ಮಹಾಮಾರಿ ಕೊರೋನಾ ವೈರಸ್ ಗೆ ತುತ್ತಾದ ಗಂಡನನ್ನು ಆಟೋದಲ್ಲಿ ಆಸ್ಪತ್ರೆ ಗೆ ಕರೆದುಕೊಂಡು ಹೋಗುವ ಮುನ್ನ ಉಸಿರಾಟದ ತೊಂದರೆ ಆಗುವುದನ್ನು ನೋಡಿದ ಪತ್ನಿ ತನ್ನ ಬಾಯಿಯ ಮೂಲಕ ಉಸಿರು ನೀಡುವ ಘಟನೆ ಉತ್ತರ ಪ್ರದೇಶ ಆಗ್ರಾದಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಆಟೋದಲ್ಲೇ ಉಸಿರು ಕೊಡುವ ದೃಶ್ಯ ಸಖತ್ ವೈರಲ್ ಆಗುತ್ತಿದೆ, ನೆಟ್ಟಿಗರು ಫೋಟೋ ನೋಡಿ ಮೂಕವಿಸ್ಮಿತರಾಗಿದ್ದಾರೆ.
ಮಹಿಳೆಯೊಬ್ಬರು ಆಟೋದಲ್ಲಿ ಕುಳಿತುಕೊಂಡು ತನ್ನ ಪತ್ನಿಯನ್ನು ಕೊರೊನಾದಿಂದ ಬಚಾವ್ ಮಾಡಲು ಅವಿರತ ಪ್ರಯತ್ನ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಗಂಡ ರವಿ ಸಿಂಘಾಲ್ ನನ್ನು ಉಳಿಸಿಕೊಳ್ಳಲು ಪತ್ನಿ ರೇಣು ಸಿಂಘಾಲ್ ಪ್ರಯತ್ನ ವಿಫಲವಾಗಿದೆ. ಕಾರಣ ರವಿ ಪತಿ ಆಟೋದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ನಂತರ ಆಗ್ರಾದ ಎಸ್‍ಎನ್ ಮೆಡಿಕಲ್ ಆಸ್ಪತ್ರೆಯಲ್ಲೂ ರವಿ ನಿಧನರಾಗಿದ್ದಾರೆಂದು ವೈದ್ಯರು ಪ್ರಕಟಿಸಿದರು.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ