ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೋಂದಣಿಗೆ ಚಾಲನೆ

Team Newsnap
1 Min Read

ಕೇಂದ್ರ ಸರ್ಕಾರ ಮೂರನೇ ಹಂತದ ವ್ಯಾಕ್ಸಿನೇಷನ್​ ಮಹಾ ಅಭಿಯಾನವನ್ನು ಮೇ 1 ಆರಂಭಿಸಲು ಸಿದ್ಧತೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೋಂದಣಿಗೆ ಚಾಲನೆ ನೀಡಲಾಗುವುದು.

ಮೇ ತಿಂಗಳಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಕೇಂದ್ರ ಸರ್ಕಾರ ಅನುಮತಿಸಿದೆ. ವ್ಯಾಕ್ಸಿನ್ ಪಡೆಯಲು ಇಚ್ಛಿಸುವವರು ಇಂದಿನಿಂದ ಕೋವಿನ್ ವೆಬ್​​ಸೈಟ್​​  ಅಥವಾ ಆರೋಗ್ಯ ಸೇತು ಆ್ಯಪ್​​ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ನೋಂದಣಿ ಹೇಗೆ?

1) www.cowin.gov.in ವೆಬ್​ಸೈಟ್​​ಗೆ ಭೇಟಿ ನೀಡಿಬೇಕು.

2)ರಿಜಿಸ್ಟರ್ ಯುವರ್​ಸೆಲ್ಫ್​ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ

3) ಮೊಬೈಲ್​ ನಂಬರ್ ಹಾಕಿ, ನಂತರ ನಿಮ್ಮ ಮೊಬೈಲ್​ಗೆ ಬರುವ ಒಟಿಪಿಯನ್ನು ಸಲ್ಲಿಸಿ (ಮೂರು ನಿಮಿಷಗಳವರೆಗೆ ಮಾತ್ರ ಒಟಿಪಿ ವ್ಯಾಲಿಡ್​ ಇರುತ್ತದೆ)

4 ) ನಂತರ ನಿಮ್ಮ ಫೋಟೋ ಐಡಿ ಪ್ರೂಫ್, ಐಡಿ ಸಂಖ್ಯೆ,  ಹುಟ್ಟಿದ ವರ್ಷ  ಮುಂತಾದ ಮಾಹಿತಿಯನ್ನು ನೀಡಬೇಕು.

5) ನೀವು ವ್ಯಾಕ್ಸಿನ್ ಪಡೆಯುವ ಹತ್ತಿರದ ಸ್ಥಳ ಹಾಗೂ ಸ್ಲಾಟ್​ ಬುಕ್ ಮಾಡಿ ರಿಜಿಸ್ಟ್ರಾರ್ ಮಾಡಿಕೊಳ್ಳಬೇಕು.

Share This Article
Leave a comment