Trending

ಮದುವೆಗೂ ಮುನ್ನವೇ ಭಾವಿ ಪತಿಯನ್ನು ಬಂಧಿಸಿದ ಮಹಿಳಾ ಸಬ್ ಇನ್ಸ್‌ಪೆಕ್ಟರ್!

ಮಹಿಳಾ ಸಬ್ ಇನ್ಸ್‌ಪೆಕ್ಟರೊಬ್ಬರು ಮದುವೆಗೂ ಮುನ್ನವೇ ತನ್ನ ಭಾವಿ ಪತಿಯನ್ನು ಬಂಧಿಸಿರುವ ಘಟನೆ ಅಸ್ಸಾಂ ನಲ್ಲಿ ಜರುಗಿದೆ.

ಮಹಿಳಾ ಸಬ್ ಇನ್ಸ್‌ಪೆಕ್ಟರ್‌ ಭಾವಿ ಪತಿಯು ನಕಲಿ ಗುರುತಿನ ಮೂಲಕ ಮದುವೆಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಬೇರೆಯವರಿಗೂ ಮೋಸ ಮಾಡಿದ್ದಾನೆ ಎನ್ನಲಾಗಿದೆ ವಿಷಯ ತಿಳಿದು ತನಿಖೆ ನಡೆಸಿದ ನಂತರ ಸಬ್ ಇನ್ಸ್‌ಪೆಕ್ಟರ್ ಆತನನ್ನು ಬಂಧಿಸಿದ್ದಾರೆ. ಬುಧವಾರ ಸಂಜೆ ಆರೋಪಿಯನ್ನು ನಾಗಾಂವ್ ನ್ಯಾಯಾಲಯವು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

ಏನಿದು ಘಟನೆ?

ಅಸ್ಸಾಂನ ನಾಗಾವ್ ಪೊಲೀಸ್ ಠಾಣೆಯ ಮಹಿಳಾ ವಿಭಾಗದ ಪ್ರಭಾರಿ ಸಬ್ ಇನ್‌ಸ್ಪೆಕ್ಟರ್ ಜೋನ್ಮಣಿ ರಾಭಾ ಹಾಗೂ ರಾಣಾ ಪಾಗ್‌ ಎಂಬ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು.

ಇದನ್ನು ಓದಿ : ಮಳೆಯ ಕಿರಿಕಿರಿ – ನೈಸ್ ರಸ್ತೆಯಲ್ಲಿ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು

ಆದರೆ, ಮದುವೆಗೂ ಮುನ್ನವೇ ಈತ ನಕಲಿ ಗುರುತಿನೊಂದಿಗೆ ಮದುವೆಯಾಗಲು ಪ್ರಯತ್ನಿಸಿದ್ದಾನೆ ಹಾಗೂ ಬೇರೆಯವರಿಗೂ ಲಕ್ಷಾಂತರ ರೂ.ಗಳನ್ನು ವಂಚಿಸಿದ್ದಾನೆ ಎಂದು ಅರಿತ ಜೋನ್ಮಣಿ ರಾಣಾ ಪಾಗ್‌ನನ್ನು ಬಂಧಿಸಿದ್ದಾರೆ.

ಜನವರಿ 2021 ರಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಇವರಿಬ್ಬರ ಭೇಟಿಯಾಯಿತು. ಈ ಸಮಯದಲ್ಲಿ, ಪಾಗ್ ತನ್ನನ್ನು ONGC ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಕೆಲವು ದಿನಗಳ ನಂತರ, ಪಾಗ್ ಜೋನ್ಮಣಿಗೆ ಮದುವೆಯ ಪ್ರಸ್ತಾಪವನ್ನು ಮಾಡಿದ್ದರು, ಅದನ್ನು ಅವರೂ ಸಹ ಒಪ್ಪಿಕೊಂಡಿದ್ದರು.

ಜೋನ್ಮಣಿ ಮತ್ತು ಪಾಗ್ ಇಬ್ಬರ ಕುಟುಂಬಗಳು ಇಬ್ಬರ ಮದುವೆಗೂ ಒಪ್ಪಿಗೆ ನೀಡಿ,
ಅ. 2021 ರಲ್ಲಿ ನಿಶ್ಚಿತಾರ್ಥ ಮಾಡಿದ್ದರು ಮತ್ತು ಅವರ ಮದುವೆಯನ್ನು 2022 ರ ನವೆಂಬರ್‌ನಲ್ಲಿ ನಿಗದಿಪಡಿಸಲಾಗಿತ್ತು.

2022 ರ ಆರಂಭದಲ್ಲಿ, ಜೋನ್ಮಣಿ ಪಗ್ ಅವರ ಕಾರ್ಯಶೈಲಿಯನ್ನು ಅನುಮಾನಿಸಲು ಪ್ರಾರಂಭಿಸಿದರು. ಏಕೆಂದರೆ, ಜೋನ್ಮಣಿ ಸಮಾಜದಲ್ಲಿ ತನ್ನನ್ನು ಒಳ್ಳೆಯ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಜೋನ್ಮಣಿಯ ಮದುವೆ ವಿಷಯ ತಿಳಿದಿದ್ದ ಮೂವರು ವ್ಯಕ್ತಿಗಳು ಪಗ್ ಬಗ್ಗೆ ತಿಳಿಸಿದ್ದಾರೆ. ಪಗ್ ಗುತ್ತಿಗೆ ನೀಡುವ ಹೆಸರಿನಲ್ಲಿ ಪಾಗ್ 25 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ತಿಳಿದ ಜೋನ್ಮಣಿ ತನಿಖೆ ನಡೆಸಿದಾಗ, ಸತ್ಯ ಬಯಲಾಗಿದೆ. ಇನ್ನೂ ಜೋನ್ಮಣಿ ತನಿಖೆಯ ಸಮಯದಲ್ಲಿ ಪಾಗ್ ಅವರು ಬಾಡಿಗೆಗೆ ಪಡೆದಿದ್ದ ಎಸ್‌ಯುವಿಯನ್ನು ಬಳಸಿದ್ದಾರೆಂದು ಕಂಡುಕೊಂಡಿದ್ದಾನೆ. ಈ ಎಲ್ಲಾ ಆರೋಪದ ಮೇಲೆ ಪಗ್‌ನನ್ನು ಇದೀಗ ಬಂಧಿಸಲಾಗಿದೆ.

ಇದನ್ನು ಓದಿ : ವೈಶಾಖ ಪೂರ್ಣಿಮೆ – ಮೇ 16 ರಂದು ಮೊದಲ ಚಂದ್ರಗ್ರಹಣ : ಭಾರತದಲ್ಲಿ ಗೋಚರವಿಲ್ಲ

ಈ ಸಂಬಂಧ ಜಾನ್ಮಣಿ ಮಾತನಾಡಿ, ರಾಣಾ ಪಾಗ್‌ನ ವಾಸ್ತವ ತಿಳಿದ ನಂತರ ನಾನು ಅವರ ವಿರುದ್ಧ ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು. ನಾವು ಹಲವಾರು ಸೀಲುಗಳು, ನಕಲಿ ಐಡಿ ಪುರಾವೆಗಳು, ದೋಷಾರೋಪಣೆಯ ದಾಖಲೆಗಳು, ಲ್ಯಾಪ್‌ಟಾಪ್, ಹಲವಾರು ಮೊಬೈಲ್ ಫೋನ್‌ಗಳು ಮತ್ತು ಚೆಕ್ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದೇವೆ. ನಾನು ದೇವರಿಗೆ ಕೃತಜ್ಞನಾಗಿದ್ದೇನೆ ಮತ್ತು ನನಗೆ ಯಾವುದೇ ವಿಷಾದವಿಲ್ಲ. ಅವರು ಏನಾದರೂ ತಪ್ಪು ಮಾಡಿದರೆ ನಾನು ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

Team Newsnap
Leave a Comment

Recent Posts

ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ

ನವದೆಹಲಿ : ಲೋಕಸಭೆ ಚುನಾವಣೆಯನ್ನು ಹಿನ್ನಲೆಯಲ್ಲಿ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌… Read More

May 3, 2024

ಬಿಜೆಪಿ ಜೊತೆಗಿನ ಮೈತ್ರಿ ಸದ್ಯಕ್ಕೆ ನನಗೆ ಮುಖ್ಯ ಅಲ್ಲ: ಎಚ್ ಡಿ ಕೆ

ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀವ್ರ ಪೇಚಿಗೆ ಸಿಲುಕಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ… Read More

May 3, 2024

ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು

ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್‍ಐಆರ್… Read More

May 3, 2024

ರಾಮನಗರ : ಐಜೂರಿನಲ್ಲಿ ಕರಡಿ ಪ್ರತ್ಯಕ್ಷ

ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More

May 3, 2024

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲು

ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More

May 3, 2024

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024