ನಾವು ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲಿಸುವುದಿಲ್ಲ – ಡಿಕೆಶಿ

Team Newsnap
1 Min Read

ಏನೇ ಅದರೂ ನಾವು ಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆ, ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಪಷ್ಟವಾಗಿ ಹೇಳಿದರು

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ ಅವರು, ಬಿಜೆಪಿ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿ ಹೋರಾಟ ಮಾಡಲಿ. ಮಂತ್ರಿ ನುಡಿಮುತ್ತುಗಳನ್ನಾಡಿದ್ದಾರೆ. ಸಿಎಂ ಬಿಜೆಪಿ ಅಧ್ಯಕ್ಷ, ಅಶೋಕ್ ಅವರ ಎಲ್ಲಾ ಮಾತುಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

ನಾವು ಅವರ ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ಅವರು ನಮ್ಮ ಮೇಲೆ ನೂರು ಕೇಸ್ ಹಾಕಿದರು ನಾವು ಪಾದಯಾತ್ರೆ ಮಾಡೇ ಮಾಡ್ತೀವಿ ಎಂದರು

ಬಿಜೆಪಿ ಅವರ ಸಂಸ್ಕೃತಿ ಅನಾವಣರ ಆಗಿದೆ. ಅವರ ವಿಶ್ವರೂಪ ದರ್ಶನ ಆಗಿದೆ ಮೇಕೆದಾಟು ಪಾದಯಾತ್ರೆ ವಾಪಸ್ ಪಡೆಯಲು ಸುಧಾಕರ್ ಮನವಿ ಮಾಡಿದ್ದಾರೆ. ಬಹಳ ಸಂತೋಷ. ಆದರೆ ನಾವು ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸುವುದಿಲ್ಲ.

ನಾವು ಪಾದಯಾತ್ರೆ ಮಾಡಿದ್ರೆ ಮಾತ್ರ ಕೊರೊನಾ ಬರುತ್ತಾ?. ಜನರಿಗೆ ತೊಂದರೆ ಆಗ್ತಾ ಇದೆ ಮೊದಲು ಅದನ್ನು ನೋಡಿ. ಕೊರೊನಾ ಸ್ಫೋಟವಾದರೆ ಕಾಂಗ್ರೆಸ್ ಹೊಣೆ ಎಂದು ಸುಧಾಕರ್ ಹೇಳಿದ್ದಾರೆ. ಈಗಾಗಲೇ ನಮ್ಮ ವಿರುದ್ಧ ಕೇಸ್ ಕೂಡ ಹಾಕಿದ್ದಾರೆ. ಆದರೆ ಬಿಜೆಪಿಯವರು ಮೆರವಣಿಗೆ ಮಾಡಿದ್ದಾರಲ್ಲ ಏಕೆ ಅವರ ವಿರುದ್ಧ ಕೇಸ್ ಮಾಡಿಲ್ಲ? ಸಿಎಂ ವಿರುದ್ಧ ಕೇಸ್ ಹಾಕಲಿ ಮೊದಲು. ಸುಧಾಕರ್, ಏರ್​ಪೋರ್ಟ್​ನಲ್ಲಿ  ಹರಾಸ್‍ಮೆಂಟ್ ನಡಿತಾ ಇದೆ. ಊಟ ಹೋಟೆಲ್ ಎಲ್ಲಾ ಅಡ್ಜಸ್ಟ್​ಮೆಂಟ್​ ಮಾಡ್ಕೋತಾ ಇದ್ದಾರೆ ಮೊದಲು ಅದನ್ನು ಸರಿಪಡಿಸಲಿ ಎಂದು ವಾಗ್ದಾಳಿ ನಡೆಸಿದರು.

Share This Article
Leave a comment