ಸಾಹಿತ್ಯ

ಮಹಿಳೆಯೆಂದರೆ ಕಮ್ಮಿಟ್‍ಮೆಂಟಾ ?


ಡಾ.ಸುಮಾರಾಣಿ ಶಂಭು

‘ಮಹಿಳೆ’ ಎಂಬ ಪದ ನನಗೆ ಕೆಲವೊಮ್ಮೆ ದ್ವಿರುಕ್ತಿಯಂತೆ ಕಾಣುತ್ತದೆ. ಏಕೆಂದರೆ ‘ಮಹಿ’ ಎಂದರೂ ಭೂಮಿಯೇ….’ಇಳೆ’ ಎಂದರೂ ಭೂಮಿಯೇ ….”ಭೂಮಿ” ತೂಕದ ವ್ಯಕ್ತಿತ್ವವಿರುವುದರಿಂದಲೇ ಸ್ತ್ರೀಯನ್ನು ‘ಮಹಿಳೆ’ ಎಂಬ ಪದದಿಂದ ಉಚ್ಚರಿಸುತ್ತಾರೆಂದು ಬಹಳ ಸಲ ಅನ್ನಿಸಿದ್ದುಂಟು.

‘ವ್ಯಕ್ತಿತ್ವ’ ಎಂದಾಕ್ಷಣ ಒಬ್ಬ ವ್ಯಕ್ತಿ ಹೊಂದುವ ತಾದ್ಯಾತ್ಮ ‘ಗುಣಗಳು’ ನಮಗೆ ಗೋಚರಿಸಿಬಿಡುತ್ತದೆ, ಅದು ಒಳ್ಳೆಯ ವ್ಯಕ್ತಿತ್ವವೋ, ಕೆಟ್ಟ ವ್ಯಕ್ತಿತ್ವವೋ, ಒಟ್ಟಿನಲ್ಲಿ ಒಬ್ಬ ವ್ಯಕ್ತಿಯ ಮಹತ್ ಅನ್ನು ನಿರ್ಧರಿಸುವುದೇ ವ್ಯಕ್ತಿತ್ವ.

‘ಸ್ತ್ರೀ’ ಇಂತಹ ಮಹತ್ ವ್ಯಕ್ತಿತ್ವವನ್ನು ನಿಜವಾಗಿಯೂ ಹೊಂದಿರುವಳೆ ? ಎಂಬ ಪ್ರಶ್ನೆಗೆ ಹಲವು ಉತ್ತರಗಳು ನಮಗೆ ಸಿಗುತ್ತದೆ. ಒಬ್ಬೊಬ್ಬರ ಅಭಿಪ್ರಾಯವೂ ಬೇರೆ-ಬೇರೆ ಅಲ್ಲವೇ ? ಶತಶತಮಾನಗಳಿಂದಲೂ ಸ್ತ್ರೀಯು ಶೋಷಣೆಗೆ ಬಳಸಲ್ಪಡುವ ಸಾಧನವಾಗಿಬಿಟ್ಟಿದ್ದಾಳೆ, ಅವಳ ಮೇಲಿನ ನಿರ್ಬಂಧದ, ಅವಳ ಜೀವನದ ಅಪಮೌಲ್ಯೀಕರಣದ ಬುನಾದಿಯಾಗಿ ಸಮಾಜ ಜೈವಿಕ ಸ್ವರೂಪವನ್ನು ಬಳಸಿಕೊಂಡುಬಿಟ್ಟಿತು.

ಹೆಣ್ಣು ಗಂಡಿನ ನಡುವಿನ ಜೈವಿಕ ವ್ಯತ್ಯಾಸ ಎಲ್ಲ ಲಿಂಗಾಧಾರಿತ ನೀತಿಯ ಮೂಲ ನೆಲೆ. ಈ ಜೈವಿಕ ಭಿನ್ನತೆಯನ್ನು ಮಾತ್ರ ಸ್ವೀಕರಿಸಿದ್ದರೆ ಸಮಸ್ಯೆ ಖಂಡಿತವಾಗಿಯೂ ಉದ್ಭವಿಸುತ್ತಿರಲಿಲ್ಲ, ಆದರೆ ಪುರುಷ ದೇಹವು ಸಾಮಾನ್ಯ ಮತ್ತು ಶ್ರೇಷ್ಠ ಎಂಬ ಕಲ್ಪನೆಯ ಹಿನ್ನೆಲೆಯಲ್ಲಿ ಭಿನ್ನತೆಯು ಕೀಳೆಂದು ಪರಿಗಣಿಯವಾಯ್ತು ಹಾಗೂ ಆ ಮೂಲಕ ಅವಳನ್ನು ಹಿಂದೆ-ಹಿಂದೆ ತಳ್ಳಲು ಅದೊಂದು ನೆಪವಾಯಿತು. ಈ ಸ್ಥಿತಿಯನ್ನು ಹಾಗೆಯೇ ಮುಂದುವರೆಸಬಯಸುವವರು ‘ಅವಳ ದೇಹವೇ ಅವಳ ವಿಧಿ’ ನಾವು ಅದನ್ನು ಬದಲಿಸಲಾಗದು ಎಂದುಬಿಟ್ಟರು.

ಇತ್ತೀಚೆಗೆ ಪಶು ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಪ್ರಕರಣವನ್ನು ನಾವು ಗಮನಿಸಿದರೆ ರಟ್ಟೆಯ ಬಲವೇ ಬಲವೆಂಬ ಹಿನ್ನೆಲೆಯಲ್ಲಿ ಪುರುಷ ಮಹಿಳೆಯ ಮೇಲೆ ಆಕ್ರಮಣಶೀಲನಾಗುವ ರೀತಿ ನಿಜವಾಗಿಯೂ, ಆಕೆಗೆ ಪ್ರತಿರೋಧ ಶಕ್ತಿ ಇಲ್ಲವೆಂಬ ‘Superiority Complex’ ನಿಂದ ಎಂದು ಭಾಸವಾಗುತ್ತದೆ. ಹೆಣ್ಣು ಪುರುಷನಿಗಿಂತ ದೈಹಿಕವಾಗಿ ದುರ್ಬಲಳಾದರೂ ಮಾನಸಿಕವಾಗಿ ಶ್ರೇಷ್ಠಳಾಗಿರುತ್ಥಾಳೆ, ಅದು ಸಾಬೀತಾಗಿದೆ ಕೂಡ. ನಾಲ್ಕಾರು ಕೆಲಸಗಳನ್ನು ಮಾಡುವ ಧೀ:ಶಕ್ತಿ ಆಕೆಗಿರುತ್ತದೆ.

ಆದರೆ ಮನುಷ್ಯನ ಜೀವನಕ್ರಮ, ಅಭ್ಯಾಸ, ಉದ್ಯೋಗಗಳು ಮನುಷ್ಯನ ದೈಹಿಕ ಶಕ್ತಿಯ ಮೇಲೆ ಪ್ರಭಾವ ಬೀರಿಬಿಡುತ್ತದೆ. ಸಂಸ್ಕøತಿಯ ವಿಭಿನ್ನ ಕಾಲಘಟ್ಟಗಳು ನಿರೀಕ್ಷಿಸುವ ಜೈವಿಕ ಬಲ ಒಂದೇ ಬಗೆಯಾಗಿರುವುದಿಲ್ಲ. ಜೈವಿಕ ಮೌಲ್ಯದ ಅಪಮೌಲ್ಯೀಕರಣ, ಅಪಮೌಲ್ಯಮಾಪನ ಆಕೆಯ ಮಾನಸಿಕ ಶಕ್ತಿಗೂ ವ್ಯಾಪಿಸಿತು.

ಮಾನಸಿಕ ಶಕ್ತಿಯನ್ನು ಗುರುತಿಸಿಕೊಳ್ಳಲು, ಪೋಷಿಸಲು ಒಂದು ಅವಕಾಶ, ವಾತಾವರಣ ಅಗತ್ಯವಿರುತ್ತದೆ, ಅಂಥ ವಾತಾವರಣವೇ ಇಲ್ಲದಿದ್ದರೆ ಹೆಂಗಸಿನ ಅಬೌದ್ಧಿಕ, ಆಸಕ್ತಿಗಳು ಚಿಗುರಲು, ಬೆಳೆಯಲು ಅವಕಾಶವನ್ನೇ ಕೊಡದಿದ್ದರೆ ಅದು ಬೆಳೆಯುವುದು ಹೇಗೆ ? ‘ಹೆಂಗಸಿನ ಬುದ್ದಿ ಪ್ರಳಯಾಂತಕ’ವೆಂದು ಒಂದು ಕಡೆ, ‘ಹೆಂಗಸಿನ ಬುದ್ದಿ ಮೊಣಕಾಲಿನ ಕೆಳಗೆಂದು’ ಮತ್ತೊಂದು ಕಡೆಯೂ ಹೇಳಲಾಯಿತು. ಆವಕಾಶ ವಂಚನೆಯಿಂದಾಗಿ ನಷ್ಟ ಒಂದೆಡೆಯಾದರೆ, ಗಂಡಸಿನ ಹಾಗೆ ಅವಳ ಬುದ್ದಿಶಕ್ತಿಯಿಲ್ಲವೆಂಬ ಆರೋಪ ಮತ್ತೊಂದೆಡೆ. ಅಂದರೆ ತರ್ಕಬದ್ದವಾದ ವ್ಯಾವಹಾರಿಕವಾದ, ವಿಶ್ಲೇಷಣಾತ್ಮಕವಾದ ಬುದ್ದಿ ಗಂಡಸಿನದು ಎಂದು ಭಾವಿಸಿದ್ದೇವೆ. ಒಪ್ಪಿಯೂ ಬಿಟ್ಟಿದ್ದೇವೆ. ಆದರೆ ಹೆಂಗಸಿನ ಮಾನಸಿಕ ಶಕ್ತಿ ಹೆಚ್ಚು ಅಂತರ್‍ದೃಷ್ಠಿಯುಳ್ಳದ್ದು, ಸಂಶ್ಲೇಷಣಾತ್ಮಕವಾದದ್ದೂ ಆಗಿದೆ. ಈ ಗುರುತಿಸುವಿಕೆ ನಡೆದಿರುವುದು ಕೂಡ ಈಗೀನ ಸಂಸ್ಕøತೀಕರಣ, ಸಾಮಾಜಿಕರಣದ ಉತ್ಪನ್ನಗಳ ವ್ಯಕ್ತಿಗಳನ್ನು ಆಧರಿಸಿಯೇ ಎಂಬುದೂ ಸಹ ಈ ಸಂಧರ್ಭದಲ್ಲಿ ನೆನೆಯಬೇಕಾದ ಅಂಶ, ಒಂದೊಮ್ಮೆ ಸಮಾನ ಅವಕಾಶ, ಅಭಿನ್ನ ವಾತಾವರಣ ದೊರೆತಾಗಲೂ ಸಹ ಈ ವೈಶಿಷ್ಟ್ಯ, ಭಿನ್ನತೆಗಳನ್ನು ಪುರುಷನ ಮಾನದಂಡದಿಂದ ಏಕೆ ಅಳೆದು ತೂಗಬೇಕು ? ನಮಗೆ ಸ್ವತಂತ್ರ ನೆಲೆಯಿಲ್ಲವೆ ? ಬೆಲೆಯಿಲ್ಲವೆ ? ಸಾಮಥ್ರ್ಯವಿಲ್ಲವೆ ? ಎನಿಸುತ್ತದೆ.

ಕೋಪ ಬರುವುದು ಸಹಜವೇ, ಆದರೆ ‘Adjustment’ ಎಂಬ ಪದ ನಮ್ಮ ಪೂರ್ವಿಕರು ಹೇಳಿಕೊಟ್ಟ ಪಾಠ. ಆ ಗುಂಗಿನಲ್ಲೇ ಬದುಕು ದೂಡುತ್ತಿದ್ದೇವೆ, ಎಷ್ಟೋ ಮನೆಗಳಲ್ಲಿ ‘ಗಂಡು’ ಹಾಕಿದ ಲಕ್ಷಣರೇಖೆಯನ್ನು ಸ್ತ್ರೀ ದಾಟುವಂತಿಲ್ಲ, ಸ್ತ್ರೀಯ ಊಟ, ಬಟ್ಟೆ, ಅಲಂಕಾರ ಎಲ್ಲವೂ ನಿರ್ಧಾರವಗುವುದು ಪುರುಷನ ಇಚ್ಚೆಯ ಮೇರೆಗೆ ಎಂದರೆ ತಬ್ಬಿಬ್ಬಾಗಬಹುದು.

ನಮ್ಮ ಕಣ್ಣೆದುರಿಗೆ ಹಲವಾರು ಘಟನೆಗಳು ನಡೆದುಬಿಡುತ್ತವೆ, ಒಂದು ಘಟನೆಯನ್ನು ಪ್ರಸ್ತಾಪಿಸಲು ಇಚ್ಚಿಸುವೆ. ಆಕೆ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಪ್ರಾಧ್ಯಾಪಕಿ 50 ವರ್ಷ ಆಸುಪಾಸಿನವಳು, ಸುಮಾರು ಒಂದು ಲಕ್ಷ ಸಂಬಳ ತೆಗೆದುಕೊಳ್ಳುತ್ತಾಳೆ, ಆರ್ಥಿಕ ಸ್ವಾವಲಂಬಿ, ಬೆಳಿಗ್ಗೆ ವಿ.ವಿ,ಗೆ ಹೊರಡುವ ಮುಂಚೆ ಮನೆಯವರಿಗೆಲ್ಲಾ ತಿಂಡಿ-ಅಡುಗೆ ಮಾಡುತ್ತಾಳೆ. ನಂತರ ವಿ.ವಿ. ಯಲ್ಲಿ ಪಾಠ ಪ್ರವಚನ. ಮನೆಗೆ ಬಂದ ಮೇಲೆ ಮತ್ತೆ ಸೇವೆ, ಇವಿಷ್ಟೆ ಆಗಿದ್ದರೆ ನಾನು ಇಲ್ಲಿ ಅವರ ವಿಷಯ ಹೇಳಬೇಕಿರಲಿಲ್ಲ, ಮನೆಗೆ ಬಂದೊಡನೆ ನಿವೃತ್ತಿ ಹೊಂದಿರುವ ಆಕೆಯ ಪತಿಯಿಂದ ನಿತ್ಯ ಬೈಗುಳ, ಜೊತೆಗೆ ಹೊಡೆಯುವ ಅಭ್ಯಾಸ. ಆಕೆಯ ಜೀವನ ರೋಸಿಹೋಗಿದೆ. ಆದರೆ ಸಾವು ಬರುವುದಿಲ್ಲ, ಸಮಾಜಕ್ಕೆ ಮಾದರಿಯಾಗಬೇಕಾದ, ಸಮಾಜಕ್ಕೆ ಮುಖಾಮುಖಿಯಾಗಿ ದಿನನಿತ್ಯ ತಿದ್ದು, ತೀಡುವವಳಿಗೆ ದಿನವೂ ಹಲ್ಲೆ. ಆಕೆ ಮಾನಸಿಕವಾಗಿಯೂ ಜರ್ಜರಿತಳಾಗಿಬಿಟ್ಟಿದ್ದಾಳೆ, ಮನೆ ಮಂದಿಗೋ ಅಥವಾ ಸಮಾಜಕ್ಕೋ ಹೇಳೋಣವೆಂದರೆ ಮಾನಮರ್ಯಾದೆಯ ಪ್ರಶ್ನೆ. ಜೊತೆಗೆ Commitment ಪ್ರಶ್ನೆ. ಇಂತಹ ಎಷ್ಟೋ ಉದಾಹರಣೆಗಳು ನಮ್ಮ ಕಣ್ಮುಂದಿವೆ, ಆದರೆ Highlight ಆಗೋಲ್ಲ.

‘ಗಂಡು’ ಪ್ರಾಬಲ್ಯ ಸಾಧಿಸಿದ್ದು ಹೀಗೆಯೇ ! ಹೆಣ್ಣಾದವಳು ಪ್ರತಿರೋಧಿಸಬಾರದು, ಪತಿಯೇ ಪರದೈವವೆನ್ನಬೇಕು ಎಂಬ ಮೌಲ್ಯಾಧಾರಿತ ನಿರ್ಬಂಧವನ್ನು ಹೇರಿಬಿಟ್ಟಿತು.
ಈ ನಿರ್ಬಂಧ ಹೇರುವಿಕೆಯಲ್ಲಿ ಗಂಡನ ತಾಯಿ ಕೂಡ ಬಾಗಿಯಾಗಿಬಿಟ್ಟಿದ್ದು ವಿಷಾಧನೀಯವಷ್ಟೇ ! ಏನೇ ಮಾಡಿದರೂ ಗಂಡ ತಾನೇ…..! ಆತ ತನ್ನ ಹೆಂಡತಿಗೆ ಹೊಡೆಯುವುದು ಆತನ ಹಕ್ಕಲ್ಲವೇ ?! ಎಂಬ ಅಸಹ್ಯಕರವಾದ ಪ್ರಶ್ನೆಯನ್ನು ಎಲ್ಲರ ತಲೆಯಲ್ಲೂ ಶಾಶತ್ವವಾಗಿ ನಿಲ್ಲುವಂತೆ ಮಾಡಿಬಿಟ್ಟರು.

‘ಸ್ತ್ರೀ’ ವಿದ್ಯಾವಂತೆಯಾಗುತ್ತಿದ್ದಾಳೆ, ವಿವಿಧ ರಂಗಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ, ಆದರೆ ಇಂತಹ ಹದಗೆಟ್ಟ ಸಮಾಜದಲ್ಲಿ ಉಸಿರಾಡಲಾಗದೆ ಒದ್ದಾಡುತ್ತಿದ್ದಾಳೆ. ನಗರದಲ್ಲಿ ವಾಸಿಸುತ್ತಿರುವ ಎಷ್ಟೋ ಹೆಣ್ಣುಮಕ್ಕಳಿಗೆ ಇಂತಹ ಪರಿಸ್ಥಿತಿ ಬರುತ್ತಿಲ್ಲವೆಂದು ಮೇಲ್ನೋಟಕ್ಕೆ ತೋರುತ್ತದೆ. ಆದರೆ ದೌರ್ಜನ್ಯ ಮಾತ್ರ ರೂಪಾಂತರವಾಗುತ್ತಿದೆಯೇ ಹೊರತು ಕಡಿಮೆಯಂತೂ ಆಗಿಲ್ಲ.

‘ಸ್ತ್ರೀ’ ಹೆಚ್ಚು ಮಾತನಾಡಿದರೆ ಘಟವಾಣಿ, ಗಂಡುಬೀರಿ, ಬಜಾರಿ ಎಂದೆಲ್ಲಾ ಹಂಗಿಸುತ್ತಾರೆ, ಮಾತನಾಡÀದಿದ್ದರೆ ತುಂಬಾ ಒಳ್ಳೆಯ ಹುಡುಗಿ ಎನ್ನುತ್ತಾರೆ. ದೌರ್ಜನ್ಯದ ವಿರುದ್ದ ದನಿಯೆತ್ತಿದರೆ ‘ತಪ್ಪು’ ಎಂಬ ಭಾವನೆಯೇ ಸಮಾಜದ್ದು ! ಹಾಗಾಗಿಯೇ ಎಷ್ಟೋ ಸರ್ಕಾರಿ ಮಹಿಳಾ ಅಧಿಕಾರಿಗಳು ಮಾತನಾಡರದೇ ಆತ್ಮಹತ್ಯೆಗೆ ಶರಣಾಗಿರುವುದು !

‘ಸಮಾಜ’ ಎಂದ ಮೇಲೆ ಸ್ತ್ರೀ-ಪುರುಷ ಇಬ್ಬರೂ ಜೋಡೆತ್ತುಗಳಿದ್ದಂತೆ, ಸರಿಸಮಾನವಾಗಿ ಹೋದರೆ ಮಾತ್ರ ದಾರಿ ಸವೆಸಬಹುದು, ‘ಎತ್ತು ಏರಿಗೆಳೀತು…..ಕೋಣ ನೀರಿಗೆಳೀತು’ ಎಂಬಂತೆ ವರ್ತಿಸಿದರೆ…..’ವಿಘಟನೆ’ ಕಟ್ಟಿಟ್ಟ ಬುತ್ತಿ. ಇಲ್ಲಿ ಯಾರು ಮೇಲಲ್ಲ……ಯಾರು ಕೀಳಲ್ಲ….. “ನಾನು” ಎಂಬುದು ಯಾವಾಗ ಎದುರಾಗುತ್ತದೋ…. ಅಲ್ಲಿಗೆ ಸರ್ವನಾಶ ಪ್ರಾರಂಭ ! ಹಾಗಾಗಿಯೇ ಅದೆಷ್ಟು ಸಂಸಾರಗಳು ಬೀದಿಗೆ ಬದ್ದಿವೆ, ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಕೂಡಿ ಬಾಳಿದರೆ ಸ್ವರ್ಗ ಸುಖವೆಂಬ ಕಲ್ಪನೆಯಂತೆ ನಾವಿದ್ದರೆ ಎಷ್ಟು ಚೆಂದವಲ್ಲವೇ ?!

Team Newsnap
Leave a Comment

View Comments

Share
Published by
Team Newsnap

Recent Posts

ಕರ್ನೂಲಿನಲ್ಲಿ ಭೀಕರ ರಸ್ತೆ ಅಪಘಾತ: ಮಂಡ್ಯದ ನಟಿ `ಪವಿತ್ರ ಜಯರಾಂ’ ಸಾವು

ಬೆಂಗಳೂರು : ತೆಲುಗಿನ 'ತ್ರಿನಯನಿ' ಧಾರಾವಾಹಿಯಲ್ಲಿ ಜನಪ್ರಿಯರಾಗಿರುವ ಕನ್ನಡತಿ, ಮಂಡ್ಯದ ಹನಕೆರೆ ಪವಿತ್ರ ಜಯರಾಂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲು… Read More

May 12, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 12 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 67,000 ರೂಪಾಯಿ ದಾಖಲಾಗಿದೆ. 24… Read More

May 12, 2024

ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು

ನಮ್ಮ ಪೋಲಿಸರು ಸಮರ್ಥರಿದ್ದಾರೆ ⁠ಬಿಜೆಪಿಯವರು ಯಾವತ್ತಾದರೂ ಸಿಬಿಐ ತನಿಖೆ ಕೊಟ್ಟಿದ್ದಾರಾ ? ಬೆಂಗಳೂರು : ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ… Read More

May 10, 2024

ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ

ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್​ಎಸ್​ಎಲ್​ಸಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ… Read More

May 10, 2024

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ

ಮುಂಬೈ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ… Read More

May 10, 2024

ಕ್ರೇಜಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂ

ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರ ವರೆಗೂ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು… Read More

May 10, 2024