ಅಮೇರಿಕದಲ್ಲಿ ಕಾಳ್ಗಿಚ್ಚಿನಿಂದ 30ಕ್ಕೂ ಹೆಚ್ಚು ಜನ ಮರಣ; ಎನ್ಸಿಬಿ ವರದಿ

Team Newsnap
1 Min Read

ನ್ಯೂಸ್ ಸ್ನ್ಯಾಪ್.
ವಾಷಿಂಗ್ಟನ್.

ಅಮೇರಿಕದ ಕರಾವಳಿಯಲ್ಲಿ‌ ಉಂಟಾಗಿರುವ ಕಾಳ್ಗಿಚ್ಚಿನಿಂದ ಹತ್ತಕ್ಕೂ ಹೆಚ್ಚು ಜನ ನಾಪತ್ತೆಯಾಗುವದರ ಜೊತೆಗೆ ಮೂವತ್ತಕ್ಕೂ ಹೆಚ್ಚು ಜನ ಮರಣ ಹೊಂದಿದ್ದಾರೆ ಎಂದು ಎನ್ಸಿಬಿ ವರದಿ ಮಾಡಿದೆ.

ಕ್ಯಾಲಿಫೋರ್ನಿಯಾದ ಸುಮಾರು ೨೮ ಭಾಗಗಳಲ್ಲಿ ಈ ಕಾಳ್ಗಿಚ್ಚು ಹಬ್ಬಿದೆ. ಕಾಳ್ಗಿಚ್ಚನ್ನು ನಿಯಂತ್ರಣ ಮಾಡಲು ಅಗ್ನಿಶಾಮಕ ದಳದ ಸುಮಾರು ೧೬,೦೦೦ ಸಿಬ್ಬಂದಿ‌ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಹತ್ತು ಸಾವಿರದಷ್ಟು ಜನರನ್ನು ಸ್ಥಳಾಂತರಿಸಿಲಾಗಿದೆ ಎಂದು ಎನ್ಸಿಬಿ ಹೇಳಿದೆ. ಈ ವರ್ಷದ ಆರಂಭದಿಂದಲೂ ಈ ಭಾಗದಲ್ಲಿ ಸುಮಾರು ೩೨ಲಕ್ಷ ಎಕರೆಯಷ್ಟು ಪ್ರದೇಶ ಕಾಳ್ಗಿಚ್ಚಿನ ಬೆಂಕಿಗೆ ಬಲಿಯಾಗಿದೆ.

ಇದುವರೆಗೂ ಓರೆಗಾನ್‌ ನಲ್ಲಿ‌ ೮ಜನ, ವಾಷಿಂಗ್ಟನ್ ನಲ್ಲಿ‌ ೧ ಮಗು ಮೃತ ಪಟ್ಟಿದೆ. ಆದರೆ ಕ್ಯಾಲಿಫೋರ್ನಿಯಾದ ಅರಣ್ಯ ಮತ್ತು ಅಗ್ನಿ ಶಾಮಕ‌ ದಳದವರು ನೀಡಿರುವ ಮಾಹಿತಿಯ ಪ್ರಕಾರ, ಕಾಳ್ಗಿಚ್ಚಿನಲ್ಲಿ‌ ಮೃತಪಟ್ಟವರ ಒಟ್ಟು ಸಂಖ್ಯೆ ೧೯.

ಸೋಮವಾರ ಅಮೇರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಸ್ಥಳಕ್ಕೆ ಭೇಟಿ‌ ನೀಡಿ‌ ಪರಿಶೀಲನೆ ನಡೆಸಲಿದ್ದಾರೆ.

Share This Article
Leave a comment