filmy

ಸೌತ್​ ಸಿನಿಮಾಗಳ ಎದುರು ಹಿಂದಿ ಚಿತ್ರಗಳು ಯಾಕೆ ಸೋತಿದ್ದು ? ಆತ್ಮಾವಲೋಕನ ಅಗತ್ಯ – ಮನೋಜ್​ ಬಾಜ್​ಪಾಯಿ

ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವುದಿಲ್ಲ. ಮುಖ್ಯಧಾರೆಯ ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬ ಪಾಠವನ್ನು ದಕ್ಷಿಣ ಭಾರತದವರನ್ನು ನೋಡಿ ಬಾಲಿವುಡ್​ನವರು ಕಲಿಯಬೇಕು ಎಂದು ನಟ ಮನೋಜ್​ ಬಾಜ್​ಪಾಯಿ ಹೇಳಿದ್ದಾರೆ.

ಕನ್ನಡ ಮತ್ತು ತೆಲುಗಿನ ಸಿನಿಮಾಗಳು ಹಿಂದಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿವೆ. ‘ಕೆಜಿಎಫ್​: ಚಾಪ್ಟರ್​ 2’ (KGF 2), ‘ಪುಷ್ಪ’, ‘ಆರ್​ಆರ್​ಆರ್​’ ಮುಂತಾದ ಸಿನಿಮಾಗಳು ಧೂಳೆಬ್ಬಿಸಿವೆ.

ದಕ್ಷಿಣ ಭಾರತದ ಸಿನಿಮಾಗಳ ಎದುರು ಪೈಪೋಟಿ ನೀಡಲು ಬಾಲಿವುಡ್​ ಸ್ಟಾರ್​ ಹೀರೋಗಳಿಗೂ ಸಾಧ್ಯವಾಗುತ್ತಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಉತ್ತರ ಭಾರತದ ಜನರು ದಕ್ಷಿಣದ ಡಬ್ಬಿಂಗ್​ ಸಿನಿಮಾಗಳಿಗೆ ಹೆಚ್ಚು ಮನ್ನಣೆ ನೀಡುತ್ತಿದ್ದಾರೆ. ಮೂಲ ಹಿಂದಿ ಚಿತ್ರಗಳು ಸೋತು ಸುಣ್ಣ ಆಗುತ್ತಿವೆ. ಬಾಲಿವುಡ್ ಮಂದಿಗೆ ಇಂಥ ಪರಿಸ್ಥಿತಿ ಯಾಕೆ ಬಂತು ಎಂಬುದನ್ನು ಈಗ ಚರ್ಚೆ ಮಾಡಲಾಗುತ್ತಿದೆ. ಸ್ವತಃ ಬಾಲಿವುಡ್​ ಸೆಲೆಬ್ರಿಟಿಗಳೇ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಎಂದು ಮನೋಜ್​ ಬಾಜ್​ಪೇಯಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗಕ್ಕೂ ಬಾಲಿವುಡ್​ಗೂ ಇರುವ ವ್ಯತ್ಯಾಸ ಏನು ಎಂಬುದನ್ನು ಅವರು ಗುರುತಿಸಿದ್ದಾರೆ. ಸೌತ್​ ಸಿನಿಮಾಗಳನ್ನು ನೋಡಿ ಹಿಂದಿ ಚಿತ್ರರಂಗದವರು ಕಲಿಯಬೇಕಿದೆ ಎಂದು ಅವರು ಹೇಳಿದ್ದಾರೆ.

‘ದಕ್ಷಿಣ ಭಾರತದ ಸಿನಿಮಾಗಳು ಯಾವ ಮಟ್ಟಕ್ಕೆ ಬ್ಲಾಕ್​ ಬಸ್ಟರ್​ ಆಗುತ್ತಿವೆ ಎಂದರೆ ನನ್ನ ವಿಷಯ ಬಿಡಿ, ಬಾಲಿವುಡ್​ನ ಪ್ರಮುಖ ಫಿಲ್ಮ್​ ಮೇಕರ್​ಗಳಿಗೆ ಭಯ ಹುಟ್ಟಿದೆ. ಏನು ಮಾಡಬೇಕು ಎಂಬುದೇ ಅವರಿಗೆ ತೋಚುತ್ತಿಲ್ಲ.​ ದಕ್ಷಿಣ ಭಾರತದವರು ತುಂಬ ಪ್ಯಾಷನೇಟ್​ ಆಗಿ ಸಿನಿಮಾ ಮಾಡುತ್ತಾರೆ. ಯಾವುದರಲ್ಲೂ ರಾಜಿ ಆಗಲ್ಲ. ತಾವು ಜಗತ್ತಿನ ದಿ ಬೆಸ್ಟ್​ ದೃಶ್ಯವನ್ನು ಚಿತ್ರೀಕರಿಸುತ್ತಿದ್ದೇವೆ ಎಂಬ ಭಾವನೆಯಲ್ಲೇ ಅವರು ಶೂಟಿಂಗ್​ ಮಾಡುತ್ತಾರೆ. ತುಂಬ ಆಲೋಚನೆ ಮಾಡುತ್ತಾರೆ. ಪ್ರೇಕ್ಷಕರ ಬಗ್ಗೆ ಹಗುರವಾಗಿ ಒಮ್ಮೆ ಕೂಡ ಮಾತನಾಡುವುದಿಲ್ಲ ಎಂದು ಮನೋಜ್​ ಬಾಜ್​ಪಾಯಿ ಹೇಳಿದ್ದಾರೆ.

‘ಇದು ಮಾಸ್​ ಆಗಿದೆ, ಹಾಗಾಗಿ ನಡೆದು ಬಿಡುತ್ತೆ ಅಂತ ದಕ್ಷಿಣ ಭಾರತದವರು ಹೇಳಲ್ಲ. ಕೆಜಿಎಫ್​ 2, ಪುಷ್ಪ, ಆರ್​ಆರ್​ಆರ್​ ಸಿನಿಮಾಗಳ ಮೇಕಿಂಗ್​ ಗಮನಿಸಿ. ಅವು ತುಂಬಾ ನೀಟ್ ಆಗಿವೆ. ಮಾಡು ಇಲ್ಲವೇ ಮಡಿ ಎಂಬಂತಹ ಸನ್ನಿವೇಶ ಎಂಬ ರೀತಿಯಲ್ಲೇ ಅವರು ಪ್ರತಿ ದೃಶ್ಯದ ಚಿತ್ರೀಕರಣ ಮಾಡುತ್ತಾರೆ. ಆ ಗುಣದ ಕೊರತೆ ನಮ್ಮಲ್ಲಿ ಇದೆ. ನಾವು ಬರೀ ಹಣದ ದೃಷ್ಟಿಯಿಂದ ಸಿನಿಮಾ ಬಗ್ಗೆ ಯೋಚಿಸುತ್ತೇವೆ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವುದಿಲ್ಲ. ಪ್ರಮುಖ ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬ ಪಾಠವನ್ನು ದಕ್ಷಿಣ ಭಾರತದವರನ್ನು ನೋಡಿ ಬಾಲಿವುಡ್​ನವರು ಕಲಿಯಬೇಕು’ ಎಂದು ಮನೋಜ್​ ಬಾಜ್​ಪಾಯಿ ಹೇಳಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಿಂದಪ್ಪ ಸಿದ್ದಾಪುರ ಎಂಬುವರು… Read More

May 6, 2024

ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು

ಮಂಗಳೂರು : ಬಂಟ್ವಾಳದ (Bantwal) ನಾವೂರಿನಲ್ಲಿ ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಅನ್ಸಾರ್ ಅವರ ಪುತ್ರಿ… Read More

May 6, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 6, 2024

ಹಾಸನ ಅಶ್ಲೀಲ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ: ಎಸ್‌ಐಟಿ

ಬೆಂಗಳೂರು : ವಿಶೇಷ ತನಿಖಾ ತಂಡ (SIT) ಮುಖ್ಯಸ್ಥ ಬಿ.ಕೆ.ಸಿಂಗ್ , ಹಾಸನದ ಅಶ್ಲೀಲ ಮತ್ತು ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ… Read More

May 6, 2024

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024