ಸುಮಲತಾಗೆ ಪ್ರತಿಕ್ರಿಯೆ ನೀಡುವಷ್ಟು ನಾವು ದೊಡ್ಡವರಲ್ಲ -ಎಚ್ ಡಿ ಕೆ

Team Newsnap
1 Min Read

ಮಂಡ್ಯ :

ಸುಮಲತಾ ಅವರು ದೊಡ್ಡ ಪಕ್ಷದ ನಾಯಕಿ. ಅವರ ಬಗ್ಗೆ ಮಾತನಾಡೋ ಮಟ್ಟಕ್ಕೆ ನಾನು ಬೆಳೆದಿಲ್ಲ ಎಂದು ಮಾಜಿ. ಸಿಎಂ ಕುಮಾರ ಸ್ವಾಮಿ ಆದಿಚುಂಚನಗಿರಿಯಲ್ಲಿ ಭಾನುವಾರ ಪ್ರತಿಕ್ರಿಯೆ ನೀಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಕುಮಾರ ಸ್ವಾಮಿ ಜೆಡಿಎಸ್ ಪಕ್ಷದ ನಾಯಕರು ರಾಜ್ಯದಲ್ಲಿ ಅತಂತ್ರ ಫಲಿತಾಂಶಕ್ಕೆ ಕಾದು ಸಿಎಂ ಪಟ್ಟ ಏರಲು ಹವಣಿಸುತ್ತಿದ್ದಾರೆ ಎಂದು ಸುಮಲತಾ ಕುಟುಕಿರುವ ಮಾತುಗಳಿಗೆ ಪ್ರತಿಕ್ರಿಯೆ ನೀಡಿ ಅವರು ಮಾಹಾನ್ ನಾಯಕಿ. ನಾನು ಪ್ರತಿಕ್ರಿಯೆಸುವುದಿಲ್ಲ ಎಂದರು.

ಮಂಡ್ಯದಲ್ಲಿ ಯೋಗಿ ಆದಿತ್ಯ ನಾಥರು ಕರ್ನಾಟಕವನ್ನು ಬುಲ್ಡೋಜರ್ ನಾಡು ಮಾಡುವುದಾಗಿ ಹೇಳಿದ್ದಾರೆ. ನಮ್ಮ ನಾಡು ನಾಥ ಪಂಥದ ನಾಡು. ನಮಗೆ ಯುಪಿ ಮಾಡೆಲ್ ಸರ್ಕಾರ ಬೇಡ. ಕರ್ನಾಟಕ ಮಾದರಿ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಮತ್ತೆ ಜೆಡಿಎಸ್ ನೇತೃತ್ವದ ಬಹುಮತದ ಸರ್ಕಾರ ಅಧಿಕಾರಕ್ಕೆ ಬರಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ಮತದಾನಕ್ಕೂ ಮುನ್ನ ಕಾಲಭೈರವೇಶನನ ಕೃಪೆಗಾಗಿ ನಾನು ಇಂದು ಚುಂಚನಗಿರಿ ಕಾಲಭೈರವನ ಸನ್ನಿಧಾನಕ್ಕೆ ಬಂದಿದ್ದೇನೆ ಎಂದರು.

Share This Article
Leave a comment