ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ, ಆದರೆ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಹಲವು ವರ್ಷಗಳಿಂದ ನಡೆಯುತ್ತಿರುವ ವಿಚಾರ. ಕಾರಣ ಮಾತ್ರ ನನಗೆ ಸ್ಪಷ್ಟವಾಗಿಲ್ಲ. 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಇದನ್ನು ನಿಲ್ಲಿಸಲು ಸಾಧ್ಯವಿಲ್ಲ,” ಎಂದು ಹೇಳಿದರು.
ಅವರು ತಮ್ಮ ಆಕ್ರೋಶವನ್ನು ಹೊರಹಾಕುತ್ತಾ, “ಒಂದು ಕಲ್ಲು ಎಸೆದರೆ, ಅದಕ್ಕೂ ನಾವು ಹೋರಾಟ ಮಾಡುತ್ತೇವೆ. ಕಾನೂನು ಸಚಿವರಿಗೆ ಮಾಹಿತಿ ಕೊರತೆಯಿಲ್ಲ ಎಂದು ನಾನು ಹೇಳಲ್ಲ. ಮೆಟ್ರೋಗೆ ಜಾಗ ಬಳಸಿಕೊಳ್ಳುವಾಗ ಪರಿಹಾರ ನೀಡುತ್ತಾರೆ. ಆದರೆ ನಮ್ಮ ಜಾಗವನ್ನು ಬಳಸಲು ಬಂದಾಗ ಮಾತ್ರ ಅಭಿವೃದ್ಧಿ ವಿಚಾರ ನೆನಪಿಗೆ ಬರುತ್ತದೆ,” ಎಂದು ಕಿಡಿಕಾರಿದರು.
ಅವರು ಮುಂದೆ, “ಈ ಜಾಗಕ್ಕೆ ಸಂಬಂಧಿಸಿದ ಸ್ಟೇ ಆರ್ಡರ್ ಇದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ. ಸಂಪುಟ ಸಭೆಯ ತೀರ್ಮಾನವನ್ನು ನಾನು ನೋಡಿದ್ದೇನೆ. ಸ್ಟೇಟಸ್ ಕೋ ಆದೇಶವೂ ಇದೆ. ಅರಮನೆ ಮೈದಾನದಲ್ಲಿ ಇಷ್ಟು ವರ್ಷ ನಡೆದ ಚಟುವಟಿಕೆಗಳು ಸರ್ಕಾರದ ಗಮನಕ್ಕೆ ಬಂದಿಲ್ಲವೆಂಬುದು ಅಸಂಭವ. ಸರ್ಕಾರಕ್ಕೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇದೆ,” ಎಂದು ಹೇಳಿದರು.
2014ರ ತೀರ್ಪಿನ ಉಲ್ಲೇಖ
ಪ್ರಮೋದಾ ದೇವಿ ಅವರು 2014ರ ತೀರ್ಪನ್ನು ಉಲ್ಲೇಖಿಸುತ್ತಾ, “ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ಐದು ಅಕ್ಕ ತಂಗಿಯರ ಮಾಲೀಕತ್ವ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ರಸ್ತೆ ವಿಸ್ತರಣೆಗೆ ನಮ್ಮ ಜಾಗವನ್ನು ಬಳಸಿಕೊಂಡಿದ್ದಾರೆ. ಬಿಬಿಎಂಪಿ ಕಮಿಷನರ್ ಅವರೇ ಆಫರ್ ಕೊಟ್ಟು, ಟಿಡಿಆರ್ (TDR) ನಿರ್ಧಾರ ಮಾಡಿದ್ದಾರೆ. ಆದರೆ 14 ವರ್ಷಗಳಿಂದ ಟಿಡಿಆರ್ ನೀಡಿಲ್ಲ,” ಎಂದು ಆರೋಪಿಸಿದರು.ಇದನ್ನು ಓದಿ –”ಹೆಣ್ಣು ಬೇಕು!”
ಇದೇ ಸಂದರ್ಭದಲ್ಲಿಯೇ, “ಅರಮನೆ ಜಾಗದಲ್ಲಿ ನಡೆದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಈ ಎಲ್ಲಾ ವಿವರಗಳನ್ನು ತಿಳಿದುಕೊಂಡು ಕೃತ್ಯಗಳನ್ನು ಮಾಡಿದೆ,” ಎಂದು ಅವರು ಸರ್ಕಾರದ ನಡೆ ಕುರಿತು ಪ್ರಶ್ನೆ ಎತ್ತಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು