December 22, 2024

Newsnap Kannada

The World at your finger tips!

weightlifting,sports,gold

Weightlifter 'Achinta Sheuli' brought another gold to India

ವೈಟ್‍ಲಿಫ್ಟರ್ ‘ಅಚಿಂತಾ ಶೆಯುಲಿ’ ಭಾರತಕ್ಕೆ ತಂದ ಮತ್ತೊಂದು ಚಿನ್ನ

Spread the love

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಾರತದ ವೈಟ್‍ಲಿಫ್ಟರ್ ಅಚಿಂತಾ ಶೆಯುಲಿ ಅವರು ಚಿನ್ನದ ಪದಕ ಗೆದ್ದಿದ್ದಾರೆ.

ಭಾರತದ ವೈಟ್‍ಲಿಫ್ಟರ್ ಅಚಿಂತಾ ಶೆಯುಲಿ ಪುರುಷರ 73 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ವಿಜಯಶಾಲಿ ಭಾರತಕ್ಕೆ 3ನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಅಚಿಂತಾ ಶೆಯುಲಿ 143 ಕೆಜಿ ಭಾರ ಎತ್ತುವ ಮೂಲಕ ಅತ್ಯಧಿಕ ವೈಟ್‍ಲಿಫ್ಟ್ ಮಾಡಿದ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.ಇದನ್ನು ಓದಿ –ತೆಲಗು ಸೆಟ್ ನಲ್ಲಿ ಕನ್ನಡ ಕಿರುತೆರೆ ನಟ ಚಂದನ್ ಗೆ ಕಪಾಳಮೋಕ್ಷ

ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಅಚಿಂತಾ ಶೆಯುಲಿ ಅವರಿಗೆ ಶುಭಾಕೋರಿದ್ದಾರೆ. ನಮ್ಮ ತಂಡವು ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಹೊರಡುವ ಮೊದಲು, ನಾನು ಅಚಿಂತಾ ಶೆಯುಲಿ ಅವರೊಂದಿಗೆ ಮಾತನಾಡಿದ್ದೆ. ಅವರ ತಾಯಿ ಮತ್ತು ಸಹೋದರರಿಂದ ಅವರು ಪಡೆದ ಬೆಂಬಲದ ಬಗ್ಗೆ ನಾವು ಚರ್ಚಿಸಿದ್ದೇವೆ.

ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 22 ಚಿನ್ನ, 13 ಬೆಳ್ಳಿ ಹಾಗೂ 17 ಕಂಚಿನ ಪದಕ ,ಭಾರತ 6ನೇ ಸ್ಥಾನದಲ್ಲಿದೆ. 3 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕದ ಮೂಲಕ ಒಟ್ಟು 6 ಪದಕ ಬಾಚಿಕೊಂಡಿದೆ .

Copyright © All rights reserved Newsnap | Newsever by AF themes.
error: Content is protected !!