ಕೆ ಆರ್ ನಗರದಲ್ಲಿ ನಡೆದ ಘಟನೆ ಇದು. ತಮ್ಮ ರಾಜಕೀಯ ಗುರು ದೇವರಾಜ ಅರಸು ಪುತ್ರಿಯ ಸೀರೆಯನ್ನು ಎಳೆಸಿದ ಮಾಹಾನುಭಾವ ಯಾರು? ಎಂದು ಶಾಸಕ ಸಾ ರಾ ಮಹೇಶ್ , ಎಚ್ ವಿಶ್ವನಾಥ ಅವರಿಗೆ ಪರೋಕ್ಷ ತಿರುಗೇಟು ನೀಡಿದರು.
ಸಿಎಂ ಬಿಎಸ್‌ವೈ ಜೊತೆ ಎಚ್‌ಡಿಕೆ ಹೊಂದಿರುವ ಸಖ್ಯ ಕುರಿತು, ತಂದೆಯನ್ನೇ ಕೊಂದ ಮಗನನ್ನು ತಾಯಿ ಮದುವೆಯಾಗಿ ಮೆರವಣಿಗೆ ಹೊರಟಂತಿದೆ (ಶೇಕ್ಸ್‌ಪಿಯರ್ ನಾಟಕ ಪ್ರಸಂಗ) ಎಂಬ ಎಚ್. ವಿಶ್ವನಾಥ್ ಹೇಳಿಕೆಯನ್ನು ಸಾ.ರಾ. ವಿರೋಧಿಸಿ ವಿಶ್ವನಾಥ್ ಮಾಡಿರುವ ಕೆಲವು ಸಂಗತಿಗಳನ್ನು ನೆನಪಿಸಿದರು.
ಎಸ್.ಎಂ.ಕೃಷ್ಣ ಸಚಿವ ಸಂಪುಟದಲ್ಲಿದ್ದುಕೊಂಡೇ ಅವರ ವಿರುದ್ಧವೇ ಪುಸ್ತಕ ಬರೆದವರು ಯಾರು? ಸಿದ್ದರಾಮಯ್ಯ ನೆರವಿನಿಂದ ಸಂಸದರಾಗಿ ಅವರ ವಿರುದ್ಧವೇ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದವರು ಯಾರು? ಎಂದು ಪ್ರಶ್ನಿಸಿದರು ಸಾ.ರಾ
ಶೇಕ್ಸ್‌ಪಿಯರ್ ನಾಯಕ ಪ್ರಸಂಗ ಯಾರಿಗೆ ಅನ್ವಯಿಸುತ್ತದೆ ಎಂಬುದು ತಿಳಿಯುತ್ತದೆ ಎಂದು ವಿಶ್ವನಾಥ್ ವಿರುದ್ಧ ಹರಿಹಾಯ್ದರು.
ಬೇರೆಯವರ ಸಂಪರ್ಕ ಜಾಸ್ತಿ ಏಕೆ?
ಅಧಿಕಾರಿಗಳ ಕೆಲಸಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ ಎಂಬ ಸಂಸದ ಪ್ರತಾಪಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹೇಶ್, ಯಾವ ಜಿಲ್ಲಾಧಿಕಾರಿ ಬಗ್ಗೆ ಇಲ್ಲದ ಕಾಳಜಿಯನ್ನು ಸಂಸದ ಪ್ರತಾಪ್ ಸಿಂಹ, ರೋಹಿಣಿ ಸಿಂಧೂರಿ ಬಗ್ಗೆ ಜಾಸ್ತಿ ಆಸಕ್ತಿ ಏಕೆ ? ಸಂಸದರಿಗೆ ಜನಪ್ರತಿನಿಧಿಗಳ ಸಂಪರ್ಕಕ್ಕಿಂತ ಬೇರೆಯವರ ಸಂಪರ್ಕವೇ ಜಾಸ್ತಿ ಏಕೆ ಎಂದು ಪ್ರಶ್ನೆ ಮಾಡಿದರು.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ತುಪ್ಪ ಎಂಬ ಮಹಾ ಔಷಧಿ