ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಪಾಟೀಲ್ ಮಾತ್ರ ಹಣ ಹಾಕಿಲ್ಲ. ನಾವು ಹೂಡಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇವೆ ಎಂದು ಸಂತೋಷ್ ಕಡೆಯಿಂದ ತುಂಡು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ರಾಜು ಜಾಧವ್ ಹೇಳಿದರು.
ಗೋಕಾಕ್‍ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಾಜು ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್ ಮತ್ತು ಸಂತೋಷ್ ನಮಗೆ ಕೆಲಸ ಮಾಡಿ ಅಂತಾ ಹೇಳಿದ್ದರು. ಈ ಪ್ರಕಾರ ನಾವು ಕೆಲಸ ಮಾಡಿದ್ದೇವೆ. ನಾವು ವರ್ಕ್ ಆರ್ಡರ್ ಕೇಳಿದಾಗ ನನ್ನ ಬಳಿ ವರ್ಕ್ ಆರ್ಡರ್ ಇದೆ ಅಂತಾ ಹೇಳಿದ್ದಲ್ಲದೇ ನೀವು ಕಾಳಜಿ ಮಾಡಬೇಡಿ ಕೆಲಸ ಮಾಡಿ ಅಂತಾ ಹೇಳಿದ್ದರು. ನಾವು ಯಾರು ಕೂಡ ಈಶ್ವರಪ್ಪ ಅವರನ್ನ ಭೇಟಿಯಾಗಿಲ್ಲ ಎಂದರು.
ನಾನು ಒಬ್ಬನೇ 27 ಲಕ್ಷ ರೂಪಾಯಿ ಕಾಮಗಾರಿ ಮಾಡಿದ್ದೇನೆ. ನನ್ನ ಜೊತೆಗೆ ಹನ್ನೆರಡು ಜನ ತಮ್ಮ ಸ್ವಂತ ಹಣ ಹಾಕಿ ಕಾಮಗಾರಿ ಮಾಡಿದ್ದಾರೆ. ನಾವು ಹಣ ಹಾಕಿ ಕೆಲಸ ಮಾಡಿದ್ದಕ್ಕೆ ಸಂತೋಷ್ ಹಣ ಹಾಕಿರುವುದಾಗಿ ಹೇಳಿರಬಹುದು ಎಂದು ತಿಳಿಸಿದ್ದಾರೆ.
ಇದಕ್ಕೂ ಮುಂಚೆ ಗೋಕಾಕ್‍ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನ ಗೌಪ್ಯವಾಗಿ ಭೇಟಿಯಾಗಿದ್ದರು. ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಕಡೆಯಿಂದ ತುಂಡು ಗುತ್ತಿಗೆದಾರಿಕೆ ಪಡೆದಿದ್ದ ಹನ್ನೆರಡು ಜನ ಗುತ್ತಿಗೆದಾರರು ರಮೇಶ್ ಜಾರಕಿಹೊಳಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ