ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಜೆಡಿಎಸ್​ ನಿರ್ಣಯ

Team Newsnap
1 Min Read
JDS decisides to support Draupadi Murmu ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಜೆಡಿಎಸ್​ ನಿರ್ಣಯ #Thenewsnap #latestnews #Kannada #JDS #HDK #Presidental_election #Draupadi_marma #India #Politics #Bengaluru #Mandya #Mysuru

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಜೆಡಿಎಸ್​ ಸರ್ವಾನುಮತದ ನಿರ್ಣಯ ಕೈಗೊಂಡಿದೆ.

ಈ ವಿಷಯವನ್ನು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಟ್ವೀಟ್​ ಮೂಲಕ ಪ್ರಕಟಿಸಿದ್ದಾರೆ.ಇದನ್ನು ಓದಿ –ತಂದೆ – ತಾಯಿ ಕಳೆದುಕೊಂಡ ಮಕ್ಕಳಿಗೆ ನೆರವು ನೀಡಿ ಮಾನವೀಯತೆ ಮೆರೆದ ಮಹಿಳಾ ಪೊಲೀಸ್! 

ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಕೋವಿಡ್‌ ಪಾಸಿಟಿವ್‌ ಕಾರಣಕ್ಕೆ ನಾನು ವರ್ಚುಯಲ್‌ ವೇದಿಕೆ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡಿದ್ದೆ ಎಂಬುದಾಗಿ ಅವರು ಹೇಳಿದ್ದಾರೆ.

ಎಚ್​.ಡಿ. ದೇವೇಗೌಡ ಪ್ರಧಾನಿಗಳಾಗಿದ್ದಾಗ ಮಹಿಳೆಯರಿಗೆ ಮೀಸಲು ಸೌಲಭ್ಯ ಕಲ್ಪಿಸುವ ಐತಿಹಾಸಿಕ ನಿರ್ಣಯ ಕೈಗೊಂಡಿದ್ದರು. ಪ್ರಪ್ರಥಮ ಬಾರಿಗೆ ಆದಿವಾಸಿ ಮಹಿಳೆಯೊಬ್ಬರು ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಮಾಜಿ ಪ್ರಧಾನಮಂತ್ರಿಯವರ ಆಶಯವೂ ಹೌದು ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ತಮ್ಮ ಉಮೇದುವಾರಿಕೆ ಘೋಷಣೆಯಾದ ಮರುದಿನವೇ ದ್ರೌಪದಿ ಮುರ್ಮು ಅವರು ಹೆಚ್.ಡಿ. ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಬೆಂಬಲ ಕೋರಿದ್ದರು.

ಬೆಂಗಳೂರಿಗೆ ಭೇಟಿ ನೀಡಿದ್ದಾಗ ಸ್ವತಃ ಅವರೇ ಗೌಡರ ನಿವಾಸಕ್ಕೆ ಭೇಟಿ ನೀಡಿ ಮತ ಕೇಳಿದ್ದರು.

ದ್ರೌಪದಿ ಮುರ್ಮು ಅವರ ವ್ಯಕ್ತಿತ್ವ, ಅವರ ಹಿನ್ನೆಲೆ ಹಾಗೂ ಅವರು ಪ್ರತಿನಿಧಿಸುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನಮ್ಮ ಪಕ್ಷ ಬೆಂಬಲ ಘೋಷಿಸಿದೆ. ಇಲ್ಲಿ ಪಕ್ಷಗಳ ಪ್ರಮೇಯವೇ ಇಲ್ಲ. ರಾಷ್ಟ್ರದ ಪರಮೋಚ್ಚ ಸಾಂವಿಧಾನಿಕ ಸ್ಥಾನ ರಾಷ್ಟ್ರಪತಿ ಪದವಿ. ಅದು ಪಕ್ಷ ರಾಜಕಾರಣದ ಚೌಕಟ್ಟನ್ನು ಮೀರಿದ ಹೊಣೆಗಾರಿಕೆ ಎಂದು ಬೆಂಬಲ ನೀಡುತ್ತಿರುವುದಕ್ಕೆ ಕಾರಣವನ್ನು ವಿವರಿಸಿದ್ದಾರೆ.

ನಮ್ಮ ಹೆಮ್ಮೆಯ ಮೂರು ಸೇನಾಪಡೆಗಳ ಮಹಾ ದಂಡನಾಯಕರಾಗಿ ಬುಡಕಟ್ಟು ಸಮುದಾಯದ ಓರ್ವ ಮಹಿಳೆಯೊಬ್ಬರು ಚುಕ್ಕಾಣಿ ಹಿಡಿಯುವುದು ಎಂದರೆ, ಅದು ಐತಿಹಾಸಿಕ ಗರಿಯೇ ಸರಿ. ಸಮಸ್ತ ಮಹಿಳೆಯರಿಗೆ ಮಾತ್ರವಲ್ಲ, ಭಾರತ ಒಪ್ಪಿಕೊಂಡಿರುವ ಪ್ರಜಾಸತ್ತೆಯ ಹೆಗ್ಗಳಿಕೆಯೂ ಹೌದು ಎನ್ನುವ ಮೂಲಕ ಎನ್​ಡಿಯ ಅಭ್ಯರ್ಥಿ ಆಯ್ಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a comment