January 7, 2025

Newsnap Kannada

The World at your finger tips!

dhremegowda

ಧರ್ಮೇಗೌಡರ ಆತ್ಮಹತ್ಯೆಯ ಕೊನೆಯ ಕ್ಷಣ ಏನಾಗಿತ್ತು ? ರೈಲು ಚಾಲಕ ವಿವರಣೆ ….,

Spread the love

ಉಪ ಸಭಾಪತಿ ಧರ್ಮೇಗೌಡರು ಕಳೆದ ಸೋಮವಾರ ಮಧ್ಯ ರಾತ್ರಿ ನಂತರ ಆತ್ಮಹತ್ಯೆಗೆ ಶರಣಾದ ಕೊನೆಯ ಕ್ಷಣ ಏನಾಗಿತ್ತು ? ರೈಲು ಚಾಲಕ ವಿವರಣೆ ನೀಡಿದ್ದಾರೆ.

ವಿಧಾನ ಪರಿಷತ್​ ಉಪ ಸಭಾಪತಿ ಧರ್ಮೇಗೌಡರು ಕಡೂರು ತಾಲೂಕಿನ ಗುಣಸಾಗರದ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದೃಷ್ಯದ ಕೊನೆ ಕ್ಷಣ ಹೇಗಿತ್ತು ಎಂಬುದು ರೈಲು ಚಾಲಕ ಸಿದ್ದರಾಮ್ ಪೋಲಿಸರಿಗೆ ನೀಡಿರುವ ಸಾಕ್ಷ್ಯ ದಲ್ಲಿ ಹೇಳಿದ್ದಾರೆ.

ರೈಲು ಚಾಲಕನ ಈ ಹೇಳಿಕೆಯಿಂದಾಗಿ
ಧರ್ಮೇಗೌಡರಿಗೆ ಡಿಕ್ಕಿಯಾಗಿರುವುದು ಜನ್ ಶತಾಬ್ದಿ ರೈಲು ಎನ್ನುವ ಸಂಗತಿ ಮಾತ್ರ ದೃಢವಾಗಿದೆ.

ಘಟನೆ ನಡೆದ ರಾತ್ರಿಯೇ ಶತಾಬ್ದಿ ಎಕ್ಸ್​​ಪ್ರೆಸ್ ಚಾಲಕ ಸಿದ್ದರಾಮ್ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ‌, ಮುಂದೆ ಹೋಗಿದ್ದಾರೆ.

ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬರು ಹಳಿಯ ಮೇಲೆ ನಿಂತಿದ್ದರು. ಹಳಿ ಮೇಲೆ ರೈಲಿಗೆ ನೇರಾ-ನೇರ ನಿಂತಿರುವುದು ಮಾತ್ರ ಕಾಣಿಸಿತ್ತು ಎಂದು ಹೇಳಿದ್ದಾರೆ.

ರೈಲು ವೇಗವಾಗಿದ್ದ ಕಾರಣ ನಿಲ್ಲಿಸಲು ಸಾಧ್ಯವಾಗಿಲ್ಲ. ಡಿಕ್ಕಿಯಾಗಿ ಮುಂದೆ ಹೋಯಿತು ಎಂದು ಘಟನೆಯ ಬಗ್ಗೆ ಸಮಗ್ರ ವಿವರಣೆ ನೀಡಿದ್ದಾರೆ.‌

Copyright © All rights reserved Newsnap | Newsever by AF themes.
error: Content is protected !!