September 27, 2022

Newsnap Kannada

The World at your finger tips!

siddu,women,money

A Muslim woman threw the 2 lakh compensation money given to her by Siddu! ಸಿದ್ದು ಕೊಟ್ಟ 2 ಲಕ್ಷ ಪರಿಹಾರದ ಹಣವನ್ನು ಅವರ ಮೇಲೆಯೇ ಎಸೆದ ಮುಸ್ಲಿಂ ಮಹಿಳೆ! #thenewsnap #Latestnews #Siddu #Congress #Women #Money #COmpensation #India #Bengaluru #Mandya #Mysuru

ದುಡ್ಡು ಜಾರಿ ಕೆಳಗೆ ಬಿತ್ತು ಸಾರ್ … ಸಿದ್ದರಾಮಯ್ಯರ ಕ್ಷಮೆ ಕೋರಿದ ಮುಸ್ಲಿಂ ಮಹಿಳೆ

Spread the love

ಬಾದಾಮಿಯ ಕೆರೂರು ಘರ್ಷಣೆ ಗಾಯಾಳುಗಳಿಗೆ ಸಾಂತ್ವನ ಹೇಳಿ, ಪರಿಹಾರವಾಗಿ ಕೊಟ್ಟಿದ್ದ 2 ಲಕ್ಷ ರೂ. ಹಣವನ್ನು ಮುಸ್ಲಿಂ ಮಹಿಳೆ ಸಿದ್ದರಾಮಯ್ಯರ ಕಾರಿನ ಮೇಲೆ ಎಸೆದಿದ್ದರು. ಆದರೆ ದುಡ್ಡು ಎಸೆದ ಮಹಿಳೆಯ ಸಹೋದರಿ ದಿಢೀರ್ ಯೂಟರ್ನ್ ಹೊಡೆದಿದ್ದು, ಸಿದ್ದರಾಮಯ್ಯ ಅವರಿಗೆ ಕ್ಷಮೆ ಕೋರಿದ್ದಾರೆ.

ದುಡ್ಡು ಎಸೆದ ಮಹಿಳೆ ರಜ್ಮಾ ಹಾಗೂ ಆಕೆಯ ಸಹೋದರಿ ಬಿಸ್ಮಿಲ್ಲಾ ಸಿದ್ದರಾಮಯ್ಯ ಅವರಿಗೆ ಕ್ಷಮೆ ಕೋರಿದ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.

ನೀವು ನಮ್ಮ ಸಲುವಾಗಿ ಬಂದಿದ್ರೀ ಸರ್. ವೈಯಕ್ತಿಕ ಹಣ ಕೊಟ್ಟಿದ್ರಿ, ಆದ್ರೆ ನಾನು ನಮಗೆ ದುಡ್ಡು ಬೇಡ, ನ್ಯಾಯ ಬೇಕು ಎಂದು ನಿಮ್ಮ ಕಾರ್ ಬಳಿ ಬಂದೆವು. ಈ ವೇಳೆ ನಿಮ್ಮ ಕಾರು ಮುಂದೆ ಹೋದ ಪರಿಣಾಮ ನಮ್ಮ ಸಹೋದರಿ ಜಾರಿದ್ದರಿಂದ ದುಡ್ಡು ಕೆಳಗೆ ಬಿದ್ದಿತು ಎಂದು ಹೇಳಿದ್ದಾರೆ.

ಬಿಸ್ಮಿಲ್ಲಾ ಮಹಿಳೆ ಕೆರೂರು ಘರ್ಷಣೆಯಲ್ಲಿ ಗಾಯಗೊಂಡ ನಾಲ್ವರು ಸಹೋದರರ ಪೈಕಿ, ಮಹಮ್ಮದ್ ಹನೀಫ್ ಪತ್ನಿ.

ಕೆರೂರು ಗಲಭೆ ನಂತರ ನಡೆದ ಹಲ್ಲೆಯಿಂದಾಗಿ ಆಸ್ಪತ್ರೆಗೆ ದಾಖಲಾದ ಗಾಯಾಳುಗಳನ್ನು ಭೇಟಿ ಮಾಡಿ, ಗಾಯಾಳುಗಳಿಗೆ ಸಾಂತ್ವನ ಪರಿಹಾರ ನೀಡಲು ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ‘ಚೆಸ್ ಬೋರ್ಡ್‌ʼನಂತೆ ಕಂಗೊಳಿಸುತ್ತಿದೆ ತಮಿಳುನಾಡಿನ ನೇಪಿಯರ್ ಸೇತುವೆ

ಈ ವೇಳೆ ಮುಸ್ಲಿಂ ಮಹಿಳೆ ನಮಗೆ ನ್ಯಾಯ ಬೇಕು. ದುಡ್ಡು ಬೇಡ ಎಂದು ಹೇಳಿದ್ದರೂ ಸಿದ್ದರಾಮಯ್ಯ ಬಲವಂತವಾಗಿ ದುಡ್ಡು ನೀಡಿದ್ದರು. ಅಲ್ಲಿಂದ ಮರಳಿ ಹಣವನ್ನು ವಾಪಸ್ ಕೊಡಲು ಕಾರು ಹಿಂಬಾಲಿಸಿದ ಮಹಿಳೆಯರನ್ನು ಸಿದ್ದರಾಮಯ್ಯ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದರು.

ಆದರೆ ಮಹಿಳೆಯರು ಸಮಾಧಾನಕ್ಕೆ ಬಗ್ಗಲಿಲ್ಲ. ಆದರೆ ಇಲ್ಲಿಗೆ ಸುಮ್ಮನಾಗದ ಮಹಿಳೆ ರಾಜ್ಮ ಅವರು ಕಾರಿನ ಹಿಂದೆ ಹೋಗಿ ಹಣವನ್ನು ಬಿಸಾಕಿದ್ದಳು.

error: Content is protected !!