– ಗುಡ್ಡಾಭಟ್ ಜೋಷಿ ಹೊಳಲು
ಹಿಂದೂ ಶಾಸ್ತ್ರ ಸಂಪ್ರದಾಯ ದಲ್ಲಿ ಏಕಾದಶೀ ವ್ರತಕ್ಕೆ ಬಹಳ ಮಹತ್ವವಿದೆ. ಈ ದಿನ ಪೂರ್ತಿ ಉಪವಾಸವಿದ್ದು, ದೇವರ ನಾಮ ಸ್ಮರಣೆ, ವಿಶೇಷ ಪೂಜಾ ಕೈಂಕರ್ಯ, ದಾನಧರ್ಮಗಳನ್ನು ಮಾಡುವುದು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ.
ಶುಕ್ಲ ಪಕ್ಷದಲ್ಲಿ ಕಾಮದಾ, ಮೋಹಿನೀ, ನಿರ್ಜಲಾ, ಶಯನೀ, ಪುತ್ರದಾ, ಪರಿವರ್ತಿನಿ, ಪಾಶಾಂಕುಶ, ಪ್ರಬೋಧಿನೀ, ಮೋಕ್ಷದಾ, ಪೌಶಾ ಪುತ್ರದಾ, ಜಯ, ಆಮಲಕೀ, ಪದ್ಮಿನೀ ಹಾಗೂ ಕೃಷ್ಣ ಪಕ್ಷದಲ್ಲಿ ವರೂಥಿನಿ, ಅಪರಾ ಯೋಗೀನಿ, ಕಾಮಿಕಾ, ಅಜ, ಇಂದಿರಾ, ರಮಾ, ಉತ್ಪತ್ತಿ, ಸಫಲಾ, ಷಟಿಲಾ, ವಿಜಯಾ, ಪಾಪಮೋಚನೀ, ಪರಮ ಹೀಗೆ ಮಾರ್ಚ್- ಎಪ್ರಿಲ್ ತಿಂಗಳಿನಿಂದ ಎರಡರಂತೆ ವರ್ಷದಲ್ಲಿ ಒಟ್ಟು 24 ಏಕಾದಶಿ ವ್ರತಾಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಅಧಿಕ ಮಾಸದಲ್ಲಿಇದು ಪ್ರತಿ 2 ಅಥವಾ 3 ವರ್ಷಗಳಿಗೊಮ್ಮೆ ಮಾತ್ರ ಬರುತ್ತದೆ.
ಅಧಿಕ ಮಾಸದಲ್ಲಿ ಬರುವ ಏಕಾದಶಿಯು ಸಾಮಾನ್ಯವಾಗಿ ಆಷಾಢ ತಿಂಗಳಲ್ಲಿ ಅಂದರೆ ಜೂನ್ ಅಥವಾ ಜುಲೈನಲ್ಲಿ ಬರುವುದರಿಂದ ಇದನ್ನು “ಆಷಾಢ ಏಕಾದಶಿ’ ಎಂದೇ ಕರೆಯಲಾಗುತ್ತದೆ. ಆದರೆ ಈ ಬಾರಿ ಅಧಿಕ ಮಾಸ ಅಂದರೆ ಏಕಾದಶಿ ವಿಶೇಷವಾಗಿ ಪದ್ಮಿನಿ ಏಕಾದಶಿ ಎನ್ನುತ್ತಾರೆ. ಈ ಹೆಸರು ಬರಲು ಒಂದು ಕಥೆಯೂ ಇದೆ.
ಸ್ಕಾಂದ ಪುರಾಣದಲ್ಲಿ ಹೇಳಿರುವ ಪ್ರಕಾರ ಯುಧಿಷ್ಠಿರನಿಗೆ ಶ್ರೀಕೃಷ್ಣನು ಈ ಏಕಾದಶಿಯ ವಿಶೇಷತೆಯನ್ನು ಹೇಳುತ್ತಾನೆ. ರಾಜ ಕಾರ್ತವೀರ್ಯನ ರಾಣಿಯಾದ ಪದ್ಮಿನಿಯು ಮೊದಲು ಈ ಏಕಾದಶಿಯ ಬಗ್ಗೆ ತಿಳಿದು ಸಂಪೂರ್ಣ ಭಕ್ತಿಭಾವದಿಂದ ವ್ರತಾಚರಣೆ ಮಾಡುತ್ತಾಳೆ. ಹಿಂದಿನ ಜನ್ಮದ ಪಾಪಕರ್ಮಗಳಿಂದ ಮುಕ್ತಳಾಗಿ ವೈಕುಂಠದಲ್ಲಿ ಸ್ಥಾನ ಪಡೆಯುತ್ತಾಳೆ.
ಹೀಗಾಗಿ ಅಧಿಕ ಮಾಸದಲ್ಲಿ ಬರುವ ಈ ಏಕಾದಶಿಗೆ ಆಕೆಯ ಹೆಸರನ್ನು ಇಡಲಾಗಿದೆ ಶ್ರೀ ಸ್ವಾಮಿಗೆ ಪಂಚಾಂಮೃತ ಅಭಿಷೇಕ ವಿಶೇಷ ಅಲಂಕಾರ ಮತ್ತು ಸಾಯಂಕಾಲ ವಿಷ್ಣು ಸಹರ್ಸನಾಮ ಪಾರಾಯಣ ವನ್ನ ಏರ್ಪಡಿಸುತ್ತೇವೆ ಈ ದಿವಸ ಉಪವಾಸವನ್ನು ಆಚರಿಸುವುದರಿಂದ ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಸಿಗುತ್ತದೆ. ದೇವಶಯನಿ ಏಕಾದಶಿ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಧಾರ್ಮಿಕ ನಂಬಿಕೆಗಳ ಪ್ರಕಾರ,ಏಕಾದಶಿಯಂದು ಉಪವಾಸ ಮಾಡುವುದು ಮರಣಾನಂತರ ಮೋಕ್ಷವನ್ನು ನೀಡುತ್ತದೆ.ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ರೈ ಬಂಧಿಸಿದ ಲೋಕಾ ಅಧಿಕಾರಿಗಳು
ಈ ಕಾರ್ಯಕ್ರಮವನ್ನ ವಂಶಪಾರಂಪರ್ಯವಾಗಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಗೌತಮ್ ಜೋಷಿ ಹಾಗೂ ದೇವಸ್ಥಾನದ ದರ್ಮದರ್ಶಿ ಶ್ರೀ ಕೃಷ್ಣಕುಮಾರ ಕುಲಕರ್ಣಿಯವರು ಹಾಗೂ ಸಮಸ್ತ ಭಕ್ತಮಹಾಶಯರೆಲ್ಲರೂ ಎಲ್ಲಾ ಕಾರ್ಯಕ್ರಮವನ್ನ ನಡೆಸಿಕೊಂಡು ಬರುತ್ತಿದ್ದಾರೆ.
- ಆರ್.ಬಿ.ಐ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ
- ನಟ ದರ್ಶನ್ಗೆ ಹೈಕೋರ್ಟ್ ಮಧ್ಯಂತರ ಜಾಮೀನು ವಿಸ್ತರಣೆ: ಬಿಗ್ ರಿಲೀಫ್
- ಪ್ರೊ.ವಿ.ಕೆ.ನಟರಾಜ್ ನಿಧನ
- ತುಮಕೂರು ಸಿದ್ದಗಂಗಾ ಮಠದ ಆವರಣದಲ್ಲಿ ಚಿರತೆ
- ಮನೆಯಲ್ಲೇ ಬಾಂಬ್ ತಯಾರಿಕೆ ವೇಳೆ ಸ್ಫೋಟ: ಮೂವರು ದುರ್ಮರಣ
- ‘KEA’ ಸೀಟ್ ಬ್ಲಾಕಿಂಗ್ ಹಗರಣ: ಬೆಂಗಳೂರಿನ ಮೂರು ಪ್ರಮುಖ ಕಾಲೇಜುಗಳಿಗೆ ನೋಟಿಸ್ ಜಾರಿ
More Stories
” ಕರ್ಮ ರಿಟರ್ನ್ಸ್ ” ಅಂದ್ರೆ ಇಷ್ಟೇ ನೋಡಿ…..
ಸುಬ್ರಹ್ಮಣ್ಯ ಷಷ್ಠಿ
ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ (ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಕ್ಷೇತ್ರ ಪರಿಚಯ )