December 25, 2024

Newsnap Kannada

The World at your finger tips!

lasike death

ಬೆಂಗಳೂರಿನಲ್ಲಿ ಲಸಿಕೆ ಪಡೆದುಕೊಂಡ ಕೆಲವೇ ಕ್ಷಣದಲ್ಲಿ ಮಹಿಳೆ ಸಾವು

Spread the love

ದೇಶಾದ್ಯಂತ ಶತಕೋಟಿ ಲಸಿಕೆ ಹಾಕಿಸಿದ ಸಂಭ್ರಮ ಆಚರಣೆಯಾದ ಬೆನ್ನಲ್ಲೇ ಶನಿವಾರ ಬೆಳಗ್ಗೆ ಲಸಿಕೆ ಪಡೆದ ಮಹಿಳೆಯೊಬ್ಬರು ಕೆಲವೇ ಕ್ಷಣಗಳಲ್ಲಿ ಸಾವಿಗೀಡಾಗಿದ್ದಾರೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ ಮಂಗಳಾ (36) ಎಂಬ ಮಹಿಳೆ ಬೆಳಗ್ಗೆ ಹೆಗ್ಗನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಲಸಿಕೆ ಪಡೆದು ಮನೆಗೆ ಮರಳುವಷ್ಟರಲ್ಲಿ ಸಾವಿಗೀಡಾಗಿದ್ದಾರೆ.

ಲಸಿಕೆ ಹಾಕಿಸಿಕೊಂಡು ಮರಳುತ್ತಿದ್ದ ಮಂಗಳಾ, ಮನೆ ಸಮೀಪದ ಮಾರುಕಟ್ಟೆ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಕೂಡಲೇ ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳಾ ಮೃತಪಟ್ಟಿದ್ದಾರೆ.

ಮಂಗಳಾ ಸಾವಿಗೆ ನಿಜವಾದ ಕಾರಣ ಏನು ಎಂಬುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ.

ವೈದ್ಯಕೀಯ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸಾವಿಗೆ ಏನು ಕಾರಣ ಅಂತ ನಿಖರವಾಗಿ ತಿಳಿಯಲಿದೆ. ಸದ್ಯ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!