ಕೆಆರ್‌ಎಸ್ ಡ್ಯಾಮ್ ಮೇಲೆ ನಿಂತು ಸೆಲ್ಫಿ ತೆಗೆಯಲು ಹೋಗಿ ಮಹಿಳೆಯೊಬ್ಬರು ನದಿಗೆ ಬಿದ್ದರು ಆಗ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ನದಿಗೆ ಹಾರಿದ ಘಟನೆ ಶ್ರೀರಂಗಪಟ್ಟಣ ಕೃಷ್ಣರಾಜಸಾಗರ ಅಣೆಕಟ್ಟೆಯ ಬಳಿ ಜರುಗಿದೆ
ಕೆಆರ್‌ಎಸ್‌ನ ಕೆಳ ಸೇತುವೆ ಮೇಲೆ ನಿಂತ ಮೈಸೂರಿನ ಕೂರ್ಗಳ್ಳಿ ನಿವಾಸಿ ಆಶಾ ಸೆಲ್ಫಿ ತೆಗೆಯಲು ಹೋಗಿದ್ದರು.
ಈ ವೇಳೆ ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಪತಿ ಗಣೇಶ್ ಜೊತೆಗೆ ಡ್ಯಾಂ ವೀಕ್ಷಣೆಗೆ ಇವರು ಆಗಮಿಸಿದ್ದರು. ಪತ್ನಿಯನ್ನು ರಕ್ಷಿಸಲು ಪತಿ ಗಣೇಶ್ ಕೂಡ ನದಿಗೆ ಹಾರಿದರು
ಇಬ್ಬರ ಅದೃಷ್ಟ ಚೆನ್ನಾಗಿತ್ತು. ಇಬ್ಬರೂ ಹಾರಿದ್ದನ್ನು ಅಲ್ಲಿದ್ದ ಮೀನುಗಾರರು ನೋಡಿ ಇಬ್ಬರನ್ನೂ ರಕ್ಷಿಸಿದ್ದಾರೆ.
ಸುಮಾರು 50 ಅಡಿ ಕೆಳಗೆ ಬಿದ್ದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು