ಜಿಲ್ಲೆಯ ಅಭಿವೃದ್ಧಿಗೆ ಎಚ್ ಡಿ ಕೆ ಕೊಡುಗೆ ಏನ್ರಿ? ಜಿಲ್ಲಾ ಮಂತ್ರಿ ಪ್ರಶ್ನೆ

Team Newsnap
2 Min Read

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಕೊಡುಗೆ ಶೂನ್ಯ. ಏನ್ರಿ ಕೊಡುಗೆ ನೀಡಿದ್ದಾರೆ ಹೇಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡರು ನೇರವಾಗಿ ಪ್ರಶ್ನೆ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾರಾಯಣಗೌಡ, ಎಚ್ ಡಿ ಕೆ
ಮುಖ್ಯಮಂತ್ರಿಗಳಾಗಿದ್ದಾಗಲೇ ಯಾವುದೇ ಮಹತ್ವದ ಕೊಡುಗೆಗಳನ್ನು ನೀಡಲಿಲ್ಲ. ಇನ್ನು ಈಗ ಯಾವುದೇ ಅಧಿಕಾರವಿಲ್ಲದೇ ಮತ್ತ್ಯಾವ ರೀತಿಯಲ್ಲಿ ಕೊಡುಗೆಯನ್ನು ನೀಡಲು ಸಾಧ್ಯವಿದೆ ಎಂದು ಲೇವಡಿ ಮಾಡಿದರು.

vermicompost 1111

ಜಿಲ್ಲೆಯ ಸಮಗ್ರವಾದ ಅಭಿವೃದ್ಧಿಗೆ ತಾಲ್ಲೂಕಿನ ಸುಪುತ್ರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿ
ಗಿಂತಲೂ ಹೆಚ್ಚಿನ ಕೊಡುಗೆ ನೀಡಲು ಈ ಕುಮಾರಸ್ವಾಮಿಗೆ ಸಾಧ್ಯವೆ ಎಂದು ಖಾರವಾಗಿ ಪ್ರಶ್ನಿಸಿದರು.

ಅಧಿಕಾರ ಶಾಶ್ವತ ಅಲ್ಲ:

ತಮ್ಮ ವಿರುದ್ದ ಕುಮಾರಸ್ವಾಮಿ ಮಾಡಿದ ಟೀಕೆ ಟಿಪ್ಪಣಿಗಳಿಗೆ ಉತ್ತರಿಸಿದ ಸಚಿವರು ನಾನು ಅಧಿಕಾರಕ್ಕಾಗಿ ಗೂಟ ಹೊಡೆದುಕೊಂಡು ಕೂತಿದ್ದೇನೆ ಎಂದಿದ್ದಾರೆ. ನಾನು ಜಿಲ್ಲೆಯ ಜನತೆಯ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ ಎಂಬ ಸತ್ಯ ನನಗೆ ಗೊತ್ತಿದೆ ಎಂದರು.

ಎಚ್ ಡಿಕೆಗೆ ಮತ್ತೆ ಸಿಎಂ ಕನಸು?:

ಇನ್ನೂ ಎರಡೂವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರೇ ಇರುತ್ತಾರೆ. ಯಾವ ಅನುಮಾನ ಬೇಡ.
ಕುಮಾರಸ್ವಾಮಿ ಮತ್ತೆ ಬಿಜೆಪಿ ಬೆಂಬಲ ಪಡೆದುಕೊಂಡು ರಾಜ್ಯದ ಸಿಎಂ ಆಗಲಿದ್ದಾರೆ ಎನ್ನುವುದೆಲ್ಲಾ ಕೇವಲ ವದಂತಿ ಮತ್ತು ಕನಸು ಅಷ್ಟೇ. ಈ ಮಾತುಗಳನ್ನು ಅವರಿವರ ಮಾತುಗಳಲ್ಲಿ ಕೇಳಿಸಿಕೊಂಡಿದ್ದೇನೆ. ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರು ಮಂತ್ರಿಗಳಾಗಲಿ ದ್ದಾರೆ ಎಂದೆಲ್ಲಾ ಗಾಳಿಸುದ್ದಿಯು ಹರಡಿದೆ. ಈ ವದಂತಿಗಳಿಗೆಲ್ಲಾ ಕಾಲವೇ ಉತ್ತರಿಸಲಿದೆ ಎಂದರು.

ಗ್ರಾ ಪಂ ಚುನಾವಣೆಯಲ್ಲಿ
ಭದ್ರ ಕೋಟೆ ಛಿದ್ರ :

ಮಂಡ್ಯ ಜಿಲ್ಲೆಯು ಜೆಡಿಎಸ್ ಜೆಡಿಎಸ್ ಭದ್ರಕೋಟೆ ಎಂಬುದೆಲ್ಲಾ ಸುಳ್ಳು. ಜೆಡಿಎಸ್ ಶಕ್ತಿಯು ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅತೀ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಜೆಡಿಎಸ್ ಭದ್ರಕೋಟೆಯನ್ನು ನುಚ್ಚುನೂರು ಮಾಡಲಿದ್ದಾರೆ ಎಂದು ಹೇಳಿದರು.

ಒಂದುವಾರ ಜಿಲ್ಲೆಯಲ್ಲಿ ಪ್ರಚಾರ:

ಕಾಲಿನ ನೋವಿನಿಂದಾಗಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಸಾಧ್ಯವಾಗಿಲ್ಲ..
ಇಂದಿನಿಂದ ಒಂದು ವಾರಗಳ ಕಾಲ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರಚಾರ ನಡೆಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸಿ ಶ್ರಮವಹಿಸಿ ಕೆಲಸ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಜಿಲ್ಲಾ ಪಂಚಾಯತಿ ಮಾಜಿಸದಸ್ಯ ಅಘಲಯ ಮಂಜುನಾಥ್ ಇದ್ದರು

Share This Article
Leave a comment