May 21, 2022

Newsnap Kannada

The World at your finger tips!

abdul rajak

ಅರಬ್ ದೇಶದ ಪೆಟ್ರೋಲ್ ಯಾಕೆ ಬಳಕೆ ಮಾಡ್ತೀರಾ – ಗೋಮೂತ್ರ ಹಾಕಿ ವಾಹನ ಓಡಿಸಿ : ರಜಾಕ್

Spread the love

ಅರಬ್ ದೇಶಗಳ ಪೆಟ್ರೋಲ್ ಬಳಸಬೇಡಿ. ಬದಲಿಗೆ ಗೋಮೂತ್ರ ಹಾಕಿಕೊಂಡು ವಾಹನ ಓಡಿಸಿ ಹೀಗೆಂದು ಹೇಳಿದವರು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್.

ದೇವಾಲಯಗಳಿಗೆ ತೆರಳುವ ಹಿಂದೂಗಳು ಹಿಂದೂ ಚಾಲಕರ ವಾಹನಗಳನ್ನು ಬಳಸಬೇಕು ಎಂಬ ಅಭಿಯಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿರುವ ರಜಾಕ್ ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಂದೂ-ಮುಸ್ಲಿಂ ವಿವಾದದ ಕುರಿತಾಗಿ ಸಿಡಿದೆದ್ದ ರಜಾಕ್ ಕರ್ನಾಟಕ ಎಲ್ಲಿಗೆ ಹೋಗುತ್ತಿದೆ? ಮುಸ್ಲಿಮರಿಗೆ ನೆಮ್ಮದಿಯಿಂದ ರಂಜಾನ್ ಆಚರಿಸಲು ಬಿಡಿ. ದಿನಬೆಳಗಾದಂತೆ ಟೆನ್ಶನ್ ಕೊಡಬೇಡಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಏನೆಲ್ಲಾ ನಡೆಯುತ್ತಿದ್ದರೂ ಸಿಎಂ ಬೊಮ್ಮಾಯಿ ಏನು ಮಾಡುತ್ತಿದ್ದಾರೆ? ರಾಜ್ಯದ ಅಭಿವೃದ್ಧಿಗೆ ಇದೆಲ್ಲ ಮಾರಕವಾಗುತ್ತಿದೆ. ಈ ವಿಚಾರದಲ್ಲಿ ಕರ್ನಾಟಕಕ್ಕೆ 5 ಪೈಸೆ ಲಾಭ ಇಲ್ಲ. ಹೀಗೇ ಆದರೆ ಐಟಿ ಬಿಟಿಯವರು ಓಡಿ ಹೋಗುತ್ತಾರೆ. ಸರ್ಕಾರ ಹಿಂದೂ ಜನರ ವಾಹನಕ್ಕೆ ಕೇಸರಿ ಹಾಗೂ ಮುಸ್ಲಿಮರಿಗೆ ಹಸಿರು ನಂಬರ್ ಪ್ಲೇಟ್ ಹಾಕಲಿ ಎಂದು ಆಕ್ರೋಶ ಹೊರ ಹಾಕಿದ ರಜಾಕ್.

error: Content is protected !!