December 19, 2024

Newsnap Kannada

The World at your finger tips!

police,child,rescue

Women Police who showed humanity by helping the children who have lost their parents! ತಂದೆ - ತಾಯಿ ಕಳೆದುಕೊಂಡ ಮಕ್ಕಳಿಗೆ ನೆರವು ನೀಡಿ ಮಾನವೀಯತೆ ಮೆರೆದ ಮಹಿಳಾ ಪೊಲೀಸ್! #thenewsnap #Latestnews #Police #Children_care #Women #bengaluru #Mandya #Mysuru

ತಂದೆ – ತಾಯಿ ಕಳೆದುಕೊಂಡ ಮಕ್ಕಳಿಗೆ ನೆರವು ನೀಡಿ ಮಾನವೀಯತೆ ಮೆರೆದ ಮಹಿಳಾ ಪೊಲೀಸ್!

Spread the love

ಪೊಲೀಸ್ ಅಧಿಕಾರಿಗಳಲ್ಲಿ ಅನೇಕರು ಸ್ವಾರ್ಥಿಗಳು , ಭ್ರಷ್ಟರು ಇದ್ದಾರೆ. ಆದರೆ ಹೃದಯವಂತರು ಎಲೆ ಮರೆ ಕಾಯಿ ತರಹ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ ಮಾನವೀಯತೆ ತೋರುತ್ತಾರೆ

ಬೆಂಗಳೂರಿನಲ್ಲಿ ಇತ್ತೀಚಗೆ ಸಂಭವಿಸಿದ ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಆಸ್ಪತ್ರೆಯ ಬಿಲ್‌ ಪಾವತಿ ಮಾಡುವ ಮೂಲಕ ಬ್ಯಾಟರಾಯನಪುರ ಠಾಣೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.ಇದನ್ನು ಓದಿ –ನಾಗಮಂಗಲ : ದಂಡಿನ ದೇವಿ ಗ್ರಾಮದ ದೇವಸ್ಥಾನದ ನಗ ನಾಣ್ಯ ದೋಚಿದ್ದ ಮೂವರು ಕಳ್ಳರ ಬಂಧನ – ಎಎಸ್ಪಿ

ಕಳೆದ ವಾರ ಬೈಕ್ ಗೆ ಕಸದ ಲಾರಿ ಡಿಕ್ಕಿ ಹೊಡೆದು ಅಪಘಾತದಲ್ಲಿ ವಿಜಯಕಲಾ ಮೃತ ಪಟ್ಟಿದ್ದರು. ಒಂದು ವಾರದ ನಂತರ ಯೋಗೇಂದ್ ರ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.

ಬ್ಯಾಟರಾಯನಪುರ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ರೂಪ ಹಡಗಲಿ , ಆಸ್ಪತ್ರೆಗೆ ಪ್ರತಿದಿನ ಭೇಟಿ ನೀಡಿ ಯೋಗಕ್ಷೇಮ ವಿಚಾರಣೆ ಮಾಡುತ್ತಿದ್ದರು.

ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು ತಬ್ಬಲಿಯಾಗಿದ್ದರು.

ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬಂತೆ ಸಂಚಾರಿ ಠಾಣೆಯ ಡಿಸಿಪಿ. ಇನ್ಸ್ ಪೆಕ್ಟರ್ ಆಸ್ಪತ್ರೆಯ ಒಟ್ಟು ಬಿಲ್ 5 ಲಕ್ಷ ಪಾವತಿ ಮಾಡಿಸಿ ಜೀರೋ ಬ್ಯಾಲೆನ್ಸ್ ಮಾಡಿಸಿದ್ದಾರೆ. ಪೋಲಿಸ್ ಈ ಮಾನವೀಯ ಗುಣಗಳನ್ನು ಮೆಚ್ಚಲೇಬೇಕು.

Copyright © All rights reserved Newsnap | Newsever by AF themes.
error: Content is protected !!