ಬಾದಾಮಿಯ ಕೆರೂರು ಘರ್ಷಣೆ ಗಾಯಾಳುಗಳಿಗೆ ಸಾಂತ್ವನ ಹೇಳಿ, ಪರಿಹಾರವಾಗಿ ಕೊಟ್ಟಿದ್ದ 2 ಲಕ್ಷ ರೂ. ಹಣವನ್ನು ಮುಸ್ಲಿಂ ಮಹಿಳೆ ಸಿದ್ದರಾಮಯ್ಯರ ಕಾರಿನ ಮೇಲೆ ಎಸೆದಿದ್ದರು. ಆದರೆ ದುಡ್ಡು ಎಸೆದ ಮಹಿಳೆಯ ಸಹೋದರಿ ದಿಢೀರ್ ಯೂಟರ್ನ್ ಹೊಡೆದಿದ್ದು, ಸಿದ್ದರಾಮಯ್ಯ ಅವರಿಗೆ ಕ್ಷಮೆ ಕೋರಿದ್ದಾರೆ.
ದುಡ್ಡು ಎಸೆದ ಮಹಿಳೆ ರಜ್ಮಾ ಹಾಗೂ ಆಕೆಯ ಸಹೋದರಿ ಬಿಸ್ಮಿಲ್ಲಾ ಸಿದ್ದರಾಮಯ್ಯ ಅವರಿಗೆ ಕ್ಷಮೆ ಕೋರಿದ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.
ನೀವು ನಮ್ಮ ಸಲುವಾಗಿ ಬಂದಿದ್ರೀ ಸರ್. ವೈಯಕ್ತಿಕ ಹಣ ಕೊಟ್ಟಿದ್ರಿ, ಆದ್ರೆ ನಾನು ನಮಗೆ ದುಡ್ಡು ಬೇಡ, ನ್ಯಾಯ ಬೇಕು ಎಂದು ನಿಮ್ಮ ಕಾರ್ ಬಳಿ ಬಂದೆವು. ಈ ವೇಳೆ ನಿಮ್ಮ ಕಾರು ಮುಂದೆ ಹೋದ ಪರಿಣಾಮ ನಮ್ಮ ಸಹೋದರಿ ಜಾರಿದ್ದರಿಂದ ದುಡ್ಡು ಕೆಳಗೆ ಬಿದ್ದಿತು ಎಂದು ಹೇಳಿದ್ದಾರೆ.
ಬಿಸ್ಮಿಲ್ಲಾ ಮಹಿಳೆ ಕೆರೂರು ಘರ್ಷಣೆಯಲ್ಲಿ ಗಾಯಗೊಂಡ ನಾಲ್ವರು ಸಹೋದರರ ಪೈಕಿ, ಮಹಮ್ಮದ್ ಹನೀಫ್ ಪತ್ನಿ.
ಕೆರೂರು ಗಲಭೆ ನಂತರ ನಡೆದ ಹಲ್ಲೆಯಿಂದಾಗಿ ಆಸ್ಪತ್ರೆಗೆ ದಾಖಲಾದ ಗಾಯಾಳುಗಳನ್ನು ಭೇಟಿ ಮಾಡಿ, ಗಾಯಾಳುಗಳಿಗೆ ಸಾಂತ್ವನ ಪರಿಹಾರ ನೀಡಲು ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ‘ಚೆಸ್ ಬೋರ್ಡ್ʼನಂತೆ ಕಂಗೊಳಿಸುತ್ತಿದೆ ತಮಿಳುನಾಡಿನ ನೇಪಿಯರ್ ಸೇತುವೆ
ಈ ವೇಳೆ ಮುಸ್ಲಿಂ ಮಹಿಳೆ ನಮಗೆ ನ್ಯಾಯ ಬೇಕು. ದುಡ್ಡು ಬೇಡ ಎಂದು ಹೇಳಿದ್ದರೂ ಸಿದ್ದರಾಮಯ್ಯ ಬಲವಂತವಾಗಿ ದುಡ್ಡು ನೀಡಿದ್ದರು. ಅಲ್ಲಿಂದ ಮರಳಿ ಹಣವನ್ನು ವಾಪಸ್ ಕೊಡಲು ಕಾರು ಹಿಂಬಾಲಿಸಿದ ಮಹಿಳೆಯರನ್ನು ಸಿದ್ದರಾಮಯ್ಯ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದರು.
ಆದರೆ ಮಹಿಳೆಯರು ಸಮಾಧಾನಕ್ಕೆ ಬಗ್ಗಲಿಲ್ಲ. ಆದರೆ ಇಲ್ಲಿಗೆ ಸುಮ್ಮನಾಗದ ಮಹಿಳೆ ರಾಜ್ಮ ಅವರು ಕಾರಿನ ಹಿಂದೆ ಹೋಗಿ ಹಣವನ್ನು ಬಿಸಾಕಿದ್ದಳು.
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
- ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ
- ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
- ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರವಿಚಂದ್ರನ್ ಅಶ್ವಿನ್ ದಿಢೀರ್ ವಿದಾಯ
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ