December 27, 2024

Newsnap Kannada

The World at your finger tips!

WhatsApp Image 2022 01 25 at 12.37.08 PM

ಮನೆ ಮನೆಗೆ ನೀರು.. ಮಿಷನ್ ಪಾನಿ ಶಕ್ತಿ ರಾಯಭಾರಿಯಾಗಿ ನಟಿ ಊರ್ವಶಿ ರೌಟೇಲಾ ನೇಮಕ

Spread the love

ಕೇಂದ್ರ ಸರ್ಕಾರ ನಟಿ ಊರ್ವಶಿ ರೌಟೇಲಾರನ್ನು ಮಿಷನ್ ಪಾನಿ ಜಲಶಕ್ತಿ, ಜಲ ಸಂರಕ್ಷಣೆ ಅಭಿಯಾನದ ರಾಯಭಾರಿಯಾಗಿ ನೇಮಕ ಮಾಡಿದೆ.

ನಟಿ ತನ್ನ ಊರ್ವಶಿ ರೌಟೇಲಾ ಫೌಂಡೇಶನ್ ಮೂಲಕ ನೀರಿನ ಬಿಕ್ಕಟ್ಟಿನ ವಿರುದ್ಧ ಹೋರಾಡಿದ್ದಾರೆ.

ತಮ್ಮ ಪೋಷಕರೊಂದಿಗೆ ಸ್ಥಾಪಿಸಿದ ಸಂಸ್ಥೆ ಉತ್ತರಾಖಂಡ್​, ಪೌರಿ, ಗರ್ವಾಲ್ ಮತ್ತು ಹರಿದ್ವಾರದ ನೂರಾರು ಸಮುದಾಯಗಳಿಗೆ ಶುದ್ಧ ಮತ್ತು ಸುರಕ್ಷಿತ ನೀರು ಪಡೆಯಲು ಸಹಾಯ ಮಾಡಿದೆ.

ಈ ಎಲ್ಲಾ ಆಂಶಗಳನ್ನು ಗಮನಿಸಿ, ಕೇಂದ್ರ ಸರ್ಕಾರ ಊರ್ವಶಿಯನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ.

ಮಿಸ್ ಯೂನಿವರ್ಸ್ 2021ರ ತೀರ್ಪುಗಾರರಿಂದ ಆರಂಭಗೊಂಡು ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಜ್ಯೂರಿ ಆಗುವವರೆಗೂ ಕೆಲಸ ಮಾಡಿದ್ದೇನೆ. ನನ್ನ ಜೀವನದಲ್ಲಿ ಈ ಎಲ್ಲಾ ವಿಶ್ವ ದರ್ಜೆಯ ಅವಕಾಶಗಳನ್ನು ಸ್ವೀಕರಿಸುತ್ತಿರುವುದಕ್ಕೆ ಕೃತಜ್ಞನಾಗಿದ್ದೇನೆ.

ಇದೀಗ ಕೇಂದ್ರ ಸರ್ಕಾರ ನನಗೆ ಹೊಸ ಅವಕಾಶವನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖವತ್​ಗೆ ಧನ್ಯವಾದ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!