December 2, 2021

Newsnap Kannada

The World at your finger tips!

ed-milad

ಅ.19 ಕ್ಕೆ ಈದ್ ಮಿಲಾದ್ ಘೋಷಣೆ ಮಾಡಿ ಸರ್ಕಾರ ಆದೇಶ

Spread the love

ಈದ್ ಮಿಲಾದ್ ಹಬ್ಬದ ರಜೆಯನ್ನು ‌ಅ.20ರ ಬದಲು ಅ. 19 ರಂದೇ ಸರ್ಕಾರ ಘೋಷಣೆ ಮಾಡಿದೆ

ಈದ್ ಮಿಲಾದ್ ರಜೆಯನ್ನು ಮೂನ್ ಕಮಿಟಿಯ ತೀರ್ಮಾನದಂತೆ 19-10-2021ರಂದು ಬದಲಿಸಿ ಸಾರ್ವತ್ರಿಕ ರಜೆಯನ್ನು ಘೋಷಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ವೀರಭದ್ರ ಹಂಚಿನಾಳ ಅಧಿಸೂಚನೆ ಹೊರಡಿಸಿದ್ದಾರೆ

2021ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ದಿನಾಂಕ 20-11-2020ರಂದು ಪ್ರಕಟಿಸಲಾಗಿತ್ತು.

ಈ ರಜಾ ದಿನಗಳ ಪಟ್ಟಿಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ದಿನಾಂಕ 20-10-2021ರಂದು ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಲಾಗಿದೆ. ಆದ್ರೇ ಈದ್ ಮಿಲಾದ್ ಹಬ್ಬವನ್ನು ದಿನಾಂಕ 19-10-2021ರಂದು ಆಚರಿಸಲು ಮೂನ್ ಕಮಿಟಿಯು ತೀರ್ಮಾನಿಸಿರುವುದರಿಂದ, ದಿನಾಂಕ 19-10-2021ರಂದು ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿರೋದಾಗಿ ತಿಳಿಸಿದ್ದಾರೆ.

error: Content is protected !!