ನಾಳೆ ವಿಶ್ವಕಪ್ ಪೈನಲ್ ಯುದ್ಧ

Team Newsnap
2 Min Read
  • ಸೂಪರ್ ಸಂಡೆ : ಇತಿಹಾಸ ಸೃಷ್ಠಿಗೆ ಭಾರತ ಸಜ್ಜು

ಅಹಮದಾಬಾದ್ : ಭಾರತದ ಅತಿಥ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ‘ಐಸಿಸಿ ವಿಶ್ವಕಪ್’ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಿದೆ

ವಿಶ್ವದ ಅತಿದೊಡ್ಡ ಕ್ರೀಡಾಂಗಣದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಕೂಡಾ ಶುರುವಾಗಿದೆ.

ಟೂರ್ನಿಯುದ್ದಕ್ಕೂ ಗಮನಾರ್ಹ ಪ್ರದರ್ಶನ ಮೂಲಕ 10 ಪಂದ್ಯಗಳ ಗೆಲುವಿನೊಂದಿಗೆ ಸೆಮಿಫೈನಲ್ ತಲುಪಿರುವ ಭಾರತ, ಫೈನಲ್ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಟ್ರೋಫಿ ಎತ್ತಿಹಿಡಿಯುವುದರೊಂದಿಗೆ ‘ಸೂಪರ್ ಸಂಡೆ’ಯಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಭಾರತ ತಂಡ ಕ್ಷಣ ಗಣನೆಯನ್ನು ಎದುರು ನೋಡುತ್ತದೆ .

ಇದು ಕೇವಲ ಗೆಲ್ಲಬೇಕಾದ ಕ್ರಿಕೆಟ್ ಪಂದ್ಯಾವಳಿಯಾಗಿರುವುದಿಲ್ಲ. ಬದಲಿಗೆ ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಸ್ಪಂದಿಸಬೇಕಾದ ಮಹತ್ವದ ಪಂದ್ಯವಾಗಿದೆ. ಹೊರಗಿನ ಪ್ರತಿಕ್ರಿಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರೋಹಿತ್  ಹಾಗೂ ಟೀಂ ಇಂಡಿಯಾ ಆಟಗಾರರು ಪದೇ ಪದೇ ಹೇಳಿದ್ದಾರೆ .

ವಿಶ್ವ ಕಪ್ ಮೂರನೇ ಬಾರಿ ಭಾರತದ ಮುಡಿಗೆ ?

1983 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಕಪಿಲ್ ದೇವ್ ನಾಯಕತ್ವದ ತಂಡ  ಟ್ರೋಫಿ ಮುಡಿಗೇರಿಸಿಕೊಂಡಾಗ ವಿಶ್ವಕಪ್ ನೊಂದಿಗೆ ಜನರ ಹೃದಯ ಬೆರೆಯಿತು. ಅಲ್ಲದೇ, ಮುಂದಿನ ಹಾದಿಯು ನಮ್ಮನ್ನು ಯಾವ ದಿಕ್ಕಿಗೆ ಕರೆದೊಯ್ಯುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ.

2011 ರ ವಿಶ್ವಕಪ್ ಫೈನಲ್‌ನಲ್ಲಿ ಧೋನಿ ಸಿಡಿಸಿದ ಸಿಕ್ಸರ್ ನೊಂದಿಗೆ ಗೆಲುವು ಕೋಟ್ಯಂತರ ಅಭಿಮಾನಿಗಳ ಹೃದಯ ಭಾರತದತ್ತ ವಾಲಿತ್ತು. ಪ್ರತಿಯೊಬ್ಬರು ಭಾರತದ ಪ್ರಾಬಲ್ಯವನ್ನು ಒಪ್ಪಿಕೊಂಡಿದ್ದರು. ಈಗ ರೋಹಿತ್ ಶರ್ಮ ಪಡೆಗೂ ಒಂದು ಟಾಸ್ಕ್ ನೀಡಲಾಗಿದೆ. ಅತೀ ಹೆಚ್ಚು ಬಾರಿ ವಿಶ್ವ ಕಪ್ ಕ್ರಿಕೆಟ್ ನಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡ ಆಸ್ಟೇಲಿಯಾ ತಂಡವನ್ನು ಭಾನುವಾರ ಬಗ್ಗು ಬಡಿಯುವುದು ಒಂದೇ ಗುರಿಯಾಗಿದೆ .

ತಂಡದ ಆಟಗಾರರ ವಿವರ

ಭಾರತ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ , ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್ ಮತ್ತು ಪ್ರಸಿದ್ಧ್ ಕೃಷ್ಣ.

ಆಸ್ಟ್ರೇಲಿಯಾ : ಪ್ಯಾಟ್ ಕಮ್ಮಿನ್ಸ್, ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್, ಕ್ಯಾಮರೂನ್ ಗ್ರೀನ್, ಜೋಶ್ ಇಂಗ್ಲಿಸ್ (ವಿಕೆ) ಅಲೆಕ್ಸ್ ಕ್ಯಾರಿ (ವಿಕೆ) ಸೀನ್ ಅಬಾಟ್.

ಪಂದ್ಯದ ಕಾಲಮಾನ: ಮಧ್ಯಾಹ್ನ 2 ಗಂಟೆಗೆ ಆರಂಭ

Share This Article
Leave a comment