು ಕರೋನಾ ಹಿನ್ನಲೆಯಲ್ಲಿ ಸರಳವಾಗಿ ಆಚರಿಸುವ ಉದ್ದೇಶವನ್ನು ಹೊಂದಿದ್ದು ಅತ್ಯಂತ ಕಡಿಮೆ ಆನೆಗಳನ್ನು ಬಳಸಲು ಚಿಂತನೆ ನಡೆಸಿದೆ.
ಕೇವಲ 5 ರಿಂದ 6 ಆನೆಗಳನ್ನು ಬಳಸಲು ಯೋಚಿಸಿರುವ ಸರ್ಕಾರದ ಇಂಗಿತದಂತೆ, ಡಿಸಿಎಫ್ ಅಲೆಕ್ಸಾಂಡರ್ ಹಾಗೂ ಇತರ ವೈದ್ಯರ ತಂಡ, ವಿವಿಧ ಆನೆಗಳ ಕ್ಯಾಂಪ್ ಗಳಲ್ಲಿ ಆನೆಗಳ ತಪಾಸಣೆ ನಡೆಸುತ್ತಿದೆ. ಅಂಬಾರಿ ಹೊರುವ ಆನೆಯ ಆಯ್ಕೆಯ ಪ್ರಕ್ರಿಯೆಯನ್ನು ತಂಡ ನಡೆಸುತ್ತಿದ್ದು, ಅರ್ಜುನನಿಂದ ಅಭಿಮನ್ಯುವಿಗೆ ಅಂಬಾರಿಯ ಪಟ್ಟವನ್ನು ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಪಟ್ಟದ ಆನೆಯಾಗಿ ವಿಕ್ರಮ, ನಿಶಾಬೆ ಆನೆಯಾಗಿ ಗೋಪಿ, ಕುಂಕಿ ಆನೆಯಾಗಿ ವಿಜಯ ಹಾಗೂ ಕಾವೇರಿಗಳನ್ನು ಬಳಸುವುದು ಬಹುತೇಕ ಖಚಿತವಾಗಿದೆ. ಇಷ್ಟರಲ್ಲೇ ಅಧಿಕೃತ ಮಾಹಿತಿಯನ್ನು ಆಯ್ಕೆಯ ತಂಡವು ಬಿಡುಗಡೆ ಮಾಡಲಿದೆ.
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ