ಇಂದು ರಾತ್ರಿಯಿಂದಲೇ ಕೆ ಆರ್ ಎಸ್ ಆಣೆಕಟ್ಟೆಯಿಂದ ನದಿ- ನಾಲೆಗಳಿಗೆ ನೀರು ಬಿಡುಗಡೆ

Team Newsnap
1 Min Read

ಮಂಡ್ಯ : ಕೃಷ್ಣರಾಜಸಾಗರ ಜಲಾಶಯದಿಂದ ನದಿ ಮತ್ತು ನಾಲೆಗಳಿಗೆ ನೀರು ಬಿಡಲು ನಿರ್ಧರಿಸಲಾಗಿದೆ.

ಕಾವೇರಿ ನೀರಾವರಿ ನಿಗಮ ವು ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆಯು ಜುಲೈ ಪ್ರಾರಂಭವಾಗಿದೆ ಮಳೆಯ ಪ್ರಮಾಣ ತುಂಬಾ ಕಡಿಮೆ ಇರುವುದರಿಂದ ಕೃಷ್ಣರಾಜಸಾಗರ ಜಲಾಶಯದಲ್ಲಿ ಒಳಹರಿವು ಕ್ಷೀಣಿಸಿರುತ್ತದೆ.

ಜಲಾಶಯದಲ್ಲಿ ನೀರಿನ ಸಂಗ್ರಹಣೆ ಶೇಕಡಾ 32.10 ರಷ್ಟು ಮಾತ್ರ ಇರುತ್ತದೆ ಎಂದಿದೆ.

ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟು 204 ಸಂಖ್ಯೆಯ ಕೆರೆಗಳಿವೆ ಇವುಗಳ ಸಂಗ್ರಹಣಾ ಸಾಮರ್ಥ್ಯ 5.8 ಟಿ.ಎಂ.ಸಿ. ಇರುತ್ತದೆ. ಬಹುತೇಕ ಕೆರೆಗಳು ಖಾಲಿ ಇವೆ ಶೇ. 20 ಕ್ಕಿಂತಲೂ ಕಡಿಮೆ ನೀರಿನ ಸಂಗ್ರಹಣೆ ಇರುತ್ತದೆ. ಆದುದರಿಂದ, ಮೈಸೂರು, ಮಂಡ್ಯ ರಾಮನಗರ ಮತ್ತು ಬೆಂಗಳೂರು ಹಾಗೂ ಇತರೆ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆ ಕಟ್ಟೆ ತುಂಬಿಸಲು ನಾಲೆಗಳು ಮತ್ತು ನದಿಗಳ ಮುಖಾಂತರ ದಿನಾಂಕ: 21.07.2023 ರಿಂದ ಸುಮಾರು 10 ದಿನಗಳವರೆಗೆ ಮಾತ್ರ ನೀರನ್ನು ಹರಿಸಲು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಿ ನಿರ್ದೇಶಿಸಲಾಗಿರುತ್ತದೆ ಎಂದು ತಿಳಿಸಿದೆ.ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ: ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ತಪ್ಪಿತಸ್ಥ : ಕಾನೂನು ಕ್ರಮಕ್ಕೆ ಸಿಐಡಿ ಶಿಫಾರಸು

ರೈತರು ಹೊಸದಾಗಿ ಯಾವುದೇ ಬೆಳೆಗಳನ್ನು ಹಾಕದೇ, ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಮಾತ್ರ ಮಿತ ಬಳಕೆ ಮಾಡಬೇಕು. ಯಾವುದೇ ಬೆಳೆಗಳನ್ನು ಬೆಳೆದು, ನೀರಿನ ಕೊರತೆಯಿಂದ ಹಾನಿಯಾದಲ್ಲಿ ನೀರಾವರಿ ಇಲಾಖೆ ಹೊಣೆ ಅಲ್ಲ.

Share This Article
Leave a comment