January 7, 2025

Newsnap Kannada

The World at your finger tips!

crime,murder,women

ಬಸ್ಸಿನೊಳಗೆ ಯುವತಿಗೆ ಮಧ್ಯ ಕುಡಿಸಿ ಇಬ್ಬರಿಂದ ಅತ್ಯಾಚಾರ

Spread the love
  • ಗಿಫ್ಟ್ ಕೊಡ್ತೀನಿ ಅಂತ ಪುಸಲಾಯಿಸಿ ಕರೆದೊಯ್ದು ಹೀನ ಕೃತ್ಯ
  • ಒಬ್ಬನ ಬಂಧನ : ಮತ್ತೊಬ್ಬ ಪರಾರಿ

ನಿಲ್ಲಿಸಿದ್ದ ಬಸ್ಸಿನೊಳಗೆ 19 ವರ್ಷದ ಯುವತಿಗೆ ಮದ್ಯ ಕುಡಿಸಿದ ನಂತರ ಆಕೆಯ ಮೇಲೆ ಇಬ್ಬರು ಕಾಮುಕರು ಅತ್ಯಾಚಾರವೆಸಗಿದ ಘಟನೆ ಮಹಾರಾಷ್ಟ್ರದ ಖಾರ್ಗಾರ್ ನಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಓರ್ವನ ಬಂಧನವಾಗಿದೆ. ಮತ್ತೊಬ್ಬ ಪರಾರಿಯಾಗಿದ್ದಾನೆ.

ಓರ್ವನಿಗೆ 22 ವರ್ಷ. ಈತ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇನ್ನೊಬ್ಬನಿಗೆ 19 ವರ್ಷ. ಪಿಜ್ಜಾ ಡೆಲಿವರಿ ಬಾಯ್ ಆಗಿದ್ದಾನೆ. ಆರೋಪಿ ಹಾಗೂ ಸಂತ್ರಸ್ತೆ ಒಂದೇ ಕಟ್ಟಡದಲ್ಲಿ ವಾಸ ಮಾಡುತ್ತಿ ದ್ದರು ಎನ್ನಲಾಗಿದೆ.

ಉಡುಗೊರೆ ಕೊಡಿಸುವ ನೆಪ :

ಫೆಬ್ರವರಿ 3ರಂದು ಆರೋಪಿಯೊಬ್ಬ ಬೈಕ್ ರೈಡ್ ಹೋಗೋಣ, ಹಾಗೆಯೇ ನಿನಗೆ ಉಡುಗೊರೆಯೊಂದನ್ನು ಕೊಡಿಸುವುದಾಗಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಹೀಗೆ ಹೋದಾಗ ಆತ ಒಂದು ಕಡೆ ಬೈಕ್ ನಿಲ್ಲಿಸಿ ಮದ್ಯ ಖರೀದಿ ಮಾಡಿದ್ದಾನೆ. ನಂತರ ಅಂದರೆ ರಾತ್ರಿ 10 ಗಂಟೆ ಸುಮಾರಿಗೆ ಖರ್ಗಾರ್ ನಲ್ಲಿ ಪಾರ್ಕ್ ಮಾಡಿದ್ದ ಬಸ್ಸಿನೊಳಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲದೆ ಆಕೆಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ್ದಾನೆ.

ಮದ್ಯ ಕುಡಿದು ತೇಲಾಡುತ್ತಿದ್ದಾಗ ಅತ್ಯಾಚಾರ ಎಸಗಿದ್ದಾನೆ. ನಂತರ ಆತನ ಗೆಳೆಯನಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಅಲ್ಲದೆ ಆತನೂ ಅತ್ಯಾಚಾರ ಎಸಗಿದ್ದಾನೆ. ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾಳೆ.

ಘಟನೆಯ ಬಳಿಕ ಆಟೋ ಹಿಡಿದು ಮನೆಗೆ ಬಂದಿದ್ದಾಳೆ. ಮರುದಿನ ಪೋಷಕರ ಬಳಿ ನಡೆದ ಘಟನೆ ವಿವರಿಸಿ, ನಂತರ ಖಾರ್ಗರ್ ಪೊಲೀಸರಿಗೆ ಯುವತಿ ಹಾಗೂ ಆಕೆಯ ಪೋಷಕರು ದೂರು ನೀಡಿದ್ದಾರೆ.

ಪೊಲೀಸರು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಇನ್ನೋರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ravi bojegowda 3
Copyright © All rights reserved Newsnap | Newsever by AF themes.
error: Content is protected !!