January 10, 2025

Newsnap Kannada

The World at your finger tips!

somshekar

ದಸರಾ ಉದ್ಘಾಟಕರು ಯಾರು? ಮುಖ್ಯಮಂತ್ರಿಗಳಿಂದಲೇ ಪ್ರಕಟ

Spread the love

ಕೊರೊನಾ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿಯೂ ಸರಳವಾಗಿಯೂ ಸಾಂಪ್ರದಾಯಕವಾಗಿಯೂ ಆಚರಿಸಲು ಈಗಾಗಲೇ ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರೆ ದಸರಾ ಉದ್ಘಾಟಕರ ಹೆಸರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೇ ಪ್ರಕಟಿಸುವರು.


ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು. ನಾವು ಯಾವುದೇ ಉದ್ಘಾಟಕರ ಹೆಸರು ಸೂಚಿಸಿಲ್ಲ. ಈ ಬಾರಿ ಮುಖ್ಯಮಂತ್ರಿಗಳೇ ಉದ್ಘಾಟಕರು ಯಾರೆಂದು ತಿಳಿಸುವರು. ಕೋವಿಡ್ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಕಾರಣ ಎಷ್ಟುಜನರಿಗೆ ದಸರಾದಲ್ಲಿ ಪ್ರವೇಶ ನೀಡಬೇಕೆಂಬ ಕುರಿತು ಸದ್ಯದಲ್ಲೇ ಪ್ರಚುರಪಡಿಸಲಾಗುವುದು ಎಂದರು.


ಜಂಬೂ ಸವಾರಿ ಅರಮನೆ ಆವರಣದಲ್ಲೇ ನಡೆಯಲಿದೆ. 9 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಅಲ್ಲೇ ಏರ್ಪಡಿಸಲಾಗುವುದು. ದಸರ ಆಚರಣೆ ಸಂಬಂಧ ಮೈಸೂರಿನಲ್ಲಿ ಸೆಪ್ಟೆಂಬರ್ 8 ರಂದು ದಸರಾ ಕಾರ್ಯಕಾರಿ ಸತಿ ಸಭೆ ಏರ್ಪಡಿಸಲಾಗಿದೆ. ಮೈಸೂರು ದಸರಾಗೆ ಐದು ಕೋಟಿರೂ. ಕೇಳಲಾಗಿತ್ತು. ಶ್ರೀರಂಗಪಟ್ಟಣ ಹಾಗೂ ಚಾಮರಾಜನಗರ ದಸರಾ ಆಚರಣೆ ಸೇರಿ ಆರು ಕೋಟಿರೂ.ಗಳನ್ನು ಸಿಎಂ ನೀಡಿದ್ದಾರೆಂದು ಸೋಮಶೇಖರ್ ವಿವರಿಸಿದರು.

Copyright © All rights reserved Newsnap | Newsever by AF themes.
error: Content is protected !!