ನಾಳೆ ನಾವೇ ಪೇಸಿಎಂ ಪೋಸ್ಟರ್ ಅಂಟಿಸ್ತೇವೆ: ಡಿಕೆಶಿ ಪ್ರಕಟ

Team Newsnap
1 Min Read

40% ಕಮಿಷನ್ ಸರ್ಕಾರ ಅಂತ ನಾವೆಲ್ಲ ಕ್ಯಾಂಪೇನ್ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಅಧಿಕಾರದಲ್ಲಿ ಇರುವವರು ಇದನ್ನು ಡೈಜೆಸ್ಟ್ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ಅವರು, ಪ್ರಜಾಪ್ರಭುತ್ವದ ಅಡಿ ನಾವು ಕೆಲಸ ಮಾಡ್ತಿದ್ದೇವೆ. 40% ಕಮಿಷನ್ ಸರ್ಕಾರ ಅಂತ ನಾವೆಲ್ಲ ಕ್ಯಾಂಪೇನ್ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ಅಂಟಿಸಿದ್ದೇವೆ. ಇದು ಸತ್ಯ. ಇದನ್ನು ಓದಿ-ಲಂಚದ ಹಣ 2.5 ಲಕ್ಷ ರು ವಾಪಸ್ಸು ನೀಡುವ ವೇಳೆ KIADB ಅಧಿಕಾರಿ, ಭೂಮಾಪಕನ ಬಂಧನ !

ಪೇಸಿಎಂನ್ನು 1.9 ಲಕ್ಷ ಜನ ಇದನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಅದರಲ್ಲಿ 8 ಸಾವಿರ ದೂರು ದಾಖಲಾಗಿದೆ. ಇದು ರಾಜಕಾರಣದ ವ್ಯವಸ್ಥೆ. ನನ್ನ ಸಿದ್ದರಾಮಯ್ಯ ಫೋಟೋ ಕೂಡ ಅವರು ಪೋಸ್ಟರ್ ಮಾಡಿದ್ದಾರೆ ಎಂದರು.

ಸಿಎಂ ಯಾಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ನಾಳೆ ಕಾಂಗ್ರೆಸ್‌ನ ಎಲ್ಲಾ ಎಂಎಲ್ಸಿ, ಎಂಎಲ್‌ಎಗಳು, ನಾವೇ ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ. ಸರ್ಕಾರಿ ಕಟ್ಟಡಗಳ ಮೇಲೆ ಪೋಸ್ಟರ್ ಅಂಟಿಸುತ್ತೇವೆ.

ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದ ಅವರು, ಬಿಜೆಪಿ ಅಧಿಕಾರ ದುರ್ಬಳಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Share This Article
Leave a comment