ಸಿಎಂ ಬೆನ್ನ ಹಿಂದೆ ನಿಂತು ವಿಡಿಯೋ ಮಾಡಿದ್ದು ಯಾರು? ಗೌಪ್ಯ ತನಿಖೆಗೆ ಅದೇಶ?

Team Newsnap
1 Min Read
ಬಾಗಿನ ಅರ್ಪಿಸುತ್ತಿರುವ ಮುಖ್ಯಮಂತ್ರಿಗಳು

ನ್ಯೂಸ್ ಸ್ನ್ಯಾಪ್

ಬೆಂಗಳೂರು

ಗೌರಿ ಹಬ್ಬದ ದಿನದಂದು ಕೆ ಆರ್ ಎಸ್ ನಲ್ಲಿ ಮುಖ್ಯ ಮಂತ್ರಿಗಳು ಬಾಗಿನ ಅರ್ಪಿಸುವ ವೇಳೆ ಸಂಸದೆ ಸುಮಲತಾರ ಬೆನ್ನು ಮುಟ್ಟಿದರು ಎಂದು ಹೇಳಲಾದ ವಿಡಿಯೋ ಮಾಡಿದ ವ್ಯಕ್ತಿ ಅಥವಾ ಅಧಿಕಾರಿ ಯಾರು ಎಂಬುದರ ಬಗ್ಗೆ ಖಾಸಗಿ ಯಾಗಿ ಗೌಪ್ಯ ತೆಯಿಂದ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಗೊತ್ತಾಗಿದೆ.

ಮುಖ್ಯ ಮಂತ್ರಿ ಕಚೇರಿಯಿಂದಲೇ ಆ ವಿಡಿಯೋ ಮಾಡಿದವರು ಯಾರು?
ಅದನ್ನು ಮಾಧ್ಯಮ ಗಳಿಗೆ ಕೊಟ್ಟವರು ಯಾರು? ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದವರು ಯಾರು? ಎಂಬದರ ಬಗ್ಗೆ ಮಾಹಿತಿ ಕಲೆ ಹಾಕಿ ತಪ್ಪಿತಸ್ಥ ರನ್ನು ಶಿಕ್ಪಿಸುವ ಹುಕುಂ ಕೂಡ ಸಿ ಎಂ ಕಚೇರಿಯಿಂದಲೇ ರಹಸ್ಯವಾಗಿ ಹೊರ ಬಂದಿದೆ ಎಂದು ಹೇಳಲಾಗಿದೆ.

ವಿಡಿಯೋ ಮಾಡಿದ 4ನೇ ವ್ಯಕ್ತಿ ಯಾರು?

ಬಾಗಿನ ಅರ್ಪಿಸುವ ದಿನ ಅಣೆಕಟ್ಟೆಯ ಮೇಲೆ ನೀರಾವರಿ ಇಲಾಖೆ ಅಧಿಕಾರಿಗಳೆ ಗುರುತು ಮಾಡಿದ್ದ 3 ಮಂದಿ ವಿಡಿಯೋ, ಫೋಟೋಗ್ರಾಫರ್ ಮಾತ್ರ ಇದ್ದರು. ಅವರುಗಳು ತೆಗೆದ ಚಿತ್ರ, ವಿಡಿಯೋಗಳನ್ನು ಮಾತ್ರ ರಿಲೀಸ್ ಮಾಡಲು ಸೂಚಿಸಲಾಗಿತ್ತು. ಅದರೆ ಸಿಎಂ ಬೆನ್ನ ಹಿಂದೆ ನಿಂತು ಆ ವಿಡಿಯೋ ಮಾಡಿದವರು ಯಾರು ಎಂಬುದೇ ತಲೆನೋವಾಗಿರುವ ಸಂಗತಿಯಾಗಿದೆ.
ವಿಡಿಯೋ ಮಾಡಿದ ಆ ನಾಲ್ಕನೇ ವ್ಯಕ್ತಿ ಯಾರೇ ಅಗಿದ್ದರೂ ಸರಿ ಪತ್ತೆ ಮಾಡಿ ಹುಡುಕಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಅಂತೆ.

ಉದ್ದೇಶಪೂರಕವಾಗಿ ಮಾಡಿದ್ದಲ್ಲ

ಅಂದು ಮುಖ್ಯಮಂತ್ರಿ ಯಡಿಯೂರಪ್ಪ ನವರು ಉದ್ದೇಶಪೂರಕವಾಗಿ ಸಂಸದೆಯವರನ್ನು ಮಟ್ಟುವ ಉದ್ದೇಶ ಇರಲಿಲ್ಲವಾದರೂ ಯಾರೋ ಒಬ್ಬರು ಶೂಟ್ ಮಾಡಿ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ವ್ಯವಸ್ಥಿತವಾಗಿ
ಆ ವಿಡಿಯೋ ಪ್ರಸಾರವಾಗುವಂತೆಯೂ ಮಾಡಿರುವ ಸಾಧ್ಯತೆ ಗಳನ್ನು ತಳ್ಳಿ ಹಾಕುವಂತಿಲ್ಲ. ಈ ಪ್ರಕರಣವು ಬಿಜೆಪಿಗೆ ಹಾಗೂ ಸ್ವತಃ ಸಿಎಂ ಸಾಹೇಬ್ರಿಗೆ ಸಾಕಷ್ಟು ಮುಜುಗರ ಆಗಿರುವ ಹಿನ್ನೆಲೆಯಲ್ಲಿ ಗೌಪ್ಯತೆಯಿಂದ ತನಿಖೆ ಮಾಡಿ ವರದಿ ನೀಡುವಂತೆ ಅದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

Share This Article
Leave a comment