January 10, 2025

Newsnap Kannada

The World at your finger tips!

BJP , Congress , MLC

ಸೂಟ್ ಕೇಸ್ ಹಿಡಿದುಕೊಂಡು ಓಡಾಡಿದ ಸಿಪಿವೈನನ್ನು ಮಂತ್ರಿ ಮಾಡಲು ತರಾತುರಿ ಯಾಕೆ?

Spread the love

ಮುಂಬೈ ಪೂನಾದಲ್ಲಿ ಸೂಟ್ ಕೇಸ್ ಹಿಡಿದು ಕೊಂಡು ಓಡಾಡಿದ ಸಿ.ಪಿ. ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ನೀಡಲು ಯಾಕೆ ಇಷ್ಟು ಅರ್ಜೆಂಟ್‌ ಮಾಡ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಪ್ರಶ್ನಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್ ಸಿ.ಪಿ.ಯೋಗೇಶ್ವರ್‌ ನ ತ್ಯಾಗ ಏನ್ರಿ?
ಅವರೇನು ಮೈತ್ರಿ ಸರ್ಕಾರ ಬೀಳಿಸುವುದಕ್ಕೆ ಕಾರಣರಾದವರೇ? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರೇ? ಏನೂ ಅಲ್ಲ. ಆದರೆ
ಮುಂಬೈ- ಪುಣೆಯಲ್ಲಿ ಸೂಟ್‌ಕೇಸ್ ಹಿಡ್ಕೊಂಡು ಓಡಾಡುತ್ತಿದ್ದವರು. ಅಂತಹ ವ್ಯಕ್ತಿ ಯನ್ನು ಮಂತ್ರಿ ಮಾಡೋಕೆ ಅರ್ಜೆಂಟ್ ಯಾಕೇ ಬೇಕು ಎಂದು ಕೇಳಿದರು.

ಯೋಗೇಶ್ವರ್ ಪಾತ್ರ ಸೊನ್ನೆ!

ಬಿಜೆಪಿ ಸರ್ಕಾರ ಬರುವುದಕ್ಕೆ ಯೋಗೇಶ್ವರ್ ಪಾತ್ರ ಏನೂ ಇಲ್ಲ. ಕೇವಲ ಜೀರೋ. ಅವನ ಪಾತ್ರ ಏನು ಇಲ್ಲದ ಮೇಲೆ ಅವನಿಗ್ಯಾಕೆ ಮಂತ್ರಿ ಸ್ಥಾನ ಕೊಡಬೇಕು. ಯತ್ನಾಳ್ ಅಥವಾ ಕತ್ತಿಯಂತಹ ನಾಯಕರು ಸರತಿಯಲ್ಲಿದ್ದಾರೆ. ಅವರನ್ನು ಮಂತ್ರಿ ಮಾಡಿ. ಇಂತಹ ಆತುರದ ನಿರ್ಧಾರ ತೆಗೆದುಕೊಂಡರೆ ನಿಮ್ಮ ನಾಯಕತ್ವದ ಬಗ್ಗೆ ಅಪನಂಬಿಕೆ ಬರಲಿದೆ ಎಂದು ನೇರವಾಗಿ ಸಿಎಂ ಯಡಿಯೂರಪ್ಪನವರಿಗೆ ಚುಚ್ಚಿದರು.

ಮುಂಬೈ ಟೀಂನಲ್ಲಿ ನಾನು ಒಂಟಿ ಯಾಗಿಲ್ಲ, ಎಲ್ಲರೂ ಜೊತೆಯಾಗಿದ್ದಾರೆ. ನಾವಿದ್ದೀವಿ ಅಂತ ಬಿಜೆಪಿಯ ಹಿರಿಯ ನಾಯಕರು ಹೇಳಿದ್ದಾರೆ. ಹಾಗಾಗಿ, ನಾನು ಒಂಟಿಯಾಗಿಲ್ಲ ಎಂದರು.

ವಿರೋಧಿಗಳೇ ಈಗ ಸಿಎಂಗೆ ಬೆಸ್ಟ್ ಫ್ರೆಂಡ್ !

ನಾವು ಯಾರನ್ನು ವಿರೋಧ ಮಾಡಿ ಬಂದ್ವಿ ಅವರೇ ಈಗ ಬಿಎಸ್‌ವೈ ಗುಡ್ ಫ್ರೆಂಡ್. ಇದು ತಂದೆಯನ್ನು ಕೊಂದವನನ್ನು ತಾಯಿ ಮದುವೆಯಾದಂತೆ ಕಾಣುತ್ತಿದೆ. ಶೇಕ್ಸ್‌ಪೀಯರ್ ನಾಟಕದಲ್ಲಿ ಇದೇ ರೀತಿಯ ಪ್ರಸಂಗ ಇದೆ. ನಮ್ಮ‌ ಪರಿಸ್ಥಿತಿ ಹಾಗೂ ಸರ್ಕಾರದ ಪರಿಸ್ಥಿತಿಯೂ ಹಾಗೇ ಇದೆ. ಪರೋಕ್ಷವಾಗಿ ಕುಮಾರಸ್ವಾಮಿ ಸಖ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಾವು ಸರ್ಕಾರವನ್ನು ಬೀಳಿಸಲಿಲ್ಲ. ಕಾಂಗ್ರೆಸ್ ಜೆಡಿಎಸ್‌ನವರೇ ಬೀಳಿಸಿಕೊಂಡರು. ಸಿದ್ದರಾಮಯ್ಯ, ಕುಮಾರಸ್ವಾಮಿಯೇ ಈ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸ್ಥಾನಕ್ಕೆ ಕುತ್ತಿಲ್ಲ

ಹೈಕೋರ್ಟ್ ಮಧ್ಯಂತರ ತೀರ್ಪಿನ ಆದೇಶ ನೋಡಿದ್ದೇನೆ. ಅದರೆ ತೀರ್ಪಿನ ಆದೇಶ ಪ್ರತಿ‌ ಇನ್ನು ಕೈಸೇರಿಲ್ಲ. ಅದರಲ್ಲಿ ಸಚಿವರಾಗಬಾರದು ಅಂತ ಮಾತ್ರ ಹೇಳಿದ್ದಾರೆ. 2027ರವರೆಗೆ ನನ್ನ ವಿಧಾನ ಪರಿಷತ್ ಸ್ಥಾನಕ್ಕೆ ತೊಂದರೆಯಿಲ್ಲ. ಸರ್ಕಾರದ ರಚನೆ ಸಂದರ್ಭದಲ್ಲಿ ಬಿಎಸ್‌ವೈ ನನ್ನ ಮುಂದೆ ನಿಂತಿದ್ದ ಸ್ಥಿತಿಯೇ ಬೇರೆ. ಇಂದಿನ ಬಿಎಸ್‌ವೈ ನಡವಳಿಕೆಗಳೇ ಬೇರೆ ಎಂದು ಯಡಿಯೂರಪ್ಪ ಅವರ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ರಾಜಕಾರಣದಲ್ಲಿ ಕೃತಜ್ಞತೆ ಕಡಿಮೆ

ರಾಜಕಾರಣದಲ್ಲಿ‌ ಕೃತಜ್ಞತೆ ಕಡಿಮೆ ಆಗುತ್ತಿದೆ. ನಾವು ಮಾಡಿದ ಕೆಲಸವನ್ನು ಯಾರೂ ಕೃತಜ್ಞ ಮಾಡಿಕೊಂಡಿಲ್ಲ. ಯಡಿಯೂರಪ್ಪ ಅವರ ಮೇಲೆಯೇ ಒತ್ತಡ ಇದೆ. ಅದಕ್ಕೆ ಈಗ ಏನಾಗುತ್ತೆ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದರು.

Copyright © All rights reserved Newsnap | Newsever by AF themes.
error: Content is protected !!