Categories: Main News

ನಂಬಿದ ಮೌಲ್ಯಗಳಲ್ಲಿ ಕನಿಷ್ಠ ಶೇ 50 ರಷ್ಟಾದರೂ ಜೀವನದಲ್ಲಿ ಅಳವಡಿಸಿಕೊಂಡರೆ ?

ಸಾಮಾನ್ಯವಾಗಿ ಮತ್ತು ಸಹಜವಾಗಿ ಜನ ಭಕ್ತಿಯಿಂದ ಓದುವುದು, ಗೌರವಿಸುವುದು ಮತ್ತು ನಂಬುವುದು ಪವಿತ್ರ ಗ್ರಂಥಗಳೆಂದು ಭಾವಿಸಲಾದ ರಾಮಾಯಣ ಮಹಾಭಾರತ ವೇದ ಉಪನಿಷತ್ತುಗಳು ಕುರಾನ್ ಬೈಬಲ್ ಗ್ರಂಥಸಾಹಿಬ್ ಇತ್ಯಾದಿಗಳನ್ನು.

ಅದೇ ರೀತಿ ಮನದಾಳದಲ್ಲಿ ಪೂಜಿಸುವುದು ರಾಮ, ಕೃಷ್ಣ, ಶಿವ, ಅಲ್ಲಾ, ಜೀಸಸ್ , ಗುರುನಾನಕ್ ಮುಂತಾದವರನ್ನು.

ಇನ್ನು ಅತ್ಯಂತ ಹೆಚ್ಚು ಗೌರವಿಸುವುದು ಬುಧ್ಧ ಮಹಾವೀರ ದಾಸರು ಆಚಾರ್ಯರು ಸೂಫಿಸಂತರು ಬಸವ ವಿವೇಕಾನಂದ ಗಾಂಧಿ ಅಂಬೇಡ್ಕರ್ ಹಾಗು ಇನ್ನೂ ಅನೇಕರನ್ನು.

ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ, ಶೇಕಡ 95% ಕ್ಕೂ ಹೆಚ್ಚು ಜನ ಈ ಪವಿತ್ರ ಗ್ರಂಥಗಳ ಅಥವಾ ಈ ಮಹಾನ್ ವ್ಯಕ್ತಿಗಳ ಆರಾಧಕರೋ ಅಭಿಮಾನಿಗಳೋ ಅನುಯಾಯಿಗಳೋ ಭಕ್ತರೋ ಆಗಿರುತ್ತಾರೆ.

ಆದರೆ ವಿಪರ್ಯಾಸ ನೋಡಿ……
.
ವಾಸ್ತವ ನೆಲೆಯಲ್ಲಿ
ನಮ್ಮ ದೇಶದ ಸಾಮಾಜಿಕ ಆರ್ಥಿಕ ಮಾನಸಿಕ ಸ್ಥಿತಿ ಈ ಎಲ್ಲಾ ಗ್ರಂಥ ಅಥವಾ ಮಹನೀಯರ ಚಿಂತನೆಗಳಿಗೆ ಹೆಚ್ಚು ಕಡಿಮೆ ವಿರುಧ್ಧ ದಿಕ್ಕಿನಲ್ಲೇ ಇದೆ.

ಆ 95% ಜನ ಒಂದು ವೇಳೆ ತಾವು ನಂಬಿದ ಮೌಲ್ಯಗಳಲ್ಲಿ ಕನಿಷ್ಠ 50% ಆದರೂ ಆಚರಣೆಗಳಲ್ಲಿ ಅಳವಡಿಸಿಕೊಂಡಿದ್ದರೆ
ಬಹುಶಃ ನಾವೆಲ್ಲಾ ಅಪೇಕ್ಷಿಸುವ ಜೀವನ ಪಟ್ಟ ಎಂದೋ ಲಭಿಸುತ್ತಿತ್ತು .

ಹಾಗಾದರೆ ನಾವು ಯಾರನ್ನು, ಯಾವುದನ್ನು ಅನುಸರಿಸುತ್ತಿದ್ದೇವೆ ಮತ್ತು ಯಾವ ಆದರ್ಶಗಳ ಮೇಲೆ ಬದುಕುತ್ತಿದ್ದೇವೆ.
ಈ ಬಗ್ಗೆ ಎಲ್ಲರೂ ಆತ್ಮವಲೋಕನ ಮಾಡಿಕೊಳ್ಳಲೇ ಬೇಕಿದೆ.

ಮೇಲ್ನೋಟಕ್ಕೆ ನನಗೆ ಅನಿಸುವುದು ……

ಆಧ್ಯಾತ್ಮಿಕವಾಗಿ ಶ್ರೀಮಂತ ಮಠಾಧೀಶರುಗಳು, ನಕಲಿ ಬಾಬಾಗಳು, ಸ್ವಯಂ ಘೋಷಿತ ದೇವ ಮಾನವರು, ನಾಮ ಕುಂಕುಮವಿಟ್ಟ ಮಹರ್ಷಿಗಳು, ಕತ್ತಿಗೆ ವಿಚಿತ್ರ ಸರಗಳನ್ನು ಹಾಕಿಕೊಂಡ ಜ್ಯೋತಿಷಿಗಳು ಮುಂತಾದವರನ್ನು.

ಆರ್ಥಿಕವಾಗಿ ಟಾಟಾ, ಬಿರ್ಲಾ, ಅಂಬಾನಿ, ಅದಾನಿ, ಹಿಂದೂಜಾ, ಮಿತ್ತಲ್ ಇತ್ಯಾದಿಗಳನ್ನು.

ರಾಜಕೀಯವಾಗಿ, ಮೋದಿ, ಸಿದ್ದರಾಮಯ್ಯ, ದೇವೇಗೌಡ, ಯಡಿಯೂರಪ್ಪ, ಯೋಗಿ ಆದಿತ್ಯನಾಥ್, ನಿತೀಶ್ ಕುಮಾರ್, ಮಾಯಾವತಿ, ಮಮತಾ ಬ್ಯಾನರ್ಜಿ ಮುಂತಾದ ಅಧಿಕಾರ ಹಿಡಿಯಲು ಯಶಸ್ವಿಯಾದ ನಾಯಕರುಗಳನ್ನು.

ಸಾಮಾಜಿಕವಾಗಿ ಮತ್ತು ಜೀವನ ಶೈಲಿಗೆ ರಜನೀಕಾಂತ್, ಅಮಿತಾಬ್ ಬಚ್ಚನ್, ಶಾರುಕ್, ಸಲ್ಮಾನ್ ಅಮೀರ್ ಖಾನ್ , ಅಕ್ಷಯ್ , ಹೃತಿಕ್, ದರ್ಶನ್, ಸುದೀಪ್, ಪುನೀತ್, ಯಶ್ ಮುಂತಾದ ಸಿನಿಮಾ ನಟರೇ ಹೆಚ್ಚಾಗಿ ಆದರ್ಶಗಳಾಗಿ, ಪ್ರೇರಕರಾಗಿ ಅನುಕರಿಸಲು ಪ್ರಯತ್ನಿಸುತ್ತೇವೆ.

ಬಹುಶಃ ಸಾಮಾನ್ಯರಲ್ಲಿನ ಈ ದ್ವಂದ್ವಗಳೇ ನಮ್ಮ ಇಂದಿನ ಸಾಮಾಜಿಕ ಮಾನಸಿಕ ಸ್ಥಿತಿಗೆ ಕಾರಣವಿರಬಹುದೆ?

ಹೇಳಲು ಕೇಳಲು ಮಹಾನ್ ವ್ಯಕ್ತಿಗಳು ಗ್ರಂಥಗಳು , ಅನುಸರಿಸಲು ಮಾತ್ರ ಈಗಿನ ಜನಪ್ರಿಯರು.

ವ್ಯಕ್ತಿತ್ವಕ್ಕಿಂತ ವ್ಯಕ್ತಿ ಮತ್ತು ಆತನ ಜನಪ್ರಿಯತೆ ಹಿಂದೆ ಬಿದ್ದು ಆತನ ಹಿನ್ನೆಲೆ ಗಮನಿಸದೆ ಅಂಧಾನುಕರಣೆ ಮಾಡುವುದು ಎಲ್ಲೋ ವ್ಯವಸ್ಥೆಯೇ ದಾರಿ ತಪ್ಪಿದೆ ಎಂದೆನಿಸುತ್ತಿದೆ.

ಹೇಳುವುದು ಮತ್ತು ಮಾಡುವುದು ಒಂದೇ ಆಗಬೇಕು ಹಾಗೂ ಮಾತು ಕೃತಿಯ ನಡುವೆ ಅಂತರ ಕಡಿಮೆಯಾದರೆ
ವ್ಯವಸ್ಥೆ ನಿಯಂತ್ರಣಕ್ಕೆ ಸಿಗಬಹುದು.

ಹಾಗಾಗಲಿ ಎಂಬ ನಿರೀಕ್ಷೆಯೊಂದಿಗೆ ………….

  • ವಿವೇಕಾನಂದ. ಹೆಚ್.ಕೆ.
Team Newsnap
Leave a Comment
Share
Published by
Team Newsnap

Recent Posts

SSLC ಫಲಿತಾಂಶ : ಬಾಲಕಿಯರೇ ಮೇಲುಗೈ ಉಡುಪಿ ಪ್ರಥಮ- ಯಾದಗಿರಿ ಕೊನೆ

ಎಸ್ಎಸ್ಎಲ್ ಸಿ 2024ರ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಉಡುಪಿಗೆ ಪ್ರಥಮ ಸ್ಥಾನ ಲಭ್ಯವಾಗಿದೆ.8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ… Read More

May 9, 2024

ರೇವಣ್ಣ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ : 4567 ಖೈದಿ ಸಂಖ್ಯೆ ನೀಡಿಕೆ

ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಹೆಚ್.… Read More

May 8, 2024

SSLC ಫಲಿತಾಂಶ ಪರಿಶೀಲಿಸಲು ಸುಲಭ ಹಂತಗಳು : ವಿವರ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ಈಜು ಕಲಿಯಲು ಹೋದ 10 ವರ್ಷದ ಬಾಲಕ ನೀರುಪಾಲು

ರಾಯಚೂರು: ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ನಡೆದಿದೆ. ವಿನಾಯಕ (10) ಜೇಗರ್‌ಕಲ್ ಮಲ್ಲಾಪೂರು… Read More

May 8, 2024

ನಾಳೆ ( May 9 ) SSLC ಫಲಿತಾಂಶ ಪ್ರಕಟ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ರಾಜ್ಯದ ಎರಡೂ ಹಂತದ ಮತದಾನದ ವಿವರ : ಮಂಡ್ಯ ಪ್ರಥಮ – ಬೆಂಗಳೂರು ದಕ್ಷಿಣ ಕೊನೆ

ಬೆಂಗಳೂರು : ರಾಜ್ಯದಲ್ಲಿ ನಡೆದ ಎರಡು ಹಂತದ ಚುನಾವಣೆಯಲ್ಲಿ 28 ಕ್ಷೇತ್ರಗಳ ಮತದಾನ ಸಮಗ್ರ ವಿವರ. Join WhatsApp Group… Read More

May 8, 2024